Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿ.ಎಲ್.ವೇಣು ಬರವಣಿಗೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ : ಡಾ.ಬಂಜಗೆರೆ ಜಯಪ್ರಕಾಶ್

Facebook
Twitter
Telegram
WhatsApp

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಜ.23): ಮೊದಲ ತಲೆಮಾರಿನ ಸಾಹಿತಿಗಳ ಕಾಲಘಟ್ಟದಲ್ಲಿ ಬರವಣಿಗೆಯನ್ನು ಆರಂಭಿಸಿದ ಸಾಹಿತಿ ಬಿ.ಎಲ್.ವೇಣು ಬಂಡಾಯದಲ್ಲಿ ಮುಳುಗಿ ಹೋಗದೆ ಐತಿಹಾಸಿಕ ಚಾರಿತ್ರಿಕ ವಸ್ತುಗಳನ್ನಿಟ್ಟುಕೊಂಡು ಬರವಣಿಗೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆಂದು ವಿಮರ್ಶಕ, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ಸೃಷ್ಟಿಸಾಗರ ಪ್ರಕಾಶನ ವತಿಯಿಂದ ನಗರದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಡಾ.ಬಿ.ಎಲ್.ವೇಣುರವರ ದುರ್ಗದ ಬೇಡರ್ದಂಗೆ (1849 ರಲ್ಲಿ ಬ್ರಿಟೀಷರ ವಿರುದ್ದ ನಡೆದ ಸಂಗ್ರಾಮ) ಚಾರಿತ್ರಿಕ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.

ಚಿತ್ರದುರ್ಗದ ವಸ್ತುಗಳನ್ನು ಪ್ರಧಾನವಾಗಿಟ್ಟುಕೊಂಡು ಬಿ.ಎಲ್.ವೇಣುರವರು ಬರೆದಿರುವ ಈ ಕಾದಂಬರಿ ವಿಶಿಷ್ಟವಾಗಿದೆ. ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕೆಳವರ್ಗ, ಶೋಷಿತರನ್ನು ಧಮನಮಾಡುವುದಕ್ಕಾಗಿಯೇ ಇತಿಹಾಸವಿರುವುದು. ಚಿತ್ರದುರ್ಗದ ಪಾಳೆಯಗಾರರ ಬಗ್ಗೆಯೂ ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ. ಟಿಪ್ಪು ಮರಣದ ನಂತರ ಬ್ರಿಟೀಷರ ವಿರುದ್ದ ನೂರಾರು ರೈತ ದಂಗೆಗಳು ನಡೆದವು. ಕರ್ನಾಟಕದ ಯಾವ ಮೂಲೆಗೆ ಹೋದರೂ ಬಂಡಾಯದ ಸರಮಾಲೆಗಳು ಸಿಗುತ್ತವೆ ಎಂದರು.

ಬ್ರಿಟೀಷರ ಗುಲಾಮಗಿರಿ ವಿರುದ್ದ ಸಂಟಕಗಳನ್ನು ಅನುಭವಿಸಿ ದುರ್ಗದ ಬೇಡರು ಸಿಡಿದೆದ್ದರು ಎನ್ನುವುದು ಈ ಕಾದಂಬರಿಯಲ್ಲಿದೆ. ಸಿಂಧೂರ ಲಕ್ಷ್ಮಣ, ಸಂಗೊಳ್ಳಿರಾಯಣ್ಣ, ಇವರುಗಳು ರೈತರ ಸಂಕಟಗಳನ್ನು ಕಂಡು ಬ್ರಿಟೀಷರ ವಿರುದ್ದ ಸಾಕಷ್ಟು ಹೋರಾಡಿದ್ಧಾರೆ. ಏಳು ಬೇಡರ ಹುಡುಗರು ತಂಡ ಕಟ್ಟಿಕೊಂಡು ದೊಡ್ಡೇರಿ ಕಾಡಿನಲ್ಲಿ ಅಡಗಿ ಬ್ರಿಟೀಷರ ವಿರುದ್ದ ದಂಗೆ ಏಳುತ್ತಾರೆಂದರೆ ಅದು ಅಷ್ಟು ಸುಲಭದ ಸಾಹಸವಲ್ಲ ಎನ್ನುವುದನ್ನು ಸಾಹಿತಿ ಬಿ.ಎಲ್.ವೇಣು ತಮ್ಮ ಬಂಡಾಯದ ಬರವಣಿಗೆ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿ ರೋಚಕವಾಗಿದ್ದು, ಓದಿಸಿಕೊಂಡು ಹೋಗುತ್ತದೆ ಎಂದು ಬಣ್ಣಿಸಿದರು.

