Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿನ್ನ ಖರೀದಿ- ಮಾರಾಟ ಮಾಡುವ ಮೊದಲು ಈ ತೆರಿಗೆ ನಿಯಮ ತಿಳಿದುಕೊಳ್ಳಿ

---Advertisement---

ಚಿನ್ನ ಕೊಳ್ಳುವಾಗ, ಮಾರುವಾಗ ಯಾವೆಲ್ಲಾ ತೆರಿಗೆ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ನೀವು ಚಿನ್ನವನ್ನು ಆಭರಣ, ಡಿಜಿಟಲ್ ರೂಪ ಅಥವಾ ಬಾಂಡ್‌ಗಳ ರೂಪದಲ್ಲಿ ಇಟ್ಟುಕೊಂಡಿದ್ದರೆ, ಯಾವೆಲ್ಲಾ ತೆರಿಗೆ ನಿಯಮಗಳು ಅನ್ವಯವಾಗುತ್ತದೆ ಗೊತ್ತೆ ?

ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ, ಅದರ ಮೇಲೆ ಶೇ. 3ರಷ್ಟು ಜಿಎಸ್‌ಟಿ ಪಾವತಿಸಬೇಕು. ಅಷ್ಟೇ ಅಲ್ಲ, ಆಭರಣದ ಮೇಕಿಂಗ್ ಚಾರ್ಜ್ (ತಯಾರಿಕಾ ಶುಲ್ಕ) ಮೇಲೆ ಶೇ. 5ರಷ್ಟು ಜಿಎಸ್‌ಟಿ ಪ್ರತ್ಯೇಕವಾಗಿ ಬೀಳುತ್ತದೆ.

ಗೋಲ್ಡ್ ಇಟಿಎಫ್ 12 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು ತೆರಿಗೆ. 12 ತಿಂಗಳೊಳಗೆ ಮಾರಿದರೆ ನಿಮ್ಮ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಕಟ್ಟಬೇಕು. ಗೋಲ್ಡ್ ಮ್ಯೂಚುವಲ್ ಫಂಡ್ 24 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು, ಅದಕ್ಕಿಂತ ಕಡಿಮೆ ಅವಧಿಯಾದರೆ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಪಾವತಿಸಬೇಕು.

ಹತ್ತಿರದ ಸಂಬಂಧಿಕರು ಉಡುಗೊರೆಯಾಗಿ ಕೊಟ್ಟ ಚಿನ್ನಕ್ಕೆ ಯಾವುದೇ ತೆರಿಗೆ ಇಲ್ಲ.ಇನ್ನು, ಮರಣ ಅಥವಾ ವಿಲ್ ಮೂಲಕ ಬಂದ ಚಿನ್ನಕ್ಕೆ ಸದ್ಯಕ್ಕೆ ಯಾವುದೇ ತೆರಿಗೆ ಇಲ್ಲ.ಆದರೆ, ಸಂಬಂಧಿಕರಲ್ಲದವರಿಂದ ಒಂದೇ ವರ್ಷದಲ್ಲಿ ₹50,000ಕ್ಕಿಂತ ಹೆಚ್ಚು ಮೌಲ್ಯದ ಚಿನ್ನ ಉಡುಗೊರೆಯಾಗಿ ಬಂದರೆ, ಅದನ್ನು ‘ಇತರೆ ಮೂಲಗಳಿಂದ ಬಂದ ಆದಾಯ’ ಎಂದು ಪರಿಗಣಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಕಟ್ಟಬೇಕು.ನೀವು ಗೋಲ್ಡ್ ಇಟಿಎಫ್ (Exchange Traded Funds), ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಅಥವಾ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು (SGB) ಖರೀದಿಸಿದರೆ ಜಿಎಸ್‌ಟಿ ಕಟ್ಟಬೇಕಾಗಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾಗಿ ಡಾ. ಕೃಷ್ಣಪ್ಪ ಆಯ್ಕೆ

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡುವಂತೆ ನೀರಾವರಿ ಹೋರಾಟ ಸಮಿತಿ ಮನವಿ : ಅನುದಾನ ಬಿಡುಗಡೆಗೆ ಆಗ್ರಹಿಸಿ ಸಂಸದರಿಗೆ ಪತ್ರ

ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಯ ಮುನ್ಸೂಚನೆಯಾಗಿರಬಹುದು!

ಆಸ್ಪತ್ರೆಯಲ್ಲಿ ಲಂಚ, ಕೃಷಿ ಹೊಂಡ ಗೋಲ್ ಮಾಲ್ : ಅಧಿಕಾರಿಗಳ ಬೆಂಡೆತ್ತಿದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನ್ಮದಿನ : ಚಿತ್ರದುರ್ಗದಲ್ಲಿ ಕೇಕ್ ಕತ್ತರಿಸಿ ಶುಭಹಾರೈಸಿದ ಕಾಂಗ್ರೆಸ್ ಮುಖಂಡರು

ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ಡಾ.ಸಿ.ಶಿವಲಿಂಗಪ್ಪ ಒತ್ತಾಯ