ಭೂಮಿಯ ರಕ್ಷಣಾತ್ಮಕ ಓಝೋನ್ ಪದರ : ಜೆ. ಪರಶುರಾಮ ಅವರ ವಿಶೇಷ ಲೇಖನ

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಓಝೋನ್ ಪದರವು ಭೂಮಿಯ ವಾತಾವರಣದ ವಾಯುಮಂಡಲದ ಭಾಗದಲ್ಲಿರುವ ಒಂದು ನೈಸರ್ಗಿಕ ರಕ್ಷಣಾ ಕವಚವಾಗಿದೆ. ಇದು ಸೂರ್ಯನಿಂದ ಹೊರಸೂಸುವ ಹಾನಿಕಾರಕ ನೇರಳೇತೀತ ವಿಕಿರಣವನ್ನು ಹೀರಿಕೊಳ್ಳುವ ಮೂಲಕ ಭೂಮಿಯ ಮೇಲಿನ ಜೀವರಾಶಿಯನ್ನು ರಕ್ಷಿಸುತ್ತದೆ.

ಓಝೋನ್ ಪದರವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ. ನಿಂದ 40 ಕಿ.ಮೀ. ಎತ್ತರದ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಆದರೂ ಹೆಚ್ಚಿನ ಸಾಂದ್ರತೆಯು 15 ರಿಂದ 35 ಕಿ.ಮೀ. ನಡುವೆ ಕಂಡುಬರುತ್ತದೆ. ಓಝೋನ್ ಪದರವನ್ನು ಸಾಮಾನ್ಯವಾಗಿ ಡಾಬ್ಸನ್ ಯುನಿಟ್‍ಗಳಲ್ಲಿ ಅಳೆಯಲಾಗುತ್ತದೆ. ಇದು ಸರಾಸರಿ ಸುಮಾರು 3 ಮಿ.ಮೀಟರ್‍ಗಳಷ್ಟು ದಪ್ಪವಾಗಿರುತ್ತದೆ. ಆದರೆ ಇದರ ದಪ್ಪವು ಸ್ಥಳ ಮತ್ತು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತದೆ. ಇದನ್ನು ಕನ್ನಡದಲ್ಲಿ ಓಝೋನ್ ಪದರದ ದಪ್ಪ ಎನ್ನಲಾಗುವುದು.

ಓಝೋನ್ (03) ವಾತಾವರಣದಲ್ಲಿ ಸ್ವಾಭಾವಿಕವಾಗಿ ಮತ್ತು ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಈ ಪ್ರಕ್ರಿಯೆಯು ಮುಖ್ಯವಾಗಿ ಸೂರ್ಯನ ನೇರಳಾತೀತ (UV) ವಿಕಿರಣ ಮತ್ತು ಆಮ್ಲಜನಕದ ಅಣುಗಳ ನಡುವಿನ ರಾಸಾಯನಿಕ ಕ್ರಿಯೆಯನ್ನು ಒಳಗೊಂಡಿರುತ್ತದೆ. ಓಝೋನ್ (03) ಭೂಮಿಯ ವಾತಾವರಣದ ಮುಖ್ಯ ಎರಡು ಪದರಗಳು ಕಂಡುಬರುತ್ತದೆ. ಸ್ಟ್ರಾಟೋ ಸ್ಟಯರ್ ಮತ್ತು ಟ್ರೋ ಪೋಸ್ಟಿಯರ್ ವಾತಾವರಣದಲ್ಲಿರುವ ಒಟ್ಟು ಓಝೋನ್‍ನ ಬಹುಪಾಲು ಭಾಗ ಶೇಕಡ 90 ರಷ್ಟು ಸ್ಟ್ರಾಟೋ ಸ್ಟಯರ್‍ನಲ್ಲಿ ಕೇಂದ್ರಿಕೃತವಾಗಿರುತ್ತದೆ. ಉಳಿದ ಅಲ್ಪಪ್ರಮಾಣದ ಶೇಕಡ 10 ರಷ್ಟು ಟ್ರೋ ಪೋಸ್ಟಿಯರ್‍ನಲ್ಲಿ ಇರುತ್ತದೆ.  ವಾತಾವರಣದಲ್ಲಿನ ಒಟ್ಟು ಓಝೋನ್ ಶೇಕಡ 90% ಭಾಗವು ಸ್ಟ್ರಾಟೋ ಸ್ಟಯರ್ ಪದರದಲ್ಲಿರುತ್ತದೆ. ಇಲ್ಲಿ ಓಝೋನ್ “ಪದರ” ವನ್ನು ರೂಪಿಸುತ್ತದೆ. ಇದು ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ (Uಗಿ) ವಿಕಿರಣಗಳನ್ನು ಹೀರಿಕೊಳ್ಳುವ ಮೂಲಕ ಭೂಮಿಯ ಮೇಲಿನ ಸಕಲ ಜೀವರಾಶಿಯನ್ನು ರಕ್ಷಿಸುತ್ತದೆ. ಈ ಕ್ರಿಯೆಯಿಂದಾಗಿ ಸ್ಟ್ರಾಟೋ ಸ್ಟಯರ್‍ನಲ್ಲಿ ಎತ್ತರಕ್ಕೆ ಹೋದಂತೆ ತಾಪಮಾನವು ಹೆಚ್ಚಾಗುತ್ತದೆ. ಇದನ್ನೆ ಒಳ್ಳೆಯ ಓಝೋನ್ ಎಂದು ಕರೆಯಲಾಗುತ್ತದೆ.

