Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರಾ ಮೇಲ್ದಂಡೆ ಹೋರಾಟ | ಅಸ್ವಸ್ಥ ರೈತನಾಯಕನ ಜೀವ ಉಳಿಸಲು ದೇಣಿಗೆ ಸಂಗ್ರಹ

---Advertisement---

ಮೊಳಕಾಲ್ಮೂರು, ಮಾ.09 : ಜಿಲ್ಲೆಯಲ್ಲಿ ಕುಡಿಯುವ ನೀರು, ಅಂತರ್ಜಲ ಸಮಸ್ಯೆ ನಿವಾರಣೆಗೆ ಭದ್ರೆ ನೀರು ಹರಿಸುವಂತೆ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅಸ್ವಸ್ಥಗೊಂಡಿದ್ದು ಅವರ ಚಿಕಿತ್ಸೆಗಾಗಿ ರೈತಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದೇಣಿಗೆ ಸಂಗ್ರಹ ಕೈಗೊಂಡರು.

ಪಟ್ಟಣದಲ್ಲಿ ಸೋಮವಾರ ಮುಷ್ಕರ ನಡೆಸಿದ ವಿವಿಧ ಸಂಘಟನೆ ಪದಾಧಿಕಾರಿಗಳು, ಬಳಿಕ ಬಸ್ ನಿಲ್ದಾಣ ಸೇರಿ ವಿವಿಧೆಡೆ ಸಂಚರಿಸಿ ರೈತನಾಯಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ೧೫ ಲಕ್ಷ ರೂ. ವೆಚ್ಚ ಆಗಲಿದೆ. ನಮಗಾಗಿ ಹೋರಾಟ ನಡೆಸಿದ ರೈತಮುಖಂಡನ ಜೀವ ನಮಗೆಲ್ಲರಿಗೂ ಅತ್ಯಮೂಲ್ಯ. ಆದ್ದರಿಂದ ಪ್ರತಿ ವ್ಯಕ್ತಿ ದೇಣಿಗೆ ನೀಡಿ ಚಿಕಿತ್ಸೆ ವೆಚ್ಚ ಭರಿಸುವ ಮೂಲಕ ಹೋರಾಟಗಾರರಿಗೆ ಜನ ಗೌರವಿಸುತ್ತಾರೆಂಬ ಸಂದೇಶ ನೀಡಬೇಕೆಂದು ಕೋರಿದರು.
ಅಂಗಡಿ-ಮುAಗಟ್ಟುಗಳ ಮಾಲೀಕರು, ಬೀದಿಬದಿ ವ್ಯಾಪಾರಸ್ಥರು ದೇಣಿಗೆ ನೀಡುವ ಜೊತೆಗೆ ಹೋರಾಟದೊಂದಿಗೆ ನಾವು ಸದಾ ಇರುತ್ತೇವೆ ಎಂದು ಮಾತು ಕೊಟ್ಟರು.

 

ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಬಳಿ ಮಾ.೨ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತಿದ್ದ ತಿಪ್ಪೇಸ್ವಾಮಿ ಅವರ ಬಳಿ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸದೆ ನಿರ್ಲಕ್ಷö್ಯ ವಹಿಸುವ ಮೂಲಕ ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೇರ ಹೊಣೆ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಹಿರಿಯೂರು ತಾಲ್ಲೂಕಿನಲ್ಲಿ ಜವಗೊಂಡನಹಳ್ಳಿ ಜನರಿಗೆ ಕುಡಿಯುವ ನೀರು, ಗಾಯತ್ರಿ ಜಲಾಯಶಕ್ಕೆ ನೀರು ಹರಿಸುವುದು, ವಿವಿ ಸಾಗರಕ್ಕೆ ೧೦ ಟಿಎಂಸಿ ಅಡಿ ನೀರು ಭದ್ರೆ ನೀರು ಮೀಸಲು ಹೀಗೆ ವಿವಿಧ ಚಳವಳಿಯ ನೇತೃತ್ವ ವಹಿಸಿದ್ದರು. ತಮ್ಮ ನಿಷ್ಠೂರತೆ, ಬಿರುಸು ಮಾತುಗಳಿಂದ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದರು. ಇಂತಹ ನಾಯಕ ಡಿಸಿ ಕಚೇರಿ ಬಳಿ ಉಪವಾಸ ಕುಳಿತ ಸಂದರ್ಭ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸುವ ಕೆಲಸ ಮಾಡದ ಜಿಲ್ಲಾಧಿಕಾರಿ, ಜಿಲ್ಲಾ ಸಚಿವರು, ಇತರೆ ಜನಪ್ರತಿನಿಧಿಗಳ ನಡೆ ಜೀವ ವಿರೋಧಿ ಆಗಿದೆ ಎಂದು ದೂರಿದರು.

