Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂಗವಿಕಲೆ ದೀಪಾಗೆ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 02 : ಹನ್ನೆರಡು ವರ್ಷಗಳ ಕಾಲ ನನ್ನೊಂದಿಗೆ ಸಂಸಾರ ನಡೆಸಿ ಪತಿ ಈಗ ನನ್ನಿಂದ ದೂರವಾಗಿರುವುದರಿಂದ ನನ್ನ ಜೀವನ ಅತಂತ್ರವಾಗಿದೆ. ನ್ಯಾಯ ದೊರಕಿಸುವಂತೆ ಅಂಗವಿಕಲೆ ದೀಪಾ ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ನೆರವಿನೊಂದಿಗೆ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

 

ಎಂ.ಕೆ.ಹಟ್ಟಿ ನಿವಾಸಿಯಾಗಿರುವ ನಾನು 2009 ರಲ್ಲಿ ಡಿಯೋಗ್ ಜೊತೆ ವಿವಾಹವಾಗಿದ್ದೆ. 2010 ರಲ್ಲಿ ನಿಧನರಾದರು. ನನಗೆ ಒಂದು ಗಂಡು ಮಗುವಿದೆ. ಹೊಳಲ್ಕೆರೆ ರಸ್ತೆಯಲ್ಲಿರುವ ಕೆ.ಇ.ಬಿ.ಯಲ್ಲಿ ನಾನು ಕೆಲಸ ಮಾಡುವ ವೇಳೆ ಎದುರುಗಡೆಯಿರುವ ಸಾಯಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದ ಬಿ.ಈರೇಶ್ ಪರಿಚಯವಾಗಿ 2011 ರಲ್ಲಿ ವಿವಾಹ ಮಾಡಿಕೊಂಡೆ ಹನ್ನೆರಡು ವರ್ಷಗಳ ಕಾಲ ನನ್ನೊಟ್ಟಿಗೆ ಸಂಸಾರ ನಡೆಸಿದ್ದು, ಹನ್ನೊಂದು ವರ್ಷದ ಹೆಣ್ಣು ಮಗುವಿದೆ. ನಂತರ ಬಿ.ಈರೇಶ್ ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಪುನಃ ಚಿತ್ರದುರ್ಗಕ್ಕೆ ವಾಪಸ್ಸು ಬಂದ ಮೇಲೆ ನನ್ನ ಜೊತೆ ವಾಸಿಸುತ್ತಿಲ್ಲ. ಮಹಿಳಾ ಸಂಘಗಳಿಂದ ನನ್ನ ಹೆಸರಿನಲ್ಲಿ ಐದು ಲಕ್ಷ ರೂ.ಸಾಲ ಪಡೆದು ಮೋಸ ಮಾಡಿದ್ದಾರೆಂದು ದೀಪಾ
ತನ್ನ ಸಂಕಷ್ಟ ತೋಡಿಕೊಂಡರು.

 

ಬಿ.ಈರೇಶ್ ನಮ್ಮನ್ನು ಬಿಟ್ಟು ಹೋಗಿರುವುದರಿಂದ ಜೀವನಕ್ಕೆ ಬೇರೆ ದಾರಿಯಿಲ್ಲದಂತಾಗಿದೆ. ನ್ಯಾಯ ಕೇಳಲು ಗಂಡನ ಮನೆಯ ಹತ್ತಿರ ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿರುತ್ತಾರೆ. ಈ ನಡುವೆ ಲಕ್ಷ್ಮಿದೇವಿ ಬಿ.ಈರೇಶನ ಹೆಂಡತಿಯೆಂದು ಹೇಳಿಕೊಂಡು ಬಂದು ನನ್ನ ಮನೆ ಹತ್ತಿರ ಮತ್ತು ನಾನು ಕೆಲಸ ಮಾಡುವ ಬಟ್ಟೆ ಅಂಗಡಿ ಬಳಿ ಬಂದು ಗಲಾಟೆ ಮಾಡುತ್ತಾಳೆ. ರಕ್ಷಣೆ ಒದಗಿಸುವಂತೆ ದೀಪ ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಹೆಚ್.ಭಾರತಿ, ಜಿಲ್ಲಾಧ್ಯಕ್ಷೆ ಪ್ರಿಯಾಂಕ, ತಾಲ್ಲೂಕು ಅಧ್ಯಕ್ಷೆ ಶ್ರೀದೇವಿ, ರಾಜ್ಯ ಕಾರ್ಯದರ್ಶಿ ಶಂಕ್ರಮ್ಮ ಶಾರದಮ್ಮ, ಕವಿತ, ಲಕ್ಷ್ಮಮ್ಮ, ಭಾಗ್ಯಮ್ಮ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now