ಬ್ರಿಟೀಷರ ವಿರುದ್ದ ನಡೆದ ಸ್ಮರಣೀಯ ದಂಗೆಯಲ್ಲಿ ಬೇಡರ ತಂಡ ಪ್ರಾಣಕ್ಕೆ ಅಂಜಿ ಹೆದರಿ ಕುಳಿತುಕೊಳ್ಳಲಿಲ್ಲ. ದಬ್ಬಾಳಿಕೆ, ಗುಲಾಮಗಿರಿತನದ ವಿರುದ್ದ ಸಿಡಿದೆದ್ದರು. ಇಳಿಯವಯಸ್ಸಿನಲ್ಲಿಯೂ ಅವಿರತವಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಬಂಡಾಯ ಸಾಹಿತಿ ಬಿ.ಎಲ್.ವೇಣುರವರಿಂದ ಮತ್ತಷ್ಟು ಕಾದಂಬರಿಗಳು ಹೊರಬರಲಿ ಎಂದು ಬಂಜಗೆರೆ ಜಯಪ್ರಕಾಶ್ ಹಾರೈಸಿದರು.

ವಿಮರ್ಶಕ ಸಾಹಿತಿ ತುಮಕೂರಿನ ಡಾ.ಜಿ.ವಿ.ಆನಂದಮೂರ್ತಿ ಕೃತಿ ಕುರಿತು ಮಾತನಾಡುತ್ತ ಸಾಂಸ್ಕøತಿಕ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ನಿರ್ಭಯವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸಾಹಿತಿ ಬಿ.ಎಲ್.ವೇಣು ಕಾದಂಬರಿಕಾರರು ಹಾಗೂ ವೈಚಾರಿಕ ಚಿಂತಕರೂ ಹೌದು. ಯಾವುದು ಸತ್ಯ, ಯಾವುದು ಅಸತ್ಯ ಎಂದು ತಿಳಿದುಕೊಳ್ಳಲು ಆಗದಿರುವಂತ ಇಂದಿನ ಗೊಂದಲಮಯ ವಾತಾವರಣದಲ್ಲಿ ಬರಹಗಾರರು ಆತಂಕಕ್ಕೊಳಗಾಗಿದ್ದಾರೆ. ಇದು ಬರಹಗಾರರಿಗೊಂದು ಸವಾಲಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.

