ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಟ್ರಯಲ್ ಆರಂಭವಾಗಲಿದೆ. ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಟ್ರಯಲ್ ಆರಂಭವಾಗಲಿದೆ. ಅದಕ್ಕೆ ಪೂರ್ವ ತಯಾರಿಯಂತರ ಇಂದು ಒಂದಷ್ಟು ಪರಿಶೀಲನೆಗಳು ನಡೆದಿವೆ. ಎಸ್ಪಿಪಿ ಪ್ರಸನ್ನ ಕುಮಾರ್ ಪರಿಶೀಲನೆಯನ್ನು ನಡೆಸಿದ್ದಾರೆ.
ಸಹಾಯಕ ಎಸ್ಪಿಪಿ ಸಚಿನ್, ತನಿಖಾಧಿಕಾರಿ ಎಸಿಪಿ ಚಂದನ್ ಜೊತೆಗೂಡಿ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲೆಲ್ಲಾ ಪರಿಶೀಲನೆಯನ್ನು ನಡೆಸಿದ್ದಾರೆ. ರೇಣುಕಾಸ್ವಾಮಿ ಅಪಹರಿಸಿ ತಂದಿಟ್ಟಿದ್ದ ಶೆಡ್, ಹಲ್ಲೆ ನಡೆಸಿದ್ದ ಸ್ಥಳ, ಕೊಲೆಯಾದ ನಂತರ ಶವವನ್ನಿಟ್ಟಿದ್ದ ಸ್ಥಳ, ರಾತ್ರಿ ಶವ ಬಿಸಾಡಿದ ಸತ್ವ ಅಪಾರ್ಟ್ಮೆಂಟ್ ಬಳಿಯ ಸ್ಥಳ, ಸುಮನಹಳ್ಳಿ ರಾಜಕಾಲುವೆ ಬಳಿಯ ಸ್ಥಳ ಹೀಗೆ ಎಲ್ಲವನ್ನು ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್ 17ಕ್ಕೆ ಅಂದ್ರೆ ನಾಳೆ ವಿಚಾರಣೆಗೆ ದಿನಾಂಕವನ್ನ ಬೆಂಗಳೂರಿನ57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಚಾರ್ಜ್ ಷೀಟ್ನಲ್ಲಿ 7 ಮತ್ತು 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ದರ್ಶನ್ ಸೇರಿದಂತೆ ಗ್ಯಾಂಗ್ ನ ಟ್ರಯಲ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಬುಧವಾರ ಕೋರ್ಟ್ ನಲ್ಲಿ ರೇಣುಕಾಸ್ವಾಮಿ ತಂದೆ – ತಾಯಿ ಸಾಕ್ಷಿಯ ವಿಚಾರಣೆಯನ್ನು ನಡೆಸಲಿದೆ. ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ ಬಗ್ಗೆ ವಿಚಾರಣೆಯಾಗಲಿದೆ. ಅಪಹರಣ, ಶವ ಪತ್ತೆ ಬಗ್ಗೆ ತಂದೆ ತಾಯಿ ಬಳಿ ವಿವರಣೆ ಕೇಳಲಿದೆ. 272 ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಎಸ್ಪಿಪಿ ನಡೆಸಲಿದ್ದಾರೆ. ಆರೋಪಿಗಳ ಪರ ವಕೀಲರು ಎಲ್ಲ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ.






