ರಾಯರನ್ನು ಅವಮಾನಿಸಿ ಉದ್ಧಾರ ಆದವರು ಇಲ್ಲ : ಜಗ್ಗೇಶ್ ಆಕ್ರೋಶ
ಸಿಎಂ ಸಿದ್ದರಾಮಯ್ಯ ಅವರಿಗೆ ರಾಯರ ಫೋಟೋ ನೀಡುವಾಗ ತಿರಸ್ಕಾರ ಮಾಡಿದ್ದಾರೆ ಎಂಬ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಯರನ್ನು ಅವಮಾನಿಸಿದ ಯಾರೂ ಉದ್ಧಾರ ಆಗಿಲ್ಲ ಎಂದಿದ್ದಾರೆ.

ರಾಯರನ್ನು ಅಪಮಾಡಿದ ಯಾರು ಉದ್ದಾರ ಆದ ಇತಿಹಾಸವಿಲ್ಲ. ಮಂತ್ರಾಲಯದ ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಾಂತರ ಜನರು ಜಪ, ತಪ, ವೈರಾಗ್ಯ ಮತ್ತು ಉಪವಾಸಗಳಿಂದ ಸೇವೆ ಸಲ್ಲಿಸುತ್ತಾರೆ. ಇಂತಹ ಭಕ್ತಿಯಿಂದ ನೀಡಿದ ರಾಯರ ಫೋಟೋವನ್ನು ಹೀಗೆ ತಿರಸ್ಕರಿಸಿದ ಮೊದಲ ವ್ಯಕ್ತಿಯನ್ನು ನಾನು ನನ್ನ ಬದುಕಿನಲ್ಲಿ ನೋಡಿದ್ದು, ಇದೇ ಮೊದಲು.
ರಾಯರಿದ್ದಾರೆ, ಎದ್ದು ಬರುತ್ತಾರೆ. ಕಾಯಬೇಕು ಅಷ್ಟೇ. ರಾಯರ ಭಕ್ತರು ಯಾರಿಗಾದರೂ ಫೋಟೋ, ಮೃತ್ತಿಗೆ, ರಾಯರ ಪ್ರಸಾದ ನೀಡಿದರೆ ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು. ಒಂದು ವೇಳೆ ಅದನ್ನು ತಿರಸ್ಕಾರ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಯೋಗ ಕೊನೆಯಾಗುವ ದಿನಗಳು ಸಂಭವಿಸುತ್ತಿವೆ ಎಂಬುದೇ ಅರ್ಥ ಎಂದಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಬೆನ್ನಲ್ಲೇ ರಾಘವೇಂದ್ರ ಸ್ವಾಮಿಗಳ ಭಕ್ತರು ಬೇಸರಗೊಂಡಿದ್ದಾರೆ. ಯಾಕಂದ್ರೆ ರಾಘವೇಂದ್ರ ಸ್ವಾಮಿಗಳಿಗೆ ಅಪಾರವಾದ ಭಕ್ತಗಣವಿದೆ. ರಾಯರೆಂದರೆ ಆರಾಧಿಸುತ್ತಾರೆ. ರಾಯರೆಂದರೆ ಜೀವನವೆನ್ನುತ್ತಾರೆ, ರಾಯರೆಂದರೆ ಎಲ್ಲವೂ ನೀನೆ ಎನ್ನುತ್ತಾರೆ. ಇಂಥಹ ಭಕ್ತರ ನಡುವೆ ಸಿಎಂ ಸಿದ್ದರಾಮಯ್ಯ ಅವರು ರಾಯರ ಫೋಟೋವನ್ನು ತಿರಸ್ಕಾರ ಮಾಡಿದ್ದು, ಬೇಸರಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಪರ ಮತ್ತು ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಾ ಇದೆ.