ಪ್ರಖರ ವಿಚಾರವಾದಿಗಳು ತಪ್ಪನ್ನು ತಪ್ಪು ಎಂದು ನಿರ್ಭೀತಿಯಿಂದ ಹೇಳುವ ಛಾತಿಯಿರುವ ಲೇಖಕರುಗಳಲ್ಲಿ ಬಿ.ಎಲ್.ವೇಣು ಒಬ್ಬರು. ಇತಿಹಾಸವನ್ನು ಕೆದಕುವುದು ಅಷ್ಟು ಸುಲಭವಲ್ಲ. ಇತಿಹಾಸವನ್ನು ಸೃಜನಶೀಲ ಕಲೆಯನ್ನಾಗಿ ಮಾಡುವುದರ ಜೊತೆಗೆ ಸಾಮಾಜಿಕ ಸಾಮರಸ್ಯ ಬೆಸೆಯುವ ಶಕ್ತಿ ವೇಣುರವರಲ್ಲಿದೆ ಎನ್ನುವುದು ಈ ಕಾದಂಬರಿಯನ್ನು ಓದಿದಾಗ ಗೊತ್ತಾಗುತ್ತದೆ. ಎಲ್ಲಿಯೂ ಯಾವ ಜಾತಿ, ಧರ್ಮವನ್ನು ಇಲ್ಲಿ ವಿಭಜನೆ ಮಾಡಿಲ್ಲ. ಕನ್ನಡದ ಜನಪ್ರಿಯ ಸಾಹಿತ್ಯ ಪರಂಪರೆಯಲ್ಲಿ ವೇಣುರವರ ಪಾತ್ರ ಹಿರಿದು. ಐತಿಹಾಸಿಕ ಕಾದಂಬರಿಕಾರರ ಪರಂಪರೆ ಕ್ಷೀಣಿಸುತ್ತಿದೆ. ಗತಕಾಲದ ಇತಿಹಾಸ ಸಮಕಾಲೀನ ಭಾರತ ಎದುರಿಸುತ್ತಿರುವ ಸಾಮಾಜಿಕ, ಧಾರ್ಮಿಕ ಸಂಘರ್ಷಗಳನ್ನು ಬರವಣಿಗೆಯಲ್ಲಿ ಅಡಕಗೊಳಿಸಿದ್ದಾರೆಂದು ಗುಣಗಾನ ಮಾಡಿದರು.

