ದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ನಿಲ್ಲುವಂತೆ ಕಾಣಿಸ್ತಿಲ್ಲ. ಕುರ್ಚಿಗಾಗಿ ಡಿಕೆ ಶಿವಕುಮಾರ್ ಕೂಡ ಹರಸಾಹಸ ಪಡುತ್ತಿದ್ದಾರೆ. ದೆಹಲಿಗೂ ಹೋಗಿದ್ದಾರೆ. ಆದರೆ ಅದ್ಯಾಕೋ ಏನೋ ಇದ್ದಕ್ಕಿದ್ದ ಹಾಗೇ ವೈರಾಗ್ಯದ ಮಾತುಗಳನ್ನ ಆಡಿದ್ದಾರೆ. ಕರ್ನಾಟಕ ಭವನದಲ್ಲಿ ಅವರು ಹೇಳಿದ್ದೇನು ಎಂಬುದು ಇಲ್ಲಿದೆ ನೋಡಿ.
ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ. ರಾಹುಲ್ ಗಾಂಧಿಗೆ ನಾನು ತೊಂದರೆ ಕೊಡುವುದಿಲ್ಲ. ನಿನ್ನೆಯಷ್ಟೇ ವಿದೇಶದಿಂದ ಬಂದಿದ್ದಾರೆ. ಅವರನ್ನು ಈಗ ಭೇಟಿಯಾಗಿ ತೊಂದರೆ ಕೊಡುವುದಕ್ಕೆ ಬಯಸುವುದಿಲ್ಲ. ಈ ರೀತಿಯಾದ ಹೇಳಿಕೆಗಳನ್ನು ಕೊಡುವ ಮೂಲಕ ತ್ಯಾಗದ ಮಾತುಗಳನ್ನ ಆಡಿದರಾ ಎಂಬ ಅನುಮಾನ ಕಾಡುತ್ತಿದೆ. ನನಗಿನ್ನು ಅನುಭವ ಕಡಿಮೆ ಇದೆ ತರಬೇತಿ ಪಡೆದು ಬರುತ್ತೇನೆ. ಕೃಷ್ಣ ಅವರು ಇಲ್ಲಿ ಈಗ ಇಲ್ಲ. ದೇವರ ಬಳಿಯೇ ಕೇಳಬೇಕು ಎಂದಿದ್ದಾರೆ.
ಇನ್ನು ಈ ಕಡೆ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶಕ್ಕೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಜನವರಿ 25ಕ್ಕೆ ಸಮಾವೇಶ ನಡೆಸಬೇಕು ಎಂದುಕೊಳ್ಳುತ್ತಿದ್ದಾರೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಸಮಾವೇಶ ಮಾಡುವವರಿಗೆ ಒಳ್ಳೆಯದ್ದಾಗಲಿ.
ಡಿಸಿಎಂ ಡಿಕೆ ಶಿವಕುಮಾರ್ ಈ ಅವಧಿಯಲ್ಲಿ ಸಿಎಂ ಆಗಬೇಕು ಎಂಬ ಆಸೆ, ಆಕಾಂಕ್ಷೆಯನ್ನ ಇಟ್ಟುಕೊಂಡಿರುವವರು. ಹೀಗಾಗಿಯೇ ನಾನಾ ಪ್ರಯತ್ನಗಳನ್ನ ಮಾಡ್ತಾ ಇದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವವರನ್ನು ಕೂಡ ಭೇಟಿಯಾಗಿ ಬಂದಿದ್ದಾರೆ. ಈಗ ದೆಹಲಿಗೂ ಹೋಗಿದ್ದು, ಅವರ ಹೇಳಿಕೆ ಬೇರೆಯದ್ದನ್ನೇ ಸೂಚಿಸ್ತಾ ಇದೆ. ಒಬ್ಬ ಮನುಷ್ಯ ಎಷ್ಟು ಪ್ರಯತ್ನ ಪಡಬಹುದು. ಪ್ರಯತ್ನಗಳು ಫಲ ಕೊಡದೆ ಇದ್ದಾಗ ಬರುವ ಮಾತುಗಳು ಈಗ ಡಿಕೆ ಶಿವಕುಮಾರ್ ಅವರಿಂದ ಬರ್ತಾ ಇದ್ಯಾ ಎಂಬ ಅನುಮಾನಕ್ಕೂ ಅವರ ಹೇಳಿಕೆಗಳು ಕಾರಣವಾಗಿವೆ.






