ಮೈಸೂರು: ಕೊರೊನಾ ಮೂರನೇ ಅಲೆ ಎಲ್ಲಿ ನೋಡಿದ್ರು ಸಿಕ್ಕಾಪಟ್ಟೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಮತ್ತೆಲ್ಲಿ ಲಾಕ್ಡೌನ್ ಆಗುತ್ತೋ ಅನ್ನೋ ಭಯ ಜನರಲ್ಲಿ ಶುರುವಾಗಿದೆ. ಆದ್ರೆ ಈ ಲಾಕ್ಡೌನ್ ಗೆ ಪಕ್ಷದಲ್ಲಿರುವವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಸಂಸದ ಪ್ರತಾಪ್ ಸಿಂಹ ಕೂಡ ಲಾಕ್ಡೌನ್ ಬೇಡವೇ ಬೇಡ ಎಂದಿದ್ದಾರೆ. ಸರ್ಕಾರಕ್ಕೆ ಜನರ ಜೀವ ಕಾಪಾಡೋದು ಎಷ್ಟು ಮುಖ್ಯವೋ ಜೀವನ ಉಳಿಸೋದು ಅಷ್ಟೇ ಮುಖ್ಯ. ಕೊರೊನಾ ಮೊದಲ ಮತ್ತು ಎರಡನೇ ಅಲೆಗೆ ಸಿಲುಕಿ ಜನರ ಜೀವನ ದುಸ್ತರವಾಗಿದೆ. ಈ ಅಲೆಯಲ್ಲಿ ಜೀವಕ್ಕೇನು ಅಷ್ಟೊಂದು ಹಾನಿಯಿಲ್ಲ. ಆದ್ರೆ ಜೀವನ ಕುಸಿದು ಹೋಗಿದೆ.
ಕೆಲವು ಕುಟುಂಬಗಳು ಬೀದಿಗೆ ಬಂದಿ ಬಿದ್ದಿದೆ. ಇಂಥಹ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಬಾರದು. ಆಸ್ಪತ್ರೆಗಳಲ್ಲಿ ವ್ಯವಸ್ಥೆಯನ್ನು ಹೆಚ್ಚಿಸಿ, ಸೋಂಕು ಹರಡದಂತೆ ಎಚ್ಚರವಹಿಸಿ. ಯಾವುದೇ ಕಾರಣಕ್ಕೂ ಲಾಕ್ಡೌನ್ ಬೇಡ ಎಂದು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.