 

ಟ್ರೋ ಪೋಸ್ಟಿಯರ್ ಇದು ಭೂಮಿಯ ಮೇಲ್ಮೈಗೆ ಹತ್ತಿರವಿರುವ ಅತ್ಯಂತ ಕೆಳಗಿನ ವಾತಾವರಣದ ಪದರವಾಗಿದೆ. ಇದು ಸುಮಾರು 8-15 ಕಿ.ಮೀ. ಎತ್ತರದಲ್ಲಿರುತ್ತದೆ. ಈ ಪದರದಲ್ಲಿ ಓಝೋನ್ ನೈಸರ್ಗಿಕವಾಗಿ ಅಲ್ಪಪ್ರಮಾಣದಲ್ಲಿ ಕಂಡು ಬಂದರೂ ವಾಹನಗಳು, ಕಾರ್ಖಾನೆಗಳು ಮತ್ತು ಇತರೆ ಮಾನವನ ಚಟುವಟಿಕೆಗಳಿಂದ ಉಂಟಾಗುವ ಮಾಲಿನ್ಯ ಕಾರಣಗಳಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಅದು ಹಾನಿಕಾರಕವಾಗುತ್ತದೆ. ನೆಲಮಟ್ಟದ ಓಝೋನ್ ಒಂದು ಪ್ರಮುಖ ವಾಯುಮಾಲಿನ್ಯ ಕಾರಣವಾಗಿದ್ದು, ಇದು ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳ ಉಸಿರಾಟದ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇದನ್ನು ಕೆಟ್ಟ ಓಝೋನ್ ಎಂದು ಕರೆಯಲಾಗುತ್ತದೆ.

ಓಝೋನ್ (03) ಪದರಕ್ಕೆ ಹಾನಿ ಮಾಡುವ ಮುಖ್ಯ ಅನಿಲಗಳು ಕ್ಲೋರೋಪ್ಲೋರೋ ಕಾರ್ಬನ್‍ಗಳು (ಅಈಅS) ಹ್ಯಾಲೋಜನ್‍ಗಳು ಮತ್ತು ಇತರೆ ಮಾನವ ನಿರ್ಮಿತ ರಾಸಾಯನಿಕಗಳಾಗಿವೆ. ರೆಪ್ರಿಜಿಟ್‍ಗಳು, ಏರ್‍ಕಂಡೀಷನರ್ ಮತ್ತು ಬೆಂಕಿ ನಂದಿಸುವ ಸಾಧನಗಳಲ್ಲಿ ಬಳಕೆಯಾಗುತ್ತದೆ. ಇವು ವಾತಾವರಣಕ್ಕೆ ಬಿಡುಗಡೆಯಿಂದ ಓಝೋನ್ ಅಣುಗಳನ್ನು ನಾಶಪಡಿಸುತ್ತದೆ. ಇದರಿಂದ ಸೂರ್ಯನ ಹಾನಿಕರ ಅಲ್ಟ್ರಾವೈಲೆಟ್ (Uಗಿ) ಕಾರಣಗಳಿಂದ ನಮ್ಮನ್ನು ರಕ್ಷಿಸುವ ಭೂಮಿಯ ರಕ್ಷಣಾತ್ಮಕ ಓಝೋನ್ ಪದರವನ್ನು ತೆಳುವಾಗಿಸುತ್ತದೆ.

ಈ ಎಲ್ಲಾ ಮೇಲಿನ ರಾಸಾಯನಿಕ ಅನಿಲಗಳನ್ನು ತಡೆಗಟ್ಟಲು 1987 ರ ಸೆಪ್ಟಂಬರ್ 16 ರಂದು “ಜಾಗತಿಕ ಮಾಂಟ್ರಿಯಲ್ ಪೋಟೋ ಕಾಯ್ದೆ ಜಾರಿಗೆ ತರಲಾಯಿತು”. ಇದು ವಿಶ್ವಸಂಸ್ಥೆಯ ಐತಿಹಾಸಿಕದಲ್ಲಿ ಸಾರ್ವತ್ರಿಕವಾಗಿ ಅಂಗೀಕರಿಸಲಾಯಿತು. ಮತ್ತು ಕೆಲವು ರಾಷ್ಟ್ರೀಯ ಸೇರಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಿಂದ ಓಝೋನ್ ಪದರವು ಚೇತರಿಸಿಕೊಳ್ಳುವ ಹಾಯಲ್ಲಿದೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

Share This Article