ದಾವಣಗೆರೆ: ಕೆ.ಎಸ್.ಈಶ್ವರಪ್ಪ ಅವರು ಸದ್ಯಕ್ಕೆ ಬಿಜೆಪಿಯಲ್ಲಿಲ್ಲ. ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದಾರೆ. ಆದರೆ ಬಿಜೆಪಿಗೆ ಮತ್ತೆ ಮರಳುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂಬ ಮಾತನ್ನ ಹೇಳಿದ್ದಾರೆ. ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ. ಪಕ್ಷದಲ್ಲಿ ಪರಿವರ್ತನೆ ಆಗ್ಬೇಕು ಅಂತ ಹೇಳಿ ನಾನು ಹೊರಗೆ ಬಂದಿದ್ದೀನಿ. ಆದರೆ ಕಾರ್ಯಕರ್ತರೆಲ್ಲಾ ಮತ್ತೆ ಬಿಜೆಪಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಆ ಪರಿವರ್ತನೆ ಇಂದಲ್ಲ ನಾಳೆ ಆಗುತ್ತೆ. ನನ್ನ ಮನಸ್ಸಲ್ಲೂ ಯತ್ನಾಳ್ ಮನಸ್ಸಲ್ಲೂ ಇದೇ ವಿಚಾರ ಇದೆ. ನಮ್ಮ ಕುತ್ತಿಗೆ ಕುಯ್ದರು ಹಿಂದುತ್ವ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ಇವತ್ತಲ್ಲ ನಾಳೆ ಒಳ್ಳೆ ಸ್ಥಿತಿ ಬರುತ್ತದೆ ಎಂಬ ಮಾತನ್ನ ಹೇಳಿದ್ದಾರೆ.
ಇದೆ ವೇಳೆ ಶಿಡ್ಲಘಟ್ಟದ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಅವಾಜ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗೌಡ ಅವರ ಆಡಿಯೋ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ ರಾಜೀವ್ ಗೌಡ ಅವರು ಈಗಾಗಲೇ ಮಹಿಳಾ ಅಧಿಕಾರಿಗೆ ಕ್ಷಮೆಯನ್ನು ಕೇಳಿದ್ದಾರೆ. ಈ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನವರಿಗೆ ಮೈ ಮೇಲೆ ಜ್ಞಾನ ಇಲ್ಲ. ನಮ್ಮ ಸರ್ಕಾರ ಇದೆ ಎಂದು ಹೀಗೆ ಮಾಡ್ತಿದ್ದಾರೆ. ಅಧಿಕಾರದ ಮದ ಏರಿದಾಗ ಈ ರೀತಿ ಮಾಡ್ತಾರೆ. ರಾಜ್ಯದಲ್ಲಿ ಯಾವುದೇ ಮಹಿಳೆಯರಿಗೆ ಭದ್ರತೆ ಇಲ್ಲ. ಗೃಹ ಮಂತ್ರಿಗಳಿಗೆ ಹೇಳಿದ್ರೆ ಸಣ್ಣ ವಿಚಾರ ಬಿಡ್ರಿ ಅಂತಾರೆ. ಇಷ್ಟು ಹಗುರವಾಗಿ ತಗೆದುಕೊಳ್ಳುತ್ತಿದ್ದಾರೆ. ಅಧಿಕಾರ ಶಾಶ್ವತ ಎಂದುಕೊಂಡು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಜೀವ್ ಗೌಡ ಮಾತಿಗೆ ಕಾಂಗ್ರೆಸ್ ಪಕ್ಷದಲ್ಲೂ ವಿರೋಧವಿದೆ.

