ಕಡಿಮೆ ಅವಧಿಯಲ್ಲಿ, ಕಡಿಮೆ ಹೂಡಿಕೆಯಲ್ಲಿ ದೊಡ್ಡ ಮಟ್ಟದ ಆದಾಯ ಗಳಿಸಬೇಕೆ? ಹಾಗಾದರೆ ಜಿರಿಗೆ ಬೆಳೆಯಿರಿ.ಅಡುಗೆ ಮನೆಯ ಈ ಸಾಂಬಾರ ಪದಾರ್ಥ ಈಗ ರೈತರ ಪಾಲಿಗೆ ವರದಾನವಾಗಿದೆ. ಜೀರಿಗೆ ಇಲ್ಲದ ಭಾರತೀಯ ಅಡುಗೆ ಮನೆಯಿಲ್ಲ. ಜಿರಿಗೆ ಕೇವಲ ಮಸಾಲೆ ಪದಾರ್ಥವಲ, ಔಷಧೀಯ ಗುಣವನ್ನು ಹೊಂದಿದೆ ಹೊಂದಿದೆ.
ಪ್ರಸ್ತುತ ದೇಶದ ಒಟ್ಟು ಜೀರಿಗೆ ಉತ್ಪಾದನೆಯಲ್ಲಿ ಶೇ. 80ರಷ್ಟು ಪಾಲು ಗುಜರಾತ್ ಮತ್ತು ರಾಜಸ್ಥಾನದ್ದಾಗಿದೆ.ಜೀರಿಗೆಗೆ ಮರಳು ಮಿಶ್ರಿತ ಲೋಮಿ ಮಣ್ಣು (Loamy Soil) ಶ್ರೇಷ್ಠ. ಜಿರಿಗೆ ಬೆಳೆಯಲು ಅಕ್ಟೋಬರ್ ಅಂತ್ಯದಿಂದ ಡಿಸೆಂಬರ್ ಮೊದಲ ವಾರದವರೆಗೆ ಜಿರಿಗೆ ಬೆಳೆಯಲು ಒಳ್ಳೆಯ ಕಾಲ.
ಬಿತ್ತನೆಗೆ 15 ದಿನ ಮೊದಲೇ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಬಿಸಿಲಿಗೆ ಒಡ್ಡಬೇಕು. ನಂತರ ಕೊಟ್ಟಿಗೆ ಗೊಬ್ಬರ ಅಥವಾ ಕಂಪೋಸ್ಟ್ ಉಪಯೋಗಿಸಬೇಕು.ತುಂತುರು ನೀರಾವರಿ (Sprinkler) ಪದ್ಧತಿ ಜೀರಿಗೆಗೆ ಅತ್ಯಂತ ಸೂಕ್ತ.ಜೀರಿಗೆ ಆರಂಭದಲ್ಲಿ ನಿಧಾನವಾಗಿ ಬೆಳೆಯುವುದರಿಂದ ಕೀಟಗಳ ಕಾಟ ಹೆಚ್ಚು. ಬಿತ್ತನೆ ಮಾಡಿದ ಎರಡು ದಿನದೊಳಗೆ ಪೆಂಡಿಮೆಥಾಲಿನ್ (Pendimethalin) ಸಿಂಪಡಿಸುವುದು ಉತ್ತಮ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











