ನಾಳೆ ಕೇಂದ್ರ ಬಜೆಟ್ ಮಂಡನೆ : ಏನೆಲ್ಲಾ ನಿರೀಕ್ಷೆಗಳಿವೆ..?

ಬೆಂಗಳೂರು: ಕೇಂದ್ರ ಬಜೆಟ್ ಅಂದಾಕ್ಷಣಾ ಸಾಮಾನ್ಯ ಜನಕ್ಕೆ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ನಾಳೆ ನಿರ್ಮಲ ಸೀತರಾಮನ್ ಬಜೆಟ್ ಮಂಡನೆಯನ್ನ ಮಾಡ್ತಾ ಇದ್ದಾರೆ. ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಭಾರೀ ಬದಲಾವಣೆಗಳು ಆಗುವುದಂತು ಅನುಮಾನವಿದೆ. ಹೊಸ ರೆಜೀಮ್ ನಲ್ಲಿ ಸ್ಟಾಂಡರ್ಡ್ ಡಿಡೆಕ್ಷನ್ ಮಿತಿ ಹೆಚ್ಚಳ ಸಾಧ್ಯತೆ ಇದೆ. ಈಗಿರುವಂತ 75 ಸಾವಿರದಿಂದ 1 ಲಕ್ಷ ರೂಪಾಯಿ ತನಕ ಹೆಚ್ಚಳ ಮಾಡ್ತಾರೆ ಎಂಬ ಭರವಸೆ ಇದೆ.

ಗೃಹ ಸಾಲದ ಮೇಲಿನ ಬಡ್ಡಿಯ ವಿನಾಯಿತಿ ಮಿತಿ ಹೆಚ್ಚಳ್ ನಿರೀಕ್ಷೆ ಇನ್ನಷ್ಟು ದಿನಗಳ ಕಾಲ ಹಳೆರ ಟ್ಯಾಕ್ಸ್ ರೆಜೀಮ್ ಕೂಡ ಮುಂದುವರೆಯಲಿದೆ. ವಿವಾಹಿತ ಜೋಡಿಗೆ ಜಂಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಬಹುದು. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣವನ್ನು ಬಯಲಾಗುತ್ತಿದೆ. ಟಿಡಿಎಸ್ ಸರಳೀಕರಣದ ಜೊತೆಗೆ ಟ್ರಾನ್ಸಿಷನ್ಸ್ ಪ್ರಾವಿಷನ್ಸ್ ರೂಲ್ಸ್ ಜೊತೆಗೆ ಎಫ್ ಎಕ್ಯೂಗಳನ್ನು ಸ್ಪಷ್ಟವಾಗಿ ಘೋಷಿಸಬೇಕೆಂಬ ಆಶಯವನ್ನು ಹೊಂದಲಾಗಿದೆ. ಈ ಮೂಲಕ ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಇದಾವೆ. 15ನೇ ಹಣಕಾಸು ಆಯೋಗ ಶಿಫಾರಸ್ಸಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ. ರಕ್ಷಣಾ ವಲಯ, ಕ್ಲೀನ್ ಎನರ್ಜಿ, ಎಐ, ಉತ್ಪಾದನಾ ವಲಯ, ಸಂಶೋಧನಾ ವಲಯಗಳ ಮೇಲೆ ಹೆಚ್ಚು ಹೂಡಿಕೆಯ ನಿರೀಕ್ಷೆ, ಜೊತೆಗೆ ರೇಲ್ವೆ, ರಸ್ತೆ & ನಗರಾಭಿವೃದ್ಧಿಗೆ ಹೆಚ್ಚು ಒತ್ತು ಸಾಧ್ಯತೆ, ರೇಲ್ವೆ ಇಲಾಖೆಗೆ 2.75 ಟ್ರಿಲಿಯನ್ ಅನುದಾನ ಸಿಗುವ ನಿರೀಕ್ಷೆ, ಗೇಜ್ ಕನ್ವರ್ಷನ್, ಟ್ರ್ಯಾಕ್ ಡಬ್ಲಿಂಗ್, ಹೊಸ ಮಾರ್ಗಗಳು, ರೇಲ್ವೆ ಸಾಮರ್ಥ್ಯವನ್ನ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತೆ, ಎಂಎಸ್​ಎಂಇಗಳಿಗೆ ಸಾಂಸ್ಥಿಕ ಸಾಲ ವ್ಯವಸ್ಥೆಯ ವಿಸ್ತರಣೆ, ಅಗತ್ಯ ಔಷಧಿಗಳ ಮೇಲೆ ಕಸ್ಟಮ್ ಡ್ಯೂಟಿ ಕಡಿತ ಮಾಡಬಹುದು ಎಂಬ ಅನೇಕ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ.

Share This Article
Enable Notifications OK No thanks