ಶಬರಿಮಲೆಗೆ ಹೋಗಿದ್ದ ಪಾರಿವಾಳ ಚಿತ್ರದುರ್ಗಕ್ಕೆ..!

1 Min Read

ಚಿತ್ರದುರ್ಗ: ಪ್ರಾಣಿ ಪಕ್ಷಿಗಳಿಗೆ ನೆನಪಿನ ಶಕ್ತಿ ಹೆಚ್ಚಾಗಿಯೇ ಇರುತ್ತೆ. ಹೀಗಾಗಿಯೇ ಎಲ್ಲಿಯೇ ಬಿಟ್ಟರು ಆ ಪ್ರಾಣಿ ಪಕ್ಷಿಗಳು ಮಾಲೀಕರನ್ನ ಅರಸಿ ಬಂದೇ ಬರುತ್ತವೆ. ಅಂಥಹದ್ದೇ ಘಟನೆ ಇದೀಗ ಚಿತ್ರದುರ್ಗದಲ್ಲಿ ನಡೆದಿದೆ. ಶಬರಿಮಲೆಗೆ ಹೋಗಿದ್ದ ಪಾರಿವಾಳ ಅರಸಿ ಚಿತ್ರದುರ್ಗಕ್ಕೆ ಬಂದಿದೆ. ಈ ಘಟನೆ ನೋಡಿ ಊರಿನ ಮಂದಿ ಆಶ್ಚರ್ಯಚಕಿತರಾಗಿದ್ದಾರೆ.

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ತಳವಾರಟ್ಟಿಯಲ್ಲಿ ಈ ಘಟನೆ ನಡೆದಿರುವಂತದ್ದು. ಈ ಪಾರಿವಾಳದ ಹೆಸರು ಮದಕರಿ. ತಳವಾರಹಟ್ಟಿಯ ರಾಜು ಎಂಬುವವರು ಸಾಕಿದ್ದ ಪಾರಿವಾಳ ಇದಾಗಿದೆ. ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಧಾರಿಗೆ ರಾಜು ಅವರು ಈ ಪಾರಿವಾಳವನ್ನ ನೀಡಿದ್ದರು‌. ಬಳಿಕ ಅಲ್ಲಿ ಈ ಪಾರಿವಾಳವನ್ನ ಹಾರಿ ಬಿಡಲು ಸೂಚನೆ ನೀಡಿದ್ದರು. ಅದರಂತೆ ಮಾಲಾಧಾರಿಯೊಬ್ಬರು ಡಿಸೆಂಬರ್ 31 ರಂದು ಪಾರಿವಾಳವನ್ನು ಶಬರಿಮಲೆಯಿಂದ ಹಾರಿ ಬಿಟ್ಟಿದ್ದರು. ಆ ಪಾರಿವಾಳ ಜನವರಿ 21 ರಂದು ಚಿತ್ರದುರ್ಗದ ತಳವಾರಹಟ್ಟಿಗೆ ಬಂದು ತಲುಪಿದೆ. ಸರಿಯಾಗಿ ಒಂದು ತಿಂಗಳ ಕಾಲ ಪಾರಿವಾಳ ಜರ್ನಿಯನ್ನ ಮಾಡಿದೆ.

ಈ ಪಾರಿವಾಳ ಬರೋಬ್ಬರಿ 900 ಕಿಲೋ ಮೀಟರ್ ಕ್ರಮಿಸಿ ಗೂಡು ಸೇರಿಕೊಂಡಿದೆ. ಇದು ಮಾಲೀಕನಿಗೆ ಮಾತ್ರ ಖುಷಿ ಕೊಟ್ಟಿರೋದಷ್ಟೇ ಅಲ್ಲ. ಇಡೀ ಗ್ರಾಮಸ್ಥರಿಗೆ ಖುಷಿ ನೀಡಿದೆ. ಎಲ್ಲಿಯೇ ಹೋದರು ತನ್ನ ಮಾಲೀಕನನ್ನು ಮರೆಯದೆ ಬಂದಿರುವುದು ಆಶ್ಚರ್ಯವನ್ನು ಕೂಡ ಉಂಟು ಮಾಡಿದೆ.

Share This Article