ಫೆಬ್ರವರಿ 12, 2026 ರಂದು ದೇಶಾದ್ಯಂತ ಬಂದ್‌ಗೆ ಕರೆ ಕೊಡಲಾಗಿದೆ. ಇದೀಗ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಬೆಂಬಲದೊಂದಿಗೆ 2026ರ ಫೆಬ್ರವರಿ 12ರಂದು ‘ಭಾರತ್ ಬಂದ್’ಗೆ (Bharat Bandh) ಕರೆ ನೀಡಲಾಗಿದೆ.ಈ ಹಿನ್ನೆಲೆ ಭಾರತದ ಹಲವು ಕಡೆ ವ್ಯಾಪಾರ-ವಹಿವಾಟಿನಲ್ಲಿ, ಸಂಚಾರದಲ್ಲಿ ಅಡಚಣೆಯಾಗುವ ಸಾಧ್ಯತೆ ಇದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು ಆಕ್ರೋಶಗೊಂಡಿದ್ದು, ಈ ಹಿನ್ನೆಲೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸಿಐಟಿಯು, ಎಐಟಿಯುಸಿ, ಇಂಟಿಯುಸಿ, ಎಚ್‌ಎಂಎಸ್ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಬಂದ್‌ಗೆ ಕರೆ ನೀಡಿದೆ. ಕಳೆದ ವರ್ಷ ಜಾರಿಗೆ ಬಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಈ ಬಂದ್ ಮಾಡಲಾಗುತ್ತಿದೆ. ಈ ಬಂದ್ ದೇಶದ ಹಲವಾರು ರಾಜ್ಯಗಳ ಮೇಲೆ ಪರಿಣಾಮ ಬೀಡಲಿದ್ದು, ಬ್ಯಾಂಕಿಂಗ್, ಸಾರಿಗೆ, ಸಾರ್ವಜನಿಕ ವಲಯದ ವ್ಯವಹಾರಗಳಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ.
ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ, 2025ರ ನವೆಂಬರ್‌ನಲ್ಲಿ 4 ಕಾರ್ಮಿಕ ನೀತಿ ಸಂಹಿತೆಯನ್ನು ಜಾರಿಗೆ ತರಲಾಗಿತ್ತು. ಈ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಎಸ್‌ಕೆಎಂ ಒತ್ತಾಯಿಸಿದೆ.

