ಕಳೆದ ಹಲವು ವಾರಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ, ಒಂದೇ ದಿನದಲ್ಲಿ 10 ಗ್ರಾಂಗೆ ₹9,000ಕ್ಕೂ ಹೆಚ್ಚು ಇಳಿಕೆಯಾಗಿ ಚಿನ್ನದ ದರದಲ್ಲಿ ಭಾರೀ ಕುಸಿತ ದಾಖಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ದರವೂ ಇಳಿಕೆಯಾಗಿದೆ. ಕೆಜಿಗೆ ₹17,500ಕ್ಕೂ ಹೆಚ್ಚು ಕುಸಿತ ದಾಖಲಾಗಿದೆ.
ಕರ್ನಾಟಕದಲ್ಲಿ ಚಿನ್ನದ ದರ (ಪ್ರತಿ ಗ್ರಾಂ)
18 ಕ್ಯಾರಟ್ ಆಭರಣ ಚಿನ್ನ – ₹12,043
22 ಕ್ಯಾರಟ್ ಆಭರಣ ಚಿನ್ನ – ₹14,719
24 ಕ್ಯಾರಟ್ ಶುದ್ಧ ಚಿನ್ನ – ₹16,057
ಬೆಳ್ಳಿ ಶುಕ್ರವಾರದ ದಿನದ ವಹಿವಾಟಿನಲ್ಲಿ ಶೇ 37ರಷ್ಟು ಕುಸಿದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ 12ರಷ್ಟು ಕುಸಿದಿತ್ತು. ಶುಕ್ರವಾರದ ಚಿನ್ನದ ಬೆಲೆ ಕುಸಿತವು ಹತ್ತೊಂಬತ್ತರ ದಶಕದ ಆರಂಭದ ನಂತರದ ಅತಿದೊಡ್ಡ ಏಕ ದಿನದ ಕುಸಿತವಾಗಿತ್ತು ಮತ್ತು ಬೆಳ್ಳಿಯ ಕುಸಿತವು ಇದುವರೆಗೆ ಅತಿ ಹೆಚ್ಚಿನ ಕುಸಿತವಾಗಿದೆ.
ರಾಜ್ಯಾದ್ಯಂತ ಮದುವೆ ಸಮಾರಂಭಗಳು ನಡೆಯುತ್ತಿರುವ ಈ ಸಮಯದಲ್ಲಿ, ಚಿನ್ನದ ಬೆಲೆ ಇಳಿಮುಖವಾಗಿರುವುದು ಪೋಷಕರ ಮೇಲಿದ್ದ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಿದೆ.ಅನೇಕ ಕುಟುಂಬಗಳು ಚಿನ್ನ ಖರೀದಿಯನ್ನು ಮುಂದೂಡಿದ್ದವು. ಇದೀಗ ಬೆಲೆ ಕುಸಿತವು ಮದುವೆ ಖರೀದಿಗೆ ಉತ್ತಮವಾಗಿದೆ.


