ಕೋರ್ಟ್ ಗೆ ಹಾಜರಾದ್ರು ರೇಣುಕಾಸ್ವಾಮಿ ತಂದೆ – ತಾಯಿ : ಆರೋಪಿಗಳಿಗೆ ಢವಢವ..!

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಟ್ರಯಲ್ ಆರಂಭವಾಗಿದೆ. ಅದರ ಭಾಗವಾಗಿ ಮೊದಲು ರೇಣುಕಾಸ್ವಾಮಿ ತಂದೆ ತಾಯಿಯನ್ನ ಸಾಕ್ಷ್ಯವಾಗಿ ಕರೆಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆಯೆಲ್ಲ ನಟ ದರ್ಶನ್ ನಿದ್ದೆ ಮಾಡಿಲ್ಲ ಎನ್ನಲಾಗ್ತಾ ಇದೆ. ಸದ್ಯ ಇದೀಗ ಟ್ರಯಲ್ ಗೆ ರೇಣುಕಾಸ್ವಾಮಿ ತಂದೆ ತಾಯಿ ಕೋರ್ಟ್ ಗೆ ಹಾಜರಾಗಿದ್ದಾರೆ. ಕಾಶೀನಾಥಯ್ಯ ಹಾಗೂ ರತ್ನಪ್ರಭಾ ಜಡ್ಜ್ ಮುಂದೆ ಸಾಕ್ಷಿಯಾಗಿ ಹೇಳಿಕೆ ನೀಡಿದ್ದಾರೆ.

 

ದೇಹವನ್ನ ಹೇಗೆ ಗುರುತಿಸಿದ್ರು, ಯಾರಿಂದ ಗೊತ್ತಾಯ್ತು, ಹೇಗೆ ಗೊತ್ತಾಯ್ತು ಎಂಬ ಮೂಲಭೂತ ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನ ಜಡ್ಜ್ ಮುಂದೆ ಕೇಳಲಾಗುತ್ತೆ. ಅದಕ್ಕೆ ತಮಗೆ ಗೊತ್ತಿರುವ ವಿಚಾರವನ್ನ ರತ್ನಪ್ರಭಾ ಅವರು ಜಡ್ಜ್ ಮುಂದೆ ತಿಳಿಸಿದ್ದಾರೆ. ಇವರನ್ನ ಚೀಫ್ ವಿಟ್ನೆಸ್ ಎಂದು ಕರೆಯಲಾಗುತ್ತೆ.

 

ಇನ್ನು ಇಂದಿನ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಮನವಿ ಮೇರೆಗೆ ಇನ್ ಕ್ಯಾಮೆರಾ ಪ್ರಕ್ರಿಯೆಯನ್ನು ನಡೆಸ್ತಾ ಇದ್ದಾರೆ. ಕೋರ್ಟ್ ಹಾಲ್ ಮುಚ್ಚಿ ವಿಚಾರಣೆಯನ್ನ ನಡೆಸಲಾಗ್ತಾ ಇದೆ. ಪ್ರಕರಣಕ್ಕೆ ಸಂಬಂಧಿಸಿದವರು ಮಾತ್ರ ಕೋರ್ಟ್ ಹಾಲ್ ನಲ್ಲಿ ಹಾಜರು ಇರತಕ್ಕದ್ದು. ಎಲ್ಲರನ್ನು ಹೊರಗೆ ಕಳುಹಿಸಿ ವಿಚಾರಣೆಯನ್ನ ನಡೆಸುತ್ತಾ ಇದ್ದಾರೆ. ಎಲ್ಲರಿಗೂ ಅನುಮತಿ ಕೊಟ್ಟರೆ ಕೋರ್ಟ್ ನಲ್ಲಿ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ. ಇದು ಹೈಪ್ರೊಫೈಲ್ ಕೇಸ್ ಆಗಿರುವ ಕಾರಣ ವಿಚಾರಣೆಯ ಸರಿಯಾದ ರೀತಿಯಲ್ಲಿ ನಡೆಯಲಿ ಎಂಬ ಕಾರಣಕ್ಕೆ ವಕೀಲರ ಮನವಿಯನ್ನ ಸ್ವೀಕರಿಸಿದ ನ್ಯಾಯಾಧೀಶರು, ಎಲ್ಲರನ್ನು ಹೊರಗಡ ಕಳುಹಿಸಿ, ಸಂಬಂಧಪಟ್ಟವರನ್ನು ಮಾತ್ರ ಕೋರ್ಟ್ ಒಳಗೆ ಬಿಟ್ಟುಕೊಂಡು ವಿಚಾರಣೆಯನ್ನ ನಡೆಸುತ್ತಿದ್ದಾರೆ. ವಿಚಾರಣೆ ಆರಂಭವಾದ ಮೇಲಂತು ಆರೋಪಿಗಳು ಟೆನ್ಶನ್ ನಲ್ಲಿದ್ದಾರೆ ಎನ್ನಲಾಗಿದೆ.

Share This Article