ಭೂಮಿಯಲ್ಲಿನ ಅಂತರ್ಜಲದ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ…!

2 Min Read

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್

ಭೂಮಿಯಲ್ಲಿ ಅಂತರ್ಜಲದ ಪ್ರಮಾಣವು ಒಟ್ಟು ನೀರಿನ ಒಂದು ಸಣ್ಣ(ಅಂಶ) ಆದರೆ ನಿರ್ಣಾಯಕ ಭಾಗವಾಗಿದೆ. ಭೂಮಿಯ ಮೇಲಿನ ಒಟ್ಟು ನೀರಿನಲ್ಲಿ ಬಹುಪಾಲು ಸಮುದ್ರದ ಉಪ್ಪು ನೀರು ಬಳಕೆಗೆ ಯೋಗ್ಯವಾದ ಸಿಹಿ ನೀರಿನಲ್ಲಿ ಅಂತರ್ಜಲವು ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಭೂಮಿಯ ಮೇಲ್ಮೈಯಲ್ಲಿ ಸುಮಾರು 71% ನೀರಿದೆ. ಅಂದರೆ ಅದರಲ್ಲಿ 96.5% ಕ್ಕಿಂತ ಹೆಚ್ಚು ನೀರು ಬಳಕೆಗೆ ಲಭ್ಯವಿರುವ ಒಟ್ಟು ಶುದ್ಧ ನೀರಿನಲ್ಲಿ ಅಂತರ್ಜಲವು ಪ್ರಮುಖ ಭಾಗವಾಗಿದೆ.

ಮೇಲ್ಮೈಯಲ್ಲಿರುವ ಹಿಮನದಿಗಳು ಮತ್ತು ಮಂಜುಗಡ್ಡೆಗಳ ನಂತರ, ಅಂತರ್ಜಲವು ಸಿಹಿನೀರಿನ ಅತಿದೊಡ್ಡ ಸಂಗ್ರಹವಾಗಿದೆ. ಮಾನವ ಬಳಕೆಗೆ ಸುಲಭವಾಗಿ ಲಭ್ಯವಿರುವ ಸಿಹಿನೀರು ಭೂಮಿಯ ಮೇಲಿನ ಒಟ್ಟು ನೀರಿನ ಕೇವಲ ಶೇಕಡ 0.3 ರಷ್ಟು ಮಾತ್ರ, ಈ ಅಲ್ಪ ಪ್ರಮಾಣದ ನೀರಿನಲ್ಲಿ ಅಂತರ್ಜಲದ ಪಾತ್ರ ದೊಡ್ಡದು.

ಭಾರತದಲ್ಲಿ ಅಂತರ್ಜಲವು ನೀರಾವರಿ ಕೃಷಿ ಭೂಮಿಯ 60% ರಷ್ಟು ಭಾಗಕ್ಕೆ ಮತ್ತು ಗ್ರಾಮೀಣ ನಿವಾಸಿಗಳ 85% ರಷ್ಟು ಜನರಿಗೆ ಕುಡಿಯುವ ನೀರಿನ್ನು ಪೂರೈಸುತ್ತದೆ. ಮಳೆ ಮತ್ತು ನದಿಗಳು ಕೆರೆಗಳಿಂದ ನೀರು ಭೂಮಿಯ ಮೇಲ್ಮೈ ಮೂಲಕ ಇಂಗಿ, ಕೆಳಗಿರುವ ಖಾಲಿ ಜಾಗಗಳು ಮತ್ತು ಕಲ್ಲುಗಳ ಬಿರುಕುಗಳಲ್ಲಿ ತುಂಬಿಕೊಳ್ಳುವ ಮೂಲಕ ಅಂತರ್ಜಲ ಮರುಪೂರ್ಣಗೊಳ್ಳುತ್ತದೆ. ಈ ಕ್ರಮವನ್ನು ಅಂತಸ್ರ್ರಾವ (Iಟಿಜಿiಟಣಡಿಚಿಣioಟಿ) ಎಂದು ಕರೆಯಲಾಗುವುದು.

ಭೂಮಿಯ ಮೇಲಿನ ನೀರಿನ ಪ್ರಮಾಣವನ್ನು ಸರಿಸುಮಾರು 1.386 ಬಿಲಿಯನ್ ಕ್ಯೂಬಿಕ್ ಕಿಲೋಮೀಟರ್ ಎಂದು ಅಂದಾಜಿಸಲಾಗಿದೆ. ಈ ನೀರಿನ ಬಹುಪಾಲು ಭಾಗವು ಸಾಗರಗಳಲ್ಲಿ ಉಪ್ಪು ನೀರಿನ ರೂಪದಲ್ಲಿದೆ.

ಭೂಮಿಯಲ್ಲಿ ಲಭ್ಯವಿರುವ ಅಂತರ್ಜಲದ ಒಟ್ಟು ಪ್ರಮಾಣ ಈಗ ಲಭ್ಯವಿರುವ ಅಂರ್ತಜಲ 23.4 ಮಿಲಿಯನ್ ಕ್ಯೂಬಿಕ್ ಕಿಲೋಮೀಟರ್‍ಗಳು ಇದ್ದು, ಭೂಮಿಯಲ್ಲಿರುವ ನೀರಿನ ಸುಮಾರು 1.69% ರಷ್ಟಿದೆ. ಭಾರತವು ಅಂತರ್ಜಲ ಅತಿದೊಡ್ಡ ಬಳಕೆದಾರ ದೇಶವಾಗಿದೆ ಮತ್ತು ಜಗತ್ತಿನಲ್ಲಿ ಅತಿ ಹೆಚ್ಚು ಕೊಳವೆಬಾವಿಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ಅಂದಾಜು 27 ಮಿಲಿಯನ್ ಕೊಳವೆಬಾವಿಗಳು ಬಳಕೆಯಲ್ಲಿದೆ. ಭಾರತದಲ್ಲಿ ಕುಡಿಯುವ ನೀರಿನ ಅಗತ್ಯತೆಯ ಸುಮಾರು 80% ಮತ್ತು ನೀರಾವರಿ ಅಗತ್ಯತೆಯ 60% ಕ್ಕಿಂತ ಹೆಚ್ಚು ಅಂತರ್ಜಲದಿಂದ ಪೂರೈಸಲ್ಪಡುತ್ತದೆ.

ಕರ್ನಾಟಕ ರಾಜ್ಯವೊಂದರಲ್ಲೇ ಅಂತರ್ಜಲವು ಶೇಕಡ 60% ರಷ್ಟು ನೀರಾವರಿಗೆ ಮೂಲಗಳಾಗಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರಪಂಚದಾದ್ಯಂತ ಕೊರೆಯಲಾದ ಒಟ್ಟು ಕೊಳವೆಬಾವಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಲಾಗುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಕೋಟ್ಯಾಂತರ ಕೊಳವೆಬಾವಿಗಳಿವೆ ಮತ್ತು ಅಂತರ್ಜಲದ ಬಳಕೆಯು ಗಣನೀಯ ಪ್ರಮಾಣದಲ್ಲಿದೆ.

ಸಂಕ್ಷೀಪ್ತವಾಗಿ ಹೇಳುವುದಾದರೆ ಕರ್ನಾಟಕದ ಅಂತರ್ಜಲ ಪರಿಸ್ಥಿತಿ ಕಳವಳಕಾರಿಯಾಗಿದ್ದು, ನೀರಿನ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಗೆ ಪ್ರತಿಯೊಬ್ಬರ ಹೊಣೆ ಎಂದು ವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.

Share This Article