Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಮನೆಗೆ ಬಂತು 2.8 ಕೋಟಿ ರೂ ಬೆಲೆಯ ಹೊಸ ಕಾರು: ಅಧಿಕಾರ ಬದಲಾವಣೆ ಸೂಚನೆಯೇ?

---Advertisement---

ಇತ್ತೀಚಿನ ಕೆಲ ವರ್ಷಗಳಲ್ಲಿ ಸಿಎಂ ಹೊಸ ಕಾರು ಖರೀದಿಸುವುದು, ಬಳಕೆ ಮಾಡುವುದು ಸಾಮಾನ್ಯವಾಗಿದೆ. ಈಗ ಶಿವಕುಮಾರ್ ಮನೆಗೆ ಬಂತು 2.8 ಕೋಟಿ ಬೆಲೆಯ ಲೆಕ್ಸಸ್ ಕಾರು ಬಂದಿದೆ. ಡಿಕೆ ಶಿವಕುಮಾರ್ ಬಳಿ ಹಲವು ಕಾರುಗಳಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಕಾರು ಸೇರಿಕೊಂಡಿದೆ. ಈ ಬಾರಿ ಡಿಕೆ ಶಿವಕುಮಾರ್ ಬರೋಬ್ಬರಿ 2.8 ಕೋಟಿ ರೂಪಾಯಿ ಬೆಲೆಯ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ.

ಡಿಕೆ ಶಿವಕುಮಾರ್ ಖರೀದಿಸಿದ ಲೆಕ್ಸಸ್ LM 350h ಕಾರಿನ ಬೆಲೆ 2.8 ಕೋಟಿ ರೂಪಾಯಿ. ಇದು 7 ಸೀಟಿನ ಕಾರಾಗಿದ್ದು,ಬಿಳಿ ಬಣ್ಣದ ಲೆಕ್ಸಸ್ LM 350h ಕಾರು ಇಂದು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಗೆ ಡೆಲಿವರಿಯಾಗಿದೆ. ಖರೀದಿಸಿದ ಲೆಕ್ಸಸ್ ಕಾರಿಗೆ KA 03 NZ 6666 ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ ಡಿ.ಕೆ.ಶಿ.

ಈ ಹಿಂದೆ  ಕೆಲ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಹೊಸ ಕಾರು ಖರೀದಿಸಿದ್ದಾರೆ. ಡಿಕೆ ಶಿವಕುಮಾರ್  ಐಷಾರಾಮಿ  ಲೆಕ್ಸಸ್ ಕಾರು ಖರೀದಿಸಿದ ಹಿಂದೆ ಅಧಿಕಾರ ಬದಲಾವಣೆಯ ಸೂಚನೆ ಇದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now