ರಾಯಚೂರು: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಸಿಎಂ ಖುರ್ಚಿ ಕದನ ಜೋರಾಗಿದೆ. ಡಿಕೆ ಶಿವಕುಮಾರ್ ಪ್ರಸ್ತುತ ಕೂಡ ಕುರ್ಚಿಗಾಗಿ ಪ್ರಯತ್ನ ಪಡ್ತಾ ಇದ್ದಾರೆ. ಆದರೆ ಅದ್ಯಾಕೋ ಅದು ಸಾಧ್ಯವಾಗ್ತಾ ಇಲ್ಲ. ಇದೀಗ ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಸಂಬಂಧ ಕೋಡಿಶ್ರೀ ಗಳು ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ, ಯುಗಾದಿ ಬಂದಾಗ ಏನಾದರೂ ಬದಲಾಗುವ ಸೂಚನೆಗಳಿರುತ್ತವೆ. ಅದರಲ್ಲೂ ರಾಜಕೀಯದಲ್ಲಿ. ಆ ಬಗ್ಗೆ ಮಾತನಾಡಿರುವ ಕೋಡಿ ಮಠದ ಶ್ರೀಗಳು, ಸಂಕ್ರಾಂತಿ, ಯುಗಾದಿ ಅಂತ ಅಲ್ಲ. ಬಜೆಟ್ ಮಂಡನೆ ತನಕ ಏನು ಹೇಳಲು ಸಾಧ್ಯವಿಲ್ಲ ಎಂಬ ಮಾತನ್ನ ಹೇಳಿದ್ದಾರೆ.
ಜ್ಯೋತಿಷ್ಯವನ್ನು ನಂಬುವ ಜನ ಸಂಕ್ರಾಂತಿ, ಯುಗಾದಿ ಅಂತ ಹೇಳುತ್ತಾರೆ. ಸಂಕ್ರಾಂತಿಯಲ್ಲಿ ಸೂರ್ಉ, ಯುಗಾದಿಯಲ್ಲಿ ಚಂದ್ರನನ್ನು ಹಿಡಿದು ಜ್ಯೋತಿಷ್ಯ ಹೇಳುತ್ತಾರೆ. ಯುಗಾದಿ ಹಬ್ಬ ಮುಗಿಯುವವರೆಗೂ ಸಿದ್ದರಾಮಯ್ಯ ಇರಲಿದ್ದು, ಮುಂದಿನದು ಯುಗಾದಿ ನೋಡಿಕೊಂಡು ಹೇಳಬೇಕಾಗಿದೆ. ಅಲ್ಲಿ ತನಕ ಏನನ್ನು ಹೇಳಲು ಸಾಧ್ಯವಿಲ್ಲ ಎಂದೇ ಹೇಳಿದ್ದಾರೆ.
ಇದೇ ವೇಳೆ ಡಿಕೆ ಶಿವಕುಮಾರ್ ಬಗ್ಗೆ ಮಾತನ್ನಾಡುತ್ತಾ, ಆತ ಒಳ್ಳೆಯ ಕಾರ್ಯಕರ್ತ, ಸಂಘಟನೆ ಮನುಷ್ಯ, ಹೋರಾಟಗಾರ. ಆದ್ರೆ ಇಲ್ಲಿ ಸಂಘಟನೆ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡ್ತಾರಾ? ಇಲ್ಲವಾ? ಅನ್ನೋದನ್ನ ನೋಡಿ ಹೇಳ್ತೇನೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರಶ್ರೀ ತಿಳಿಸಿದ್ದಾರೆ. ಇಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ ಅವರು ತುಂಬಾ ಹೊತ್ತು ಮಾತನ್ನಾಡಿದ್ದಾರೆ. ಸಂಧಾನ ಮಾಡುವಲ್ಲಿ ಸಫಲರಾಗ್ತಾರಾ ಅಥವಾ ಸಿಎಂ ಸ್ಥಾನ ಕೊಡಿಸುವಲ್ಲಿ ಸಫಲರಾಗ್ತಾರಾ ನೋಡಬೇಕಿದೆ. ಈಗ ಕೋಡಿಶ್ರೀಗಳು ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ.















