ಲಕ್ನೊ: ಚುನಾವಣಾ ಆಯೋಗ ಇಲಾಖೆ ಪಂಚರಾಜ್ಯಗಳ ಚುನಾವಣೆ ಘೋಷಿಸಿದ್ದೇ ತಡ ಪಕ್ಷಗಳಲ್ಲಿ ಚುನಾವಣೆಯ ಬಿಸಿ ಗರಿಗೆದರಿದೆ. ಮೊದಲಿನಿಂದಲೂ ಉತ್ತರ ಪ್ರದೇಶದಲ್ಲೇ ಹೆಚ್ಚು ಆ್ಯಕ್ಟೀವ್ ಆಗಿರುವ ಪ್ರಿಯಾಂಕ ಗಾಂಧಿ ಈಗ ಹೊಸ ವಿಚಾರವೊಂದನ್ನ ಹೊರ ಹಾಕಿದ್ದಾರೆ.
ಉತ್ತರ ಪ್ರದೇಶಕ್ಕೆ ನಾನೇ ಸಿಎಂ ಆಗಬಹುದಾ ಎಂದಿದ್ದಾರೆ. ನಿಮಗೆ ಬೇರೆ ಮುಖ ಸಿಎಂ ಸ್ಥಾನಕ್ಕೆ ಕಾಣುತ್ತಿದೆಯೇ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ್ದಾರೆ.
ಇಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡಿಗಡೆ ಮಾಡಿದ್ದು, ಆ ವೇಳೆ ಮಾಧ್ಯಮದವರು ಪ್ರಿಯಾಂಕ ಗಾಂಧಿಯನ್ನ ಪ್ರಶ್ನಿಸಿದ್ದಾರೆ. ಸಿಎಂ ಅಭ್ಯರ್ಥಿ ಯಾರೆಂದು ಕೇಳಿದಾಗ, ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೆ ಎಂದಿದ್ದಾರೆ.
ಯುಪಿ ಎಲೆಕ್ಷನ್ ನಲ್ಲಿ ಪ್ರಿಯಾಂಕ ಗಾಂಧಿ ಮಹಿಳೆಯರ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಪ್ರಣಾಳಿಕೆಯಲ್ಲೂ ಮಹಿಳೆಯರ ಸಮಸ್ಯೆಯನ್ನೇ ತೋರಿಸಿದೆ. ಹೀಗಾಗಿ ಸಿಎಂ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಪ್ರಿಯಾಂಕ ಗಾಂಧಿ ಅವರೇ ಸಿಎಂ ಸ್ಥಾನಕ್ಕೆ ನಿಲ್ತಾರೆ ಎಂಬುದಿ ಕನ್ಫರ್ಮ್ ಆಗಿದೆ.