Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

“ಸೆಕೆಂಡರಿ ಅಗ್ರಿಕಲ್ಚರ್” ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ಸರ್ಕಾರ

Facebook
Twitter
Telegram
WhatsApp

ಬೆಂಗಳೂರು: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ. ಕಳೆದ ವರ್ಷ ಆಗಸ್ಟ್ 25 ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಸಿಎಂ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಭೆ ನಡೆಸಿ, ಸಮಿತಿಯಲ್ಲಿ ಚರ್ಚಿಸಿದ್ದರು.

ಅದರಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ “ಸೆಕೆಂಡರಿ ಅಗ್ರಿಕಲ್ಚರ್ “ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ಯ್ರಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್ ನ ಮುಖ್ಯ ಧ್ಯೇಯೋದ್ದೇಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಏನಿದು ಸೆಕೆಂಡರಿ ಅಗ್ರಿಕಲ್ಚರ್..?

ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದು ಸೆಕೆಂಡರಿ ಕೃಷಿಯಾಗಿದ್ದಯಮ ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳ್ನು ಮಾನವ ಶಕ್ತಿ ಕೌಶಲ್ಯಗಳನ್ನು ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು “ಸೆಕೆಂಡರಿ ಕೃಷಿ”ಯಡಿ ಪರಿಗಣಿಸಬಹುದಾಗಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸಿವ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಬಹುದಾಗಿದೆ.

ಜೇನುಸಾಕಾಣೆ,ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ.ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ/ಕಚ್ಛಾ ವಸ್ತುಗಳನ್ನು ಮಾನವ ಶಕ್ತಿ,ಕೌಶಲ್ಯಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿವೆ.

ರೇಸ್ ಕುದುರೆಗಳ ಸಾಕಣೆ,ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮಗಳು, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕಂಡಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗದು.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು. ಎಂ.ಎಸ್.ಎಂ.ಈ.ಡಿ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು.
ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ, ನೀರು ಮತ್ತು ಮಣ್ಣು ಪರೀಕ್ಷೆ, ಪಶು ಆಹಾರ ಮೇವು ಉತ್ಪಾದನೆ ಇತ್ಯಾದಿಗಳ ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು. ಕಟಾವು ಆದ ನಂತರ ಹೂವು,ಹಣ್ಣು ಸಾಂಬಾರು ಪದಾರ್ಥಗಳ ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು. ಅತಿಸಣ್ಣ, ಸಣ್ಣ ಉದ್ದಿಮೆಗಳಾದ ಉಪ್ಪಿನಕಾಯಿ, ಜಾಮ್ ತಯಾರಿಕೆ ಅರಿಶಿನ ಪುಡಿ, ಶುಂಠಿಬೆಳ್ಳುಳ್ಳಿ ಪೇಸ್ಟ್ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿನಂ, ಆಯುಷ್ ಮೆಡಿಸಿನ್ಸ್, ನೇಯ್ಗೆ ಉತ್ಪನ್ನಗಳು, ಸುಗಂಧ ದ್ರವ್ಯ,ಡೈಗಳನ್ನು ಇತ್ಯಾದಿ ಮೌಲ್ಯ ವರ್ದನೆ ಕೇಂದ್ರಿತ ಚಟುವಟಿಕೆಗಳನ್ನು ಮಾಡುವುದು.

 

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ,ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ,ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು. ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು,ಹತ್ತಿ ಭತ್ತದ ಉಳಿಕೆಯಿಂದ ಪೈಬರ್ ಬೋರ್ಡ್ ಯಾರಿಸುವುದು, ಕತ್ತಾಳೆ ಬಾಳೆ ನಾರಿನ ತ್ಪನ್ನಗಳು, ಅಡಿಕೆ ಹಾಳೆ ಉತ್ಪನ್ನಗಳು, ಬಯೋಗ್ಯಾಸ್ ಉತ್ಪಾದನೆ, ಯೂರಿಯಾ ಲೇಪಿಸಿಸಿ ಮೇವಿನ ಬ್ಲಾಕ್ ಗಳ ತಯಾರಿಕೆ, ಕಬ್ಬು ಸೋಗೆಯಿಂದ ತ್ಪ್ನಗಳ ತಯಾರಿಕೆ ಸೇರಿದಂತೆ ಮುಂತಾದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಮರುಬಳಸಬಹುದಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!