 

ತಮ್ಮ ಕಚೇರಿ ಅತ್ಯಂತ ಸಮೀಪವೇ ಐದು ದಿನಗಳಿಂದ ಉಪವಾಸ ಕುಳಿತಿದ್ದ ರೈತರ ಆರೋಗ್ಯ ವಿಚಾರಿಸುವ, ಆರೋಗ್ಯ ತಪಾಸಣೆ ನಡೆಸುವ, ಪೊಲೀಸ್ ರಕ್ಷಣೆ ಒದಗಿಸುವ ಹೀಗೆ ವಿವಿಧ ಕರ್ತವ್ಯ ಲೋಪ ಮಾಡುವ ಮೂಲಕ ಜಿಲ್ಲಾಧಿಕಾರಿ ವೆಂಕಟೇಶ್, ಚಳವಳಿಗಾರರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಇಂತಹ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

 

ಸಾರ್ವಜನಿಕರ ಹಿತಾಸಕ್ತಿಗಾಗಿ ತಮ್ಮ ವೈಯಕ್ತಿಕ ಬದುಕು ತ್ಯಾಗ ಮಾಡಿ ಹೋರಾಟ ನಡೆಸುವ ಚಳವಳಿಗಾರರನ್ನು ಗೌರವಿಸುವ ಗುಣ ಅಧಿಕಾರಿಗಳು ಮೈಗೂಡಿಸಿಕೊಳ್ಳಬೇಕು. ನೀವುಗಳು ಓಡಾಡುವ ಕಾರು, ವಾಸವಿರುವ ಮನೆ, ನೀವು ತೊಡುವ ಬಟ್ಟೆ ಕೂಡ ಎಲ್ಲವೂ ನಮ್ಮ ತೆರಿಗೆ ಹಣದಲ್ಲಿ ಎಂಬ ಅರಿವು ಇರಬೇಕು. ಆದರೆ, ಅಧಿಕಾರದ ಅಹಂ ತಲೆಗೇರಿಸಿಕೊಂಡು ಹೋರಾಟವನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದ್ದವರು, ಈಗ ಜೀವವೊಂದನ್ನು ಕಳೆಯುವ ಮಟ್ಟಕ್ಕೆ ಹೋಗಿದ್ದಾರೆ. ಇಂತಹ ಅಧಿಕಾರಿಯನ್ನು ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಎಸ್.ಟಿ.ಚಂದ್ರಣ್ಣ, ಗಂಗಣ್ಣ ಮಲಸಮುದ್ರ, ಮಹೇಶ್, ರಾಮಯ್ಯ, ಸಿಪಿಎಂ ಮೂರ್ತಿ, ಮೇಸ್ತಿç ಪಾಪಯ್ಯ, ಬೊಮ್ಮಲಿಂಗನಹಳ್ಳಿ, ರಾಮಾಂಜೀನಿ, ದಾಸಪ್ಪ ಬೊಮ್ಮಲಿಂನಹಳ್ಳಿ, ನರಸಿಂಗ, ನಿಂಗಣ್ಣ, ದೊಡ್ಡಸೂರಯ್ಯ, ಪಿ.ಟಿ.ಹಟ್ಟಿ ಈರಣ್ಣ, ಹೀರೇಹಳ್ಳಿ ತಿಪ್ಪೇಸ್ವಾಮಿ, ಲಕ್ಷö್ಮಣರೆಡ್ಡಿ ಬಿಜಿ ಕೆರೆ ಇತರರು ಪಾಲ್ಗೊಂಡಿದ್ದರು.

ಕೊಲೆ ಯತ್ನ ಕೇಸ್ :
ಹೋರಾಟಗಾರನೊಬ್ಬ ಅನ್ನ-ನೀರು ತೊರೆದು ಉಪವಾಸ ಕುಳಿತ ತಕ್ಷಣವೇ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಬೇಕಿತ್ತು. ಆದರೆ, ಐದು ದಿನಗಳ ಕಾಲವಾದರೂ ಭೇಟಿ ನೀಡಿಲ್ಲವೆಂದರೇ ರೈತಮುಖಂಡ ಉಪವಾಸವಿದ್ದು ಸಾಯಲಿ ಎಂಬ ದುರುದ್ದೇಶ ಇದೆ ಎಂದು ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರಿದರು. ಈಗಲಾದರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಬೇಕು. ಜೊತೆಗೆ ಸರ್ಕಾರಕ್ಕೆ ವರದಿ ನೀಡಿ ಚಿಕಿತ್ಸೆ ವೆಚ್ಚ ಭರಿಸುವ ಪ್ರಯತ್ನ ನಡೆಸಬೇಕು. ಇಲ್ಲದಿದ್ದರೆ ಇದೊಂದು ಕೊಲೆ ಯತ್ನವೆಂದು ಭಾವಿಸಿ ಜಿಲ್ಲಾಧಿಕಾರಿ ದೂರು ದಾಖಲಿಸುವುದು ಅನಿವಾರ್ಯ ಎಂದು ತಿಳಿಸಿದರು.

 

ರೈತಮುಖಂಡ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಭೇಟಿ ನೀಡದಿರುವುದು ಅತ್ಯಂತ ನೋವು ತರಿಸಿದೆ. ಈಗಲಾದರೂ ಭೇಟಿ ನೀಡಿ ಕುಟುಂಬದ ಸದಸ್ಯರಲ್ಲಿ ಆತ್ಮಸ್ಥೆöÊರ್ಯ ತುಂಬುವ ಜೊತೆಗೆ ಚಿಕಿತ್ಸಾ ವೆಚ್ಚ ಭರಿಸುವ ಮಾನವೀಯತೆ ಪ್ರದರ್ಶಿಸಬೇಕು.
– ರವಿಕುಮಾರ್, ರೈತಮುಖಂಡ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...