ಎಲ್ಲರೂ ಬಾಯಿ ಮುಚ್ಚಿಕೊಂಡು ಇರಿ : ದೆಹಲಿಗೆ ಹೋಗುವ ಮುನ್ನ ಡಿಕೆಶಿ ವಾರ್ನಿಂಗ್

suddionenews
1 Min Read

ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತ ಅವರ ಸಂಗಡಿಗರು ಕೂಡ ಆಸೆ ಪಡ್ತಾ ಇದ್ದಾರೆ. ಅದಕ್ಕಾಗಿಯೇ ಸಾಕಷ್ಟು ಸಲ ಧ್ವನಿ ಎತ್ತಿದ್ದಾರೆ, ಘೋಷಣೆ ಕೂಗಿದ್ದಾರೆ, ಹೈಕಮಾಂಡ್‌ ಮಧ್ಯ ಪ್ರವೇಶಿಸಲಿ ಎಂಬ ಮಾತನ್ನು ಹೇಳಿದ್ದಾರೆ. ಅದು ಬೇರೆ ರೀತಿ ಟರ್ನ್ ತೆಗೆದುಕೊಳ್ಳುತ್ತಿದೆ ಎಂದು ಗೊತ್ತಾದಾಗ ಮಾತನ್ನಾಡಬೇಡಿ ಗಪ್ ಚುಪ್ ಅಂತ ತಮ್ಮ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಹೇಳಿರುವುದು ಉಂಟು. ಇದೀಗ ಮತ್ತೊಮ್ಮೆ ಅದೇ ವಾರ್ನಿಂಗ್ ಕೊಟ್ಟಿದ್ದಾರೆ.

ಇಂದು ಬಜೆಟ್ ಪೂರ್ವಭಾವಿ ಸಭೆಗೂ ಡಿಕೆ ಶಿವಕುಮಾರ್ ಗೈರಾಗಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರು. ಅಸ್ಸಾಂ ಚುನಾವಣೆಯ ಹಿನ್ನಲೆ ಡಿಕೆ ಶಿವಕುಮಾರ್ ಅವರು ಎಐಸಿಸಿ ಸಭೆಯಲ್ಲಿ ಭಾಗಿಯಾಗಲು ಹೋಗಿದ್ದಾರೆ ಎಂದಿದ್ದರು. ಇದರ ನಡುವೆ ದೆಹಲಿಗೆ ವಿಮಾನ ಹತ್ತುವುದಕ್ಕೂ ಮುನ್ನ ಡಿಕೆ ಶಿವಕುಮಾರ್ ಮಾತನ್ನಾಡಿದ್ದರು.

ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಹೈಕಮಾಂಡ್ ಆದೇಶಗಳನ್ನು ನಾವು ಪಾಲನೆ ಮಾಡಬೇಕು. ನನ್ನ ಪರ, ವಿರುದ್ಧ ಹೇಳಿಕೆಗಳನ್ನು ಶಾಸಕರು, ಮಂತ್ರಿಗಳು, ಯಾರೇ ನೀಡುತ್ತಿರಬಹುದು. ಈ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದನ್ನು ಮಾಡುವ ಹೇಳಿಕೆಗಳಲ್ಲ ಎಂದು ಹೇಳಿದರು. ಸಿಎಂ ಆಗುವ ಕನಸಿದ್ದರು, ಅದಕ್ಕೆ ಹೈಕಮಾಂಡ್ ಕಡೆಯಿಂದ ಸ್ಪಷ್ಟ ಉತ್ತರ ಸಿಗದೆ ಇದ್ದರು, ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಕೊಟ್ಟ ಜವಬ್ದಾರಿಯನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಈಗ ಅಸ್ಸಾಂ ಚುನಾವಣೆಯ ಜವಬ್ದಾರಿಯೂ ಅವರ ಹೆಗಲ ಮೇಲಿದೆ.

Share This Article
Enable Notifications OK No thanks