ಡಿಕೆ ಶಿವಕುಮಾರ್ ವಿರುದ್ಧವೂ ಜನಾರ್ದನ ರೆಡ್ಡಿ ಆಕ್ರೋಶ : ಯಾವ ಕಾರಣಕ್ಕೆ..?

1 Min Read

ಬಳ್ಳಾರಿ: ಬ್ಯಾನರ್ ಗಲಾಟೆಯ ಬಳಿಕ ಭರತ್ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಿಲ್ಲ ಎಂಬ ಆಕ್ರೋಶವನ್ನ ಶಾಸಕ ಜನಾರ್ದನ ರೆಡ್ಡಿ ಮತ್ತೆ ಹೊರ ಹಾಕಿದ್ದಾರೆ. ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವೂ ಇವರಿಂದ ನಿರೀಕ್ಷೆ ಮಾಡಿದ್ದು ಇದನ್ನೇ. ಉಪಮುಖ್ಯಮಂತ್ರಿಗಳು ಅವರ ಬೆನ್ನಿಗೆ ನಿಂತಿದ್ದೀನಿ. ಶಾಂತಿಧೂತನಾಗಿ ಭೂಮಿ ಬಂದಿರುವುದು ಭರತ್ ರೆಡ್ಡಿ. ಇವರಿಂದ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆದ್ರೂ ಕೂಡ ಇವತ್ತು ಬಳ್ಳಾರಿಗೆ ಬಂದಿರುವ ಎಸ್ಪಿ , ಐಜಿ ಅವರ ಮೇಲೆ ವಿಶ್ವಾಸ ಇಡೋಣಾ ಎಂದಿದ್ದಾರೆ.

9 ದಿನ ಆದ್ರೂ ಕೂಡ, ಕಣ್ಣ ಮುಂದೆ ವಿಷ್ಯುವಲ್ಸ್ ಇದೆ. ರಾಜಶೇಖರ್ ಓಡೋಗುವಾಗ ಶೂಟ್ ಮಾಡಿದಾಗ, ಭರತ್ ರೆಡ್ಡಿ ನೇತೃತ್ವದಲ್ಲಿ ನಡೆದರು ಯಾಕೆ ಬಂಧಿಸಿಲ್ಲ. ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಯಾರೇ ಆಗಿರಬಹುದು, ಅವರ ಕೈಯಲ್ಲೇನಾದರೂ ಪ್ರೈವೇಟ್ ಗನ್ ಮ್ಯಾನ್ ಗಳಿದ್ರೆ, ಅವರೇನಾದರೂ ಅಟ್ಯಾಕ್ ಮಾಡಿದ್ರೆ, ನೀವೂ ಎಲ್ಲಾ ವಿಡಿಯೋದಲ್ಲೂ ಅಲ್ಲೇ ನೋಡ್ತಾ ಇದ್ದೀರಾ. ಕುಡಿದು ನಿಂತು ಮಾತನಾಡೋದಕ್ಕೂ ಯೋಗ್ಯತೆ ಇಲ್ಲದೆ ಇದ್ದಾಗ, ಇಲ್ಲಿಂದ ಎದ್ದೋಗು ಅಂತ ಗಲಾಟೆ ಮಾಡುವುದನ್ನು ಬೇಡ ಅಂತ ಹೋಗಿರುವುದು. ಪೊಲೀಸರು ತನಿಖೆ ಮಾಡಲಿ.

ಸೋಮಶೇಖರ್, ಶ್ರೀರಾಮುಲು ನಾವೆಲ್ಲಾ ಗನ್ ಮ್ಯಾನ್ ಗಳನ್ನ ಕರೆದುಕೊಂಡು ಹೋಗಿ ಅವನನ್ನ ಹೆದರಿಸಿಬಿಟ್ಟು , ಅಲ್ಲಿಂದ ದೌರ್ಜನ್ಯ ಮಾಡಿ ಓಡಿಸುವುದಕ್ಕೆ, ಮೊದಲನೇಯದಾಗಿ ನೀನು ಎಲ್ಲಿ ಬಂದು ನಿಂತಿದ್ದೀಯಾ, ಜನಾರ್ದನ ರೆಡ್ಡಿ ಮನೆ ಮುಂದೆ. ಇಲ್ಲಿಗೆ ಬಂದಿದ್ದು ಸೂಕ್ತ ಅಲ್ಲ ಅಂತ ಹೇಳಿ ಬರಿಗೈಲಿ ಹೋಗಿರುವಂತದ್ದು ನಿಮ್ಮ ಕಣ್ಣ ಮುಂದೆ ಇದೆ ಎಂದಿದ್ದಾರೆ.

Share This Article