ಬೆಂಗಳೂರು: ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದಂತ ನಟಿ ನಂದಿನಿ ಸಿಎಂ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದರು. ಪಿಜಿಯಲ್ಲಿ ವಾಸವಿದ್ದ ನಂದಿನಿಯ ಅಸಹಜ ಸಾವು ಅನುಮಾನ ಮೂಡಿಸಿತ್ತು. ಆದರೆ ಇದೀಗ ಸಿಕ್ಕ ಒಂದು ಡೈರಿಯಿಂದ ಒಂದಷ್ಟು ವಿಚಾರಗಳು ಹೊರಗೆ ಬಂದಿದೆ. ಮೃತ ನಂದಿನಿ ಪಿಜಿಯಲ್ಲಿ ಡೈರಿಯೊಂದು ಸಿಕ್ಕಿದೆ. ಆ ಡೈರಿಯಲ್ಲಿ ಅವರ ಅಮ್ಮನಿಗೆ ಕ್ಷಮೆ ಕೇಳಿದ್ದಾರೆ.
ಡೈರಿಯಲ್ಲಿ Sorry Amma ಅಂತ ಬರೆದಿದ್ದಾರೆ. ನಟಿ ನಂದಿನಿ ಅವರ ತಂದೆ ಸರ್ಕಾರಿ ಶಿಕ್ಷಕರಾಗಿದ್ದವರು. ಆದರೆ ಅವರ ನಿಧನದ ನಂತರ ಆ ಕೆಲಸ ಮಗಳಿಗೆ ಬಂತು. ಅಂದ್ರೆ ನಂದಿನಿಗೆ ಬಂದಿತ್ತು. ಶಿಕ್ಷಕಿಯಾಗಿ ಕೆಲಸ ಮಾಡುವುದು ನಂದಿನಿಗೆ ಅಷ್ಟೊಂದು ಇಷ್ಟವಿರಲಿಲ್ಲ. ನಟಿಯಾಗಬೇಕು ಎಂಬ ಆಸೆ ಹೊತ್ತವರು, ಕನಸು ಕಂಡವರು. ಅದಕ್ಕಾಗಿಯೇ ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದವರು. ತಮ್ಮ ಪ್ರತಿಭೆಯಿಂದಾನೇ ಹಲವು ಸೀರಿಯಲ್ ಗಳಲ್ಲೂ ನಟಿಸಿದ್ದವರು. ಆದರೆ ದುಡುಕು ನಿರ್ಧಾರದಿಂದ ಇಂದು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ನಂದಿನಿ ನಟನೆಯ ಜೊತೆಗೆ ಓದನ್ನು ಮುಂದುವರೆಸಿದ್ದರು. ಬೆಂಗಳೂರಿನ ಹೆಸರುಘಟ್ಟ ಕಾಲೇಜೊಂದರಲ್ಲಿ ಬಿಇ ಪದವಿಯನ್ನ ಮಾಡುತ್ತಿದ್ದರು. ಪಿಜಿಯಲ್ಲಿ ಉಳಿದುಕೊಂಡಿದ್ದರು. ತಾನಿದ್ದ ಪಿಜಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೈರಿಯಲ್ಲಿ ಅದಕ್ಕೆ ಕಾರಣವನ್ನು ಬರದಿದ್ದಾರೆ. ಅಮ್ಮ ಕ್ಷಮಿಸಿ ಬಿಡಿ. ನನಗೆ ಸರ್ಕಾರಿ ಕೆಲಸ ಇಷ್ಟವಿಲ್ಲ. ನನಗೆ ನಟನೆ ಅಂದ್ರೆ ತುಂಬಾ ಇಷ್ಟ. ಮನೆಯಲ್ಲಿ ನನ್ನ ಮಾತನ್ನ ಯಾರೂ ಕೂಡ ಕೇಳುತ್ತಿಲ್ಲ. ಕ್ಷಮಿಸಿ ಬಿಡಿ ಎಂದು ಡೈರಿಯಲ್ಲಿ ಬರದುಕೊಂಡಿದ್ದಾರೆ. ಅಂದ್ರೆ ಸರ್ಕಾರಿ ಕೆಲಸ ಮಾಡಲು ಮನೆಯಲ್ಲಿ ಎಲ್ಲರ ಒತ್ತಾಯವಿತ್ತೇನೋ. ಆದರೆ ನಟನಾ ಬದುಕಿಗಾಗಿ ನಟಿ ತನ್ನ ಜೀವವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















