Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಗೆ ಕಪಾಳಮೋಕ್ಷ ಮಾಡಿದ ವಕೀಲರು..!

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ವಿನಯ್ ಹಾಗೂ ವಕೀಲರ ನಡುವೆ‌ ಕೋರ್ಟ್ ಆವರಣದಲ್ಲಿಯೇ ದೊಡ್ಡ ಗಲಾಟೆಯಾಗಿದೆ. ಈ ಗಲಾಟೆಯ ಬಳಿಕ ವಿನಯ್ ಗೆ ವಕೀಲರಿಂದಾನೇ ಕಪಾಳ ಮೋಕ್ಷವಾಗಿದೆ. ವಿನಯ್ ಸೇರಿದಂತೆ ಕೆಲವರು ಸದ್ಯ ಜೈಲಿನಿಂದ ಹೊರಗಿದ್ದಾರೆ. ವಕೀಲರ ಬದಲಾವಣೆ ವಿಚಾರದಲ್ಲಿ ಇಬ್ಬರಿಗೂ ಜಗಳ ನಡೆದಿದ್ದು, ವಕೀಲರು ಕೋಪಕ್ಕೆ ಕಪಾಳಕ್ಕೆ ಹೊಡೆದಿದ್ದಾರೆ.

ಪ್ರಸ್ತುತ ವಕೀಲ ನಟರಾಜ್ ಅವರು ವಿನಯ್ ಪರ ಲಾಯರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಆದರೆ ಈಗ ವಿನಯ್, ತಮ್ಮ ಪರ ವಕೀಲರನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಇದಿ ನಟರಾಜ್ ಕಿವಿಗೂ ಬಿದ್ದಿದೆ. ಆ ಸಂಬಂಧ ಇಬ್ಬರ ನಡುವೆ ವಾದ ಪ್ರತಿವಾದ ನಡೆದಿದೆ. ಜಗಳ ಅತಿರೇಕಕ್ಕೂ ಹೋಗಿದೆ. ಸ್ಟೋನಿ ಬ್ರೂಕ್ ಮಾಲೀಕ ವಿನಯ್, ವಕೀಲರ ಮೇಲೆ ರೇಗಿದ್ದಾರೆ. ಇದರಿಂದ ಕೋಪಗೊಂಡ ನಟರಾಜ್, ವಿನಯ್ ಕಪಾಳಕ್ಕೆ ಹೊಡೆದಿದ್ದಾರೆ.

 

ಈ ಘಟನೆ ನಡೆದಿರೋದು ಕೋರ್ಟ್ ಕಾರಿಡಾರ್ ನಲ್ಲಿಯೇ. ಒಂದೆರಡು ಬಾರಿ ಅಲ್ಲ ಐದಾರು ಭಾರೀ ಕಪಾಳ ಮೋಕ್ಷ ಮಾಡಿದ್ದಾರೆ. ವಕೀಲರ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇ ಕಪಾಳ ಮೋಕ್ಷಕ್ಕೆ ಕಾರಣವಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಟ್ರಯಲ್ ನಡೀತಾ ಇದೆ. ಈ ಕೇಸ್ ಗೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ನಡೀತಾ ಇದೆ. ಟ್ರಯಲ್ ಎಲ್ಲಾ ಮುಗಿದ ಮೇಲೆ ಆರೋಪಿಗಳ ಆರೋಪ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಿಳಿದು, ಬಳಿಕ ಶಿಕ್ಷೆಯ ಪ್ರಮಾಣವನ್ನ ಘೋಷಣೆ ಮಾಡಲಿದ್ದಾರೆ. ಆದರೆ ಸದ್ಯಕ್ಕೆ ಕೆಲವೊಂದು ಟ್ರಯಲ್ ನಲ್ಲಿ ತನಿಖಾಧಿಕಾರಿಗಳಿಂದಾನೇ ಯಡವಟ್ಟಾಗಿರೋದು ಬೆಳಕಿಗೆ ಬಂದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now