ಬ್ರಿಟೀಷರ ವಸಾಹತುಶಾಹಿ, ವಿರುದ್ದ ವಿಮೋಚನೆಗಾಗಿ ದುರ್ಗದ ಬೇಡರ ತಂಡ ನಡೆಸಿದ ಹೋರಾಟ ಈ ಕೃತಿಯಲ್ಲಿದೆ. ಭಾರತದ ಪುರೋಹಿತಶಾಹಿಗಳ ಕೈಯಿಂದ ಬಿಡುಗಡೆಗೊಳಿಸಿಕೊಳ್ಳುವುದಕ್ಕಾಗಿ ಬಂಡೆದ್ದ ಹೋರಾಟದ ಆಶಯವು ಕೃತಿಯ ಮೂಲ ವಸ್ತುವಾಗಿದೆ. ಇತಿಹಾಸವನ್ನು ಜನಸಾಮಾನ್ಯರ ಕಣ್ಣಿನಿಂದ ನೋಡುವ ಬಹುದೊಡ್ಡ ಕಾದಂಬರಿಕಾರ ಬಿ.ಎಲ್.ವೇಣು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಗತಕಾಲ ಆಧರಿಸಿದ್ದರೂ ವರ್ತಮಾನ ಭಾರತವನ್ನು ಬರವಣಿಗೆ ಕಟ್ಟಿಕೊಟ್ಟಿದೆ. ಸಾಮರಸ್ಯ ಸಮಾಜದ ಪರವಾಗಿದೆ. ರೋಚಕ ಘಟನೆಗಳನ್ನು ಬರವಣಿಗೆ ಮೂಲಕ ನಿರ್ವಹಣೆ ಮಾಡುವ ತಾಕತ್ತು ಇರುವುದು ವೇಣುಗೆ ಮಾತ್ರ ಎಂದು ಪ್ರಶಂಶಿಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮುಖ್ಯ ಅತಿಯಾಗಿ ಮಾತನಾಡಿ ಪಾಳೆಯಗಾರರ ಬಗ್ಗೆ ಅತ್ಯಂತ ರೋಚನ ಕೃತಿಗಳನ್ನು ರಚಿಸಿರುವ ಕಾದಂಬರಿಕಾರ ಡಾ.ಬಿ.ಎಲ್.ವೇಣು ಬಂಡಾಯದ ಮೂಲಕ ಸಮಾಜವನ್ನು ಏಳಿಗೆಯತ್ತ ಕೊಂಡೊಯ್ಯುವ ಮನಸ್ಸುಳ್ಳವರು. 1857 ರಲ್ಲಿ ನಡೆದ ಸಿಪಾಯಿ ದಂಗೆ ಕೂಡ ಬ್ರಿಟೀಷರ ವಿರುದ್ದವೇ ಎನ್ನುವುದನ್ನು ನೆನಪಿಸಿಕೊಂಡರು. ಚಿತ್ರದುರ್ಗದ ಯುವ ಜನತೆ ಇತಿಹಾಸ, ಸಾಹಿತ್ಯ, ಸಂಸ್ಕøತಿ, ಸಂಸ್ಕಾರವನ್ನು ತಿಳಿದುಕೊಳ್ಳಲೇಬೇಕು. ಅದಕ್ಕಾಗಿ ಖ್ಯಾತ ಕಾದಂಬರಿಕಾರಿ ಬಿ.ಎಲ್.ವೇಣುರವರ ಪುಸ್ತಕಗಳನ್ನು ಓದಲೇಬೇಕು. ಇದರಿಂದ ರಾಜರ ಇತಿಹಾಸ, ಆಳ್ವಿಕೆ ತಿಳಿದುಕೊಂಡಂತಾಗುತ್ತದೆ. ಯಾರು ಯಾರಿಗೂ ಗುಲಾಮರಲ್ಲ ಎನ್ನುವ ಸಂದೇಶವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿಕಾರ ಡಾ.ಬಿ.ಎಲ್.ವೇಣು ಮಾತನಾಡಿ ಚಿತ್ರದುರ್ಗದ ಏಳು ಬೇಡರು ತಂಡ ಕಟ್ಟಿ ಬ್ರಿಟೀಷರ ವಿರುದ್ದ ಹೋರಾಡಿದ್ದನ್ನು ಏಕೆ ಬರೆಯಬಾರದು ಎಂದು ಸಾಕಷ್ಟು ಬಾರಿ ನನಗೆ ಅನಿಸಿತು. ಆದರೆ ಕಳೆದ ಎರಡು ವರ್ಷಗಳಿಂದಲೂ ಇಡಿ ವಿಶ್ವವನ್ನೇ ಕಾಡುತ್ತಿರುವ ಕೊರೋನಾದಿಂದ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸುವುದು ಕಷ್ಟವಾಯಿತು. ನನ್ನ ಯಶಸ್ಸಿನ ಹಿಂದೆ ಲಕ್ಷ್ಮಣ ತೆಲಗಾವಿಯಿದ್ದಾರೆ ಎನ್ನುವುದನ್ನು ಸ್ಮರಿಸಿಕೊಂಡ ಡಾ.ಬಿ.ಎಲ್.ವೇಣು ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಚಿತ್ರದುರ್ಗ ಎಲ್ಲಾ ವಿಚಾರದಲ್ಲಿಯೂ ತೀರ ಹಿಂದುಳಿದು ಅಭಿವೃದ್ದಿಯಿಂದ ವಂಚಿತವಾಗಿದೆ.

ಭದ್ರಾ ಮೇಲ್ದಂಡೆ ಇನ್ನು ಪೂರ್ಣಗೊಂಡಿಲ್ಲ, ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಕನಸಾಗಿದೆ. ರಸ್ತೆಗಳು ಸರಿಯಿಲ್ಲ. ಬೀದಿ ದೀಪವಂತು ಕೇಳಬೇಡಿ. ಜನತೆ ಕತ್ತಲೆಯಲ್ಲಿರುತ್ತಾರೆ. ಕುಡಿಯಲು ನೀರಿಲ್ಲವೆಂದರೆ ಯಾರ ವಿರುದ್ದವೂ ಪ್ರತಿಭಟನೆ ಮಾಡಲ್ಲ. ದುರ್ಗಕ್ಕೆ ಮೆಡಿಕಲ್ ಕಾಲೇಜು ಬರದಂತೆ ಪಟ್ಟಭದ್ರಹಿತಾಸಕ್ತಿಗಳು ತಡೆಯುತ್ತಿವೆ. ಎಲ್ಲಿ ನೋಡಿದರೂ ಮಠಗಳು ಮಾತ್ರ ಇವೆ ಎಂದು ಯಾರ ಹೆಸರನ್ನು ಹೇಳದೆ ಕುಟುಕಿದರು.

