ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821
ಸುದ್ದಿಒನ್
ಹಿಮಾಲಯ ಪರ್ವತ ಶ್ರೇಣಿಯು ವಾಯುವ್ಯದಲ್ಲಿ ಹಿಂದೂಕುಶ್ ಮತ್ತು ಕಾರಕೋರಂ ಶ್ರೇಣಿಯಿಂದ ಗಡಿಯಾಗಿದ್ದು, ಇದರ ಒಟ್ಟು ವಿಸ್ತೀರ್ಣ ಸುಮಾರು 595000 ಚದರ ಕಿಲೋ ಮೀಟರ್‍ಗಳಷ್ಟಿದೆ. ಈ ಪರ್ವತದಲ್ಲಿ ಅನೇಕ ಪ್ರಮುಖ ನದಿಗಳ ಉಗಮ ಸ್ಥಾನವಾಗಿದೆ. ಹಿಮಾಲಯವು ವಿಶ್ವದ ಅತಿ ಎತ್ತರದ ಪರ್ವತಗಳನ್ನು ಒಳಗೊಂಡು ಎವರೆಸ್ಟ್ ಶಿಖರವು ಸುಮಾರು 8850 ಮೀಟರ್ ಅತಿ ಎತ್ತರದ ಪರ್ವತವಾಗಿದೆ.
ಹಿಮಾಲಯ ಪರ್ವತ ಶ್ರೇಣಿಯು ಭೂಫಲಕಗಳ ಚಲನೆಯ ಪರಿಣಾಮವಾಗಿ ರೂಪುಗೊಂಡಿದೆ. ಇದು ಪ್ರಪಂಚದ ಅತಿ ಕಿರಿಯ ಮಡಿಕೆ ಪರ್ವತಗಳಲ್ಲಿ ಒಂದಾಗಿದೆ. ಭೂವೈಜ್ಞಾನಿಕವಾಗಿ ಈ ಪ್ರದೇಶವು ಪದರಶಿಲೆ, ರೂಪಾಂತಶಿಲೆ ಮತ್ತು ಅಗ್ನಿಶಲೆಯಿಂದ ರೂಪುಗೊಂಡಿದೆ. ಈ ಪರ್ವತಶ್ರೇಣಿಯಲ್ಲಿ ಹಿಮಾಲಯ ಶ್ರೇಣಿಯ ಉಷ್ಟಾಂಶವು ಕಾಲಕ್ಕನುಗುಣವಾಗಿ ಎತ್ತರಕ್ಕೆ ಅನುಗುಣವಾಗಿ ಬಹಳವಾಗಿ ಬದಲಾಗುತ್ತದೆ. ಬೇಸಿಗೆಯಲ್ಲಿ ಮೇ ನಿಂದ ಜೂನ್ ತಿಂಗಳವರೆಗೆ ಹಗಲಿನ ತಾಪಮಾನ 15 ಡಿಗ್ರಿ ಸೆಂ. ವರೆಗೆ ರಾತ್ರಿಯಲ್ಲಿ 0 ಡಿಗ್ರಿ ಸೆಂ. ವರೆಗೆ ಇರುತ್ತದೆ.
ಹಿಮಾಲಯದಲ್ಲಿ ಪಳೆಯುಳಿಕೆಗಳು ಕಂಡುಬರುವ ಆ ಪ್ರದೇಶದ ವಿಶಿಷ್ಟ ಭೂವೈಜ್ಞಾನಿಕ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಲಕ್ಷಾಂತರ ವರ್ಷಗಳ ಹಿಂದೆ ಹಿಮಾಲಯ ಪರ್ವತಗಳ ಜಾಗದಲ್ಲಿ ಟೆಥಿನ್ ಸಮುದ್ರ ಇತ್ತು ಎಂಬುದನ್ನು ಈ ಪಳಿವಳಿಕೆಗಳು ದೃಢಪಡಿಸಿವೆ. ಸುಮಾರು 225 ದಶಲಕ್ಷ ವರ್ಷಗಳ ಹಿಂದೆ ಭಾರತವು ಗೂಂಡ್ವಾನ ಎಂಬ ಬೃಹತ್ ಭೂಖಂಡನ ಭಾಗವಾಗಿತ್ತು. ಆಗಿನ ಕಾಲದಲ್ಲಿ ಹಿಮಾಲಯವು ಇರುವ ಸ್ಥಳದಲ್ಲಿ ಆಳವಿಲ್ಲದ ದೊಡ್ಡಸಮುದ್ರವಿತ್ತು. ಇದನ್ನು ಟೆಥಿನ್ ಸಮುದ್ರ ಎಂದು ಕರೆಯಲಾಗಿತ್ತು. ಕಾಲಕ್ರಮೇಣ ಭಾರತೀಯ ಭೂಫಲಕವು ಉತ್ತರಕ್ಕೆ ಚಲಿಸಿ ಯುರೇಷಿಯನ್ ಭೂಪಲಕದೊಂದಿಗೆ ಘರ್ಷಣೆಯಿಂದಾಗಿ ಸಮುದ್ರದ ತಳಭಾಗದಲ್ಲಿದ್ದ ಮೆಕ್ಕಿಲು