ಬೆಂಗಳೂರು: ಬಿಗ್ ಬಾಸ್ ಸೀಸನ್ 12 ಶೋಗೆ ತೆರೆ ಬೀಳೋದಕ್ಕೆ ಇನ್ನು ಕೆಲವೇ ಗಂಟೆಗಳು ಇದೆ. ಈ ಬಾರಿಯ ಶೋನಲ್ಲಿ ಅಶ್ವಿನಿ ಹಾಗೂ ಗಿಲ್ಲಿ ಇಬ್ಬರ ನಡುವೆ ಬಿಗ್ ಕಾಂಪಿಟೇಷನ್ ಶುರುವಾಗಿದೆ. ಅದರಲ್ಲೂ ಹೊರಗೆ ಗಿಲ್ಲಿ ಗೆಲ್ಲಲೇಬೇಕು ಅಂತ ಒಂದು ಪಡೆ ಜೋರು ಪ್ರಚಾರ ಮಾಡ್ತಿದೆ. ಆ ಕಡೆ ಅಶ್ವಿನಿ ಗೆಲ್ಲಲಿ ಅಂತ ರಕ್ಷಣಾ ವೇದಿಕೆ ಸಪೋರ್ಟ್ ಮಾಡ್ತಾ ಇದೆ. ಇದೀಗ ಕನ್ನಡ ರಕ್ಷಣಾ ವೇದಿಕೆಯಲ್ಲಿಯೇ ಇಬ್ಬರು ಇಬ್ಬರನ್ನು ಸಪೋರ್ಟ್ ಮಾಡ್ತಾ ಇದ್ದಾರೆ. ಅಂದ್ರೆ ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು ಅಶ್ವಿನಿ ಅವರ ಪರ ನಿಂತಿದ್ರೆ ಆ ಕಡೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಗಿಲ್ಲಿ ಪರ ಮಾತನ್ನಾಡುತ್ತಿದ್ದಾರೆ.
ಗಿಲ್ಲಿ ಗೆದ್ದರೆ ನಾಳೆ ಸಮಾಜಕ್ಕೆ ಏನು ಕೊಡಬಹುದು..? ಅಶ್ವಿನಿ ಗೌಡ ಗೆದ್ದರೆ ಇನ್ನೊಂದಿಷ್ಟು ವರ್ಚ ನನ್ನ ನಾಡು, ನನ್ನ ಸಂಸ್ಕೃತಿ ಅಂತ ಹೋರಾಟ ಮಾಡ್ತಾಳೆ. ನಾಡು ನುಡಿಗಾಗಿ ಬೀದಿಯಲ್ಲಿ ನಿಂತು 20 ಹೋರಾಟ ಮಾಡುವವರನ್ನು ಬೆಂಬಲಿಸಬೇಕು. ಇನ್ನೊಬ್ಬರನ್ನ ಕಾಲು ಎಳೆದುಕೊಂಡು, ನಗಿಸಿಕೊಂಡು ಇರುವ ವ್ಯಕ್ತಿಯನ್ನು ಬೆಂಬಲಿಸಬೇಕಾ..? ಕರವೇ ಆಯ್ಕೆ ಹೋರಾಟಗಾರ್ತಿ ಅಶ್ವಿನಿಗೌಡರನ್ನ ಬೆಂಬಲಿಸೋದು ಅಂತಾ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಬಿಗ್ ಬಾಸ್‌ನಲ್ಲಿ ಗಿಲ್ಲಿ ಎಲ್ಲರನ್ನೂ ನಗಿಸುವಂತಹ ಹುಡುಗ. ಎಂಥಾ ಸಂದರ್ಭದಲ್ಲೂ ಯಾರನ್ನ ಬೇಕಾದ್ರೂ ನಗಿಸ್ತಾನೆ. ದ್ವೇಷ ಮಾಡುವಂತದ್ದು, ವಿರೋಧ ಮಾಡುವಂತದ್ದು ಗಿಲ್ಲಿಗೆ ಗೊತ್ತಿಲ್ಲ ಅನಿಸುತ್ತೆ. ಬಡವರ ಮನೆ ಹುಡುಗ, ಗಿಲ್ಲಿ ಗೆಲ್ಲಬೇಕು. ನಗುವಿನ ಚಕ್ರವರ್ತಿ, ನಗಿಸುವ ಚಕ್ರವರ್ತಿ ಗಿಲ್ಲಿ ಗೆಲ್ಲಬೇಕು ಅನ್ನೋದು ಕನ್ನಡಿಗರ ಆಶಯ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