ದೇವಸ್ಥಾನಗಳ ಗಂಟೆ ಎಲ್ಲಿ ಕೇಳುತ್ತದೋ ಅಲ್ಲಿ ಅಜ್ಞಾನವಿರುತ್ತ, ಶಾಲೆಗಳ ಗಂಟೆ ಕೇಳಿದ ಕಡೆ ಜ್ಞಾನ ಹೆಚ್ಚುತ್ತೆ. ಕೋಟೆಯ ಕಲ್ಲುಗಳು ಒಂದೊಂದೆ ಬೀಳುತ್ತಿವೆ. ಮಠ ಕಟ್ಟಿಕೊಟ್ಟ ಭರಮಣ್ಣನಾಯಕನ ಸಮಾಧಿ ಹಾಳಾಗಿದೆ. ಚಿತ್ರದುರ್ಗ ಬರಪೀಡಿತ ಪ್ರದೇಶವಾಗಿದ್ದರೂ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹುಲ್ಲುಗಾವಲಿದ್ದಂತೆ ಸುಮ್ಮನೆ ಮೇಯಿಕೊಂಡು ಹೋಗುತ್ತಾರೆ. ಕಮೀಷನ್ ರಾಜಕಾರಣಿ, ಅಧಿಕಾರಿಗಳಿದ್ದರೂ ನಮ್ಮ ಜನರಿಗೆ ಇನ್ನು ಪ್ರಜ್ಞೆ ಬಂದಿಲ್ಲದಿರುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಪುಸ್ತಕಗಳನ್ನು ಯಾರು ಓದಲಿ ಬಿಡಲಿ ಬರೆಯುತ್ತೇನೆ. ಪ್ರಶ್ನೆ ಮಾಡುವ ಹವ್ಯಾಸ ಜನ ಬೆಳೆಸಿಕೊಳ್ಳಬೇಕು ಎನ್ನವುದು ನನ್ನ ಆಸೆ. ಬರೆಯುವುದು ನನ್ನ ಕಲೆ, ಬರೆಯದೆ ಬದುಕಲು ಆಗಲ್ಲ. ನನ್ನ ಜೀವನವೇ ಬರವಣಿಗೆ ಎಂದು ಹೇಳಿದರು.

ಇತಿಹಾಸ ಸಂಶೋಧಕ, ಆಯುರ್ವೇದಿಕ್ ವೈದ್ಯ ತುಮಕೂರಿನ ಡಾ.ಬಿ.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಕೃತಿ ಕುರಿತು ಮಾತನಾಡಿದರು.

ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗದ ಜಿಬಿಟಿ ಮೋಹನ್‍ಕುಮಾರ್, ಸೃಷ್ಟಿಸಾಗರ ಪ್ರಕಾಶನದ ಮೇಘ ಗಂಗಾಧರನಾಯ್ಕ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ವೇದಿಕೆಯಲ್ಲಿದ್ದರು.
ಕೋಕಿಲ ರುದ್ರಮುನಿ ಪ್ರಾರ್ಥಿಸಿದರು.

ಮೇಘಗಂಗಾಧರನಾಯ್ಕ ಸ್ವಾಗತಿಸಿದರು. ವಿಮರ್ಶಕ ಪ್ರಾಧ್ಯಾಪಕ ಡಾ.ವಿ.ಬಸವರಾಜ್ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!