ಬಜೆಟ್ ಮಂಡನೆಯಾದ ಮೇಲೆ ಚಿನ್ನ ಬೆಳ್ಳಿ ಬೆಲೆಯಲ್ಲಿ ದಾಖಲೆಮಟ್ಟದಲ್ಲಿ ಇಳಿಕೆಯಾಗಿತ್ತು. ಇದೇ ರೀತಿ ಇಳಿಕೆಯಾಗಿದ್ದರೆ ಮಧ್ಯಮ ವರ್ಗದವರ ಕೈಗೂ ಚಿನ್ಮ ಎಟಕುವಂತೆ ಖಂಡಿತ ಇರುತ್ತಿತ್ತು. ಆದರೆ ಮತ್ತೆ ಏರಿಕೆಯತ್ತಲೇ ಸಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 505 ರೂಪಾಯಿ ಜಾಸ್ತಿಯಾಗಿದೆ. ಈ ಮೂಲಕ ಒಂದು ಗ್ರಾಂ 22 ಕ್ಯಾರೆಟ್ ಚಿನ್ನ, 14,615 ರೂಪಾಯಿ ಆಗಿದೆ.
ಉಳಿದಂತೆ 24 ಕ್ಯಾರಟ್ ಚಿನ್ನದ ದರ 551 ರೂಪಾಯಿ ಏರಿಕೆಯಾಗಿದ್ದು, 15,944 ರೂಪಾಯಿ ಒಂದು ಗ್ರಾಂಗೆ ಆಗಿದೆ. ಇನ್ನು ಬೆಳ್ಳಿ ಬೆಲೆ 50 ಸಾವಿರ, 20 ಸಾವಿರ ಕುಸಿದಿತ್ತು. ಇಂದು ಒಂದೇ ದಿನಕ್ಕೆ ಕೆಜಿ ಬೆಳ್ಳಿ ಬೆಲೆಯಲ್ಲಿ 40 ಸಾವಿರ ಏರಿಕೆಯಾಗಿದೆ. ಸದ್ಯ ಕೆಜಿ ಬೆಳ್ಳಿ 3,20,000 ಇದೆ. ಗ್ರಾಂ ಲೆಕ್ಕದಲ್ಲಿ ನೋಡೋದಾದ್ರೆ ಒಂದು ಗ್ರಾಂಗೆ 40 ರೂಪಾಯಿ ಏರಿಕೆಯಾಗಿದ್ದು, 320 ರೂಪಾಯಿ ಮಾರುಕಟ್ಟೆ ದರವಾಗಿದೆ.
ಎಲೆಕ್ಟ್ರಿಕಲ್ ವಾಹನಗಳು ಜಾಸ್ತಿಯಾದ ಬೆನ್ನಲ್ಲೆ ಬೆಳ್ಳಿ ಬೆಲೆ ಗಗನಕ್ಕೇರಿದೆ. ಚಿನ್ನಕ್ಕೆ ಹೋಲಿಕೆ ಮಾಡ್ಕೊಂಡ್ರೆ ಬೆಳ್ಳಿ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಆದ್ರೆ ಈಗಂತು ಚಿನ್ನಕ್ಕೂ ಪೈಪೋಟಿ ಕೊಡುವಂತೆ ಬೆಳ್ಳಿ ದರ ಏರಿಕೆಯಾಗಿರೋದು ಎಲ್ಲರಿಗೂ ಶಾಕ್ ಆಗಿದೆ. ಕಳೆದ ವರ್ಷ ಬಜೆಟ್ ಮಂಡನೆ ಮಾಡಿದ ಸನಿಹದಲ್ಲಿ ಕಡಿಮೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಆ ಮೇಲೆ ಮತ್ತೆ ಹೆಚ್ಚಾಗಿತ್ತು. ಈ ವರ್ಷವೂ ಬಜೆಟ್ ಮಂಡನೆಯಾದ ಎರಡು ದಿನ ಕಡಿಮೆಯಾಗಿದ್ದ ಚಿನ್ನ ಬೆಳ್ಳಿ ಮತ್ತೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅದರ ಏರಿಳಿತ ಹೇಗಿರಲಿದೆ ಎಂಬುದನ್ನ ನೋಡಬೇಕಿದೆ.


















