ನಟಿ ಕಾವ್ಯಾ ಗೌಡ ಹಾಗೂ ಗಂಡನ ಮೇಲೆ ಸಂಬಂಧಿಕರಿಂದಾನೇ ಹಲ್ಲೆ..!

1 Min Read

ಕಿರುತೆರೆಯಲ್ಲಿ ಮಿಂಚಿ, ಖ್ಯಾತಿ ಪಡೆದಿದ್ದ ಕಾವ್ಯಾ ಗೌಡ ಮದುವೆಯಾದ ಮೇಲೆ ಗಂಡ, ಮನೆ, ಮಗಳು ಎಂದು ಆರಾಮವಾಗಿದ್ದರು. ಆದರೆ ಇದೀಗ ಅವರ ಮೇಲೆ ಹಲ್ಲೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅಕ್ಕ ಭವ್ಯಾ ಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ರೀತಿ ಹಲ್ಲೆ ಮಾಡಿರುವುದು ಬೇರೆ ಯಾರೂ ಅಲ್ಲ ಕಾವ್ಯಾ ಅವರ ವಾರಗಿತ್ತಿಯ ನೆಂಟರು. ಅಂದ್ರೆ ಕಾವ್ಯಾ ಗಂಡ ಸೋಮಶೇಖರ್ ಅಣ್ಣನ ಹೆಂಡತಿ ಕಡೆಯವರು.

ಸೋಮಶೇಖರ್ ಹಾಗೂ ಅಣ್ಣ ನಂದೀಶ್ ಕುಟುಂಬ ಒಂದೇ ಮನೆಯಲ್ಲಿ ವಾಸವಿದೆ. ಅದ್ಯಾಕೋ ವಾರಗಿತ್ತಿಯರಿಗೆ ಹೊಂದಾಣಿಕೆ ಸರಿ ಆಗ್ತಿಲ್ಲ. ಅಂದ್ರೆ ಕಾವ್ಯಾ ಹಾಗೂ ಪ್ರೇಮಾ ನಡುವೆ ಆಗಾಗ ಮನಸ್ತಾಪಗಳು ಕೇಳಿ ಬರ್ತಾನೆ ಇದ್ಯಂತೆ. ನಿನ್ನೆ ಮನೆಗೆ ಇಬ್ಬರ ಕಡೆಯ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಪ್ರೇಮಾ ಮನೆಯವರು ಕಾವ್ಯಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪ್ರೇಮಾ ಅವರ ತಂದೆ ನಿನ್ನನ್ನು ರೇಪ್ ಮಾಡುತ್ತೇನೆ ಎಂದೆಲ್ಲಾ ಮಾತನ್ನಾಡಿದ್ದಾರಂತೆ. ಕಾವ್ಯಾ ಮೇಲೂ ಹಲ್ಲೆ ನಡೆಸಿದ್ದು, ಕಾವ್ಯಾ ಪತಿಗೂ ಚಾಕುವಿನಿಂದ ಚುಚ್ಚಿದ್ದಾರಂತೆ.

ಈ ಸಂಬಂಧ ಕಾವ್ಯಾ ಅವರ ಸಹೋದರಿ ಭವ್ಯಾ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ. ಕಾವ್ಯಾ ಹಾಗೂ ಸೋಮಶೇಖರ್ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಾವ್ಯಾ ಗೌಡ ಹಾಗೂ ಸಂಬಂಧಿಕರ ವಿರುದ್ಧವೂ ಪ್ರೇಮಾ ದೂರು ನೀಡಿದ್ದಾರೆ ಎನ್ನಲಾಗಿದೆ. ಇದು ಆಸ್ತಿ ವಿಚಾರಕ್ಕೂ ಮನಸ್ತಾಪಗಳಾಗಿರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೀತಾ ಇದೆ. ರಾಧಾ ರಮಣ ಧಾರಾವಾಹಿಯಿಂದ ಕಾವ್ಯಾ ಗೌಡ ಸಾಕಷ್ಟು ಖ್ಯಾತಿ ಪಡೆದಿದ್ದರು.

Share This Article