ಡಿ. 26 ರಂದು ಪಿಳ್ಳೇಕೆರೆನಹಳ್ಳಿಯ ಶ್ರೀ ಗೌರಸಮುದ್ರ ಮಾರಮ್ಮ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವ

1 Min Read

ಸುದ್ದಿಒನ್, ಚಿತ್ರದುರ್ಗ ಡಿ. 17 : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿಯ ಶ್ರೀ ಗೌರಸಮುದ್ರ ಮಾರಮ್ಮ ದೇವಾಲಯದಲ್ಲಿ ಡಿಸೆಂಬರ್ 26 ರ ಶುಕ್ರವಾರ 14 ನೇ ವರ್ಷದ ಕಾರ್ತಿಕ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯ ದೈವ, ಆದಿಶಕ್ತಿ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ದಿವ್ಯ ಸನ್ನಿಧಿಯಲ್ಲಿ ಅತಿ ವಿಜೃಂಭಣೆಯಿಂದ ಕಾರ್ತಿಕ ಮಹೋತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರಗಳು :
ಬೆಳಿಗ್ಗೆ 8:00 ಗಂಟೆಗೆ ಅಕ್ಷತೆ ಮತ್ತು ಕುಂಕುಮ ಹಂಚುವ ಕಾರ್ಯಕ್ರಮ
ಬೆಳಿಗ್ಗೆ 10:00 ಗಂಟೆಗೆ ಪೂಜಾ ಕಾರ್ಯಕ್ರಮಗಳ ಪ್ರಾರಂಭ
ಸಂಕಲ್ಪ, ಕುಂಭ ಪ್ರತಿಷ್ಠಾಪನೆ ಮತ್ತು ವಿಶೇಷ ಅಭಿಷೇಕ
ಸಂಜೆ 6:00 ಗಂಟೆಗೆ ಮಹಾ ಮಂಗಳಾರತಿ
ಸಂಜೆ 7:00 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ
ಈ ಸಮಾರಂಭಕ್ಕೆ ಭಕ್ತಾಧಿಗಳು ಆಗಮಿಸುವುದರ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Share This Article
Enable Notifications OK No thanks