ಮಣ್ಣು ಮತ್ತು ಶಿಲಾಪದರಗಳು ಮೇಲಕ್ಕೆ ಏಳಲಾರಂಭಿಸಿದವು. ಈ ನಿರಂತರ ಏರಿಕೆಯ ಪ್ರಕ್ರಿಯೆಯಿಂದಾಗಿ ಹಿಮಾಲಯ ಪರ್ವತಗಳ ಶ್ರೇಣಿಗಳು ರೂಪುಗೊಂಡವು. ಸಮುದ್ರ ತಳದಲ್ಲಿದ್ದ ಸಾಗರ ಜೀವಿಗಳು, ಚಿಪ್ಪುಗಳು ಮತ್ತು ಅಸ್ಥಿ ಪಂಜರಗಳು, ಸುಣ್ಣದಕಲ್ಲಿನ ಹಾಸುಗಳಲ್ಲಿ ಹುದುಗಿಹೋಗಿ ಪಳವಳಿಕೆಗಳಾಗಿ ಮಾರ್ಪಟ್ಟವು. ಹಿಮಾಲಯದ ವಿವಿಧ ಶಿಲೆಗಳ ಪದರಗಳಲ್ಲಿ ಮುಖ್ಯವಾಗಿ ಸಾಗರ ಜೀವಿಗಳ ಪಳವಳಿಕೆಗಳು ದೊರೆಯುತ್ತವೆ. ಪಳಯುಳಿಕೆಗಳು ಹಿಂದು ಧರ್ಮದಲ್ಲಿ ಪವಿತ್ರವಾದ ಶಾಲಾ ಗ್ರಾಮಗಳೆಂದು ಪೂಜಿಸಲ್ಪಟ್ಟಿವೆ. ಇವು ವಿಶಿಷ್ಟವಾದ ಸುರಳೀಕಾರದ ಚಿಪ್ಪುಗಳನ್ನು ಹೊಂದಿರುವ ಪ್ರಾಚೀನ ಜೀವಿಗಳಾಗಿವೆ. ಸುಣ್ಣದಕಲ್ಲು (ಐime sಣoಟಿe) ಮತ್ತು ಇತರೆ ಮೆಕ್ಕಲು ಶಿಲೆಗಳ ಪದರಗಳಲ್ಲಿ ಮೀನು ಚಿಪ್ಪುಗಳು ಮತ್ತು ಇತರೆ ಕಡಲತೀರದ ಜೀವಿಗಳ ಕುರುವುಗಳು ಇವೆ. ಈ ಪಳವಳಿಕೆಗಳು ಹಿಮಾಲಯದ ಭೂತಕಾಲದ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತವೆ.
ಹಿಮಾಲಯ ಶ್ರೇಣಿಯ ಪರ್ವತಾರೋಹಣ, ಪ್ರವಾಸೋದ್ಯಮ ಜೀವ ವೈವಿದ್ಯದ ಸಂರಕ್ಷಣೆ ಮತ್ತು ಖನಿಜಗಳು (ಸಮುದ್ರದ ಕಲ್ಲು ಉಪ್ಪು) ಹೊರಕೆಗೆಯುವರೆಗೆ ಪ್ರಸಿದ್ಧಿಯಾಗಿದೆ. ನೈಸರ್ಗಿಕ ಸೌಂದರ್ಯವನ್ನು ನೋಡಲು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಮಾಲಯ ಶ್ರೇಣಿಯು ಸುಮಾರು 40 ರಿಂದ 70 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ಭೂವೈಜ್ಞಾನಿಕವಾಗಿ ದೃಢಪಟ್ಟಿದೆ. ಭಾರತೀಯ ಭೂಪಲಗಳು ಇಂದಿಗೂ ಟಿಬೆಟ್ ಭೂಪಲಕದ ಅಡಿಯಲ್ಲಿ ನಿಧಾನವಾಗಿ ಚಲಿಸುತ್ತದೆ. ಇದರಿಂದ ವರ್ಷಕ್ಕೆ ಸುಮಾರು ಅರ್ಧ ಸೆಂ.ಮೀಟರ್‍ನಷ್ಟು ಎತ್ತರಕ್ಕೆ ಬೆಳೆಯುತ್ತದೆ.
ಹಿಮಾಲಯದಲ್ಲಿ ದೊರಕುವ ಆರ್ಥಿಕ ಖನಿಜಗಳೆಂದರೆ ಕಲ್ಲಿದ್ದರು, ತಾಮ್ರ, ಸೀಸ, ನಿಕ್ಕಲ್, ಕೋಬಾಲ್ಟ, ಚಿನ್ನ, ಬೆಳ್ಳಿ, ಸುಣ್ಣದಕಲ್ಲು ಮತ್ತು ಜಿಪ್ಸಮ್ ಗಣನೀಯ ಪ್ರಮಾಣದಲ್ಲಿ ಲಭ್ಯವಿದೆ.







