Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರತಿದಿನವೂ ಕಷ್ಟದ ದಿನವೇ : ದೆಹಲಿಗೆ ಹೋಗುವ ಮುನ್ನ ಡಿಕೆಶಿ ಮಾತು

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರದ್ದೇ ಮೇಲುಗೈ ಎಂಬುದು ಎದ್ದು ಕಾಣಿಸ್ತಾ ಇದೆ. ಯಾಕಂದ್ರೆ ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು, ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಇದನ್ನ ಇತ್ಯರ್ಥ ಮಾಡಬೇಕು ಅಂತ ಕಾಂಗ್ರೆಸ್ ನಾಯಕರು ಸಹ ಹೇಳಿದ್ದಾರೆ. ಕುರ್ಚಿ ಕದನ ಸಾಕಷ್ಟು ಚರ್ಚೆಯಾಗುತ್ತಿದ್ದರುಹೈಕಮಾಂಡ್ ಮಧ್ಯಪ್ರವೇಶ ಮಾಡದೆ ಇರುವುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಡಿಕೆ ಶಿವಕುಮಾರ್ ಅವರು ಈಗಾಗಲೇ ಸಾಕಷ್ಟು ಸಲ ದೆಹಲಿಗೆ ಹೋಗಿ ಖಾಲಿ ಕೈನಲ್ಲಿ ಬರ್ತಾ ಇದ್ದಾರೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10ಕ್ಕೆ 6 ವರ್ಷ ಆಗ್ತಿದೆ. ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಪ್ರಯತ್ನ ಕೂಡ ನಡೆಸ್ತಾ ಇದ್ದಾರೆ. ಒಂದು ವೇಳೆ ಹೈಕಮಾಂಡ್ ನಾಯಕರನ್ನು ಭೇಟಿಯಾದರೆ ಪವರ್ ಶೇರಿಂಗ್ ವಿಚಾರವನ್ನು ಮಾತನ್ನಾಡಲಿದ್ದಾರೆ.

ಇಂದು ಬಜೆಟ್ ಪೂರ್ವಭಾವಿ ಸಭೆ ಇದೆ. ಈ ಹಿನ್ನಲೆ ಡಿಕೆ ಶಿವಕುಮಾರ್ ಅವರ ಇಲಾಖೆ ಜಲಸಂಪನ್ಮೂಲ ಮತ್ತೊಂದು ಬೆಂಗಳೂರು ಅಭಿವೃದ್ಧಿ ಇಲಾಖೆಯ ಪೂರ್ವಭಾವಿ ಸಭೆ ಇದ್ದರು ಕೂಡ ಸಭೆಗೆ ಗೈರಾಗಿದ್ದಾರೆ. ಇದು ಡಿಕೆ ಶಿವಕುಮಾರ್ ಅವರಿಗೆ ಇರುವ ಅಸಮಾಧಾನವನ್ನ ತೋರಿಸುತ್ತಿದೆ. ಇಂದು ಸಂಜೆ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗ್ತಾ ಇದೆ.

ದೆಹಲಿಗೆ ಹೋಗುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಪ್ರತಿದಿನವೂ ನನಗೆ ಒಳ್ಳೆಯದೆ. ಪ್ರತಿದಿನವೂ ಸಂತೋಷದ ದಿನವೆ, ಪ್ರತಿದಿನವೂ ಕಷ್ಟದ ದಿನವೆ. ಯಾವುದು ಏನು ಸುಲಭ ಆಗಲ್ಲ. ಸಮಸ್ಯೆಗಳನ್ನು ಬಗೆಹರಿಸುವಾಗ ತೊಡಕುಗಳು ಬರ್ತಾ ಇರುತ್ತವೆ. ಟೀಕೆಗಳು ಬರ್ತಾ ಇರುತ್ತವೆ. ಅವೆಲ್ಲವನ್ನು ಹೆದರಿಸಬೇಕು ಎಂಬ ಮಾತನ್ನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now