Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ ; ಸುಮಾರು 7.15 ಲಕ್ಷ ಮೌಲ್ಯದ ಚಿನ್ನ ವಶ

---Advertisement---

ಸುದ್ದಿಒನ್, ಚಳ್ಳಕೆರೆ, ಜನವರಿ. 05 : ಸರಗಳ್ಳತನ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿ ಅವರಿಂದ 07 ಲಕ್ಷದ, 15 ಸಾವಿರ ರೂಪಾಯಿ ಮೌಲ್ಯದ 65 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು 01 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಚಳ್ಳಕೆರೆಯ ಶ್ಯಾಮ್ (28 ವರ್ಷ) ಮತ್ತು ಮಂಜುನಾಥ (28 ವರ್ಷ) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ : ಡಿಸೆಂಬರ್ ತಿಂಗಳ 09 ನೇ ತಾರೀಖಿನಂದು ಚೆನ್ನಮ್ಮ ರಸ್ತೆಯ ವಿ.ಎಸ್ ಮಾರುತಿ ರವರ ಅಂಗಡಿಗೆ ದಿನಸಿ ಖರೀದಿಸುವ ಸೋಗಿನಲ್ಲಿ ಬಂದು ಎ.ಎಂ.ಲಕ್ಷ್ಮೀ ಎಂಬುವರ ಕೊರಳಿನಲ್ಲಿದ್ದ 65 ಗ್ರಾಂ ತೂಕದ ಬಂಗಾರದ ಸರವನ್ನು ಕಳ್ಳತನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ನಂತರ ಪ್ರಕರಣದ ಆರೋಪಿತರ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ, ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಶಿವಕುಮಾರ್ ಆರ್ ಹಾಗೂ ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸತ್ಯನಾರಾಯಣರಾವ್ ಎಂ.ಜಿ ಇವರುಗಳ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ಇವರ ನೇತೃತ್ವದಲ್ಲಿ ಈರೇಶ್, ಶಿವರಾಜ್.ಜೆ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ತಂಡ ರಚಿಸಿರುತ್ತಾರೆ.

ಪ್ರಕರಣದ ಬೆನ್ನತ್ತಿದ ಪೊಲೀಸರ ತಂಡ ಇಂದು (ಜನವರಿ. 05) ಬೆಳಿಗ್ಗೆ 08.00 ಗಂಟೆಗೆ ಪಿಎಸ್‌ಐ ಈರೇಶ್ ರವರು ಚಳ್ಳಕೆರೆ ಟೌನ್ ಹೊರವಲಯದ ಅಜ್ಜಯ್ಯನಗುಡಿ ಬಳಿ ಮೇಲ್ಕಂಡ ಪ್ರಕರಣದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದು, ಅವರಿಂದ 65 ಗ್ರಾಂ ತೂಕದ ಮಾಂಗಲ್ಯ ಸರ, ಅಂದಾಜು ಬೆಲೆ 07 ಲಕ್ಷ 15 ಸಾವಿರ ಮತ್ತು 01 ಮೋಟಾರ್ ಸೈಕಲ್ ಬೆಲೆ 15,000/- ಒಟ್ಟು 07 ಲಕ್ಷ 15 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ಮತ್ತು ಈರೇಶ್, ಶಿವರಾಜ್.ಜೆ. ಪಿಎಸ್‌ಐ ಹಾಗೂ ರವಿಕುಮಾರ್.ಬಿ.ವಿ. ಎಎಸ್‌ಐ, ರಾಘವರೆಡ್ಡಿ ಎಎಸ್‌ಐ ಹಾಗೂ ಸಿಬ್ಬಂದಿಯರಾದ ವಸಂತಕುಮಾರ್ ಹೆಚ್ ಸಿ-1033, ಶಿವಕುಮಾರ್ ಹೆಚ್ ಸಿ-1155, ವೆಂಕಟೇಶ್ ಹೆಚ್ ಸಿ-1246 ಪರಶುರಾಮ ಪಿಸಿ-2004, ಶ್ರೀಧರ ವಸಂತ ಧರಣವರ, ಪಿಸಿ-2143, ರಮೇಶ್ ಬಾರ್ಕಿ, ಪಿಸಿ-2171, ಮಂಜುನಾಥ ಎನ್. ಪಿಸಿ-22368 ಇವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now