ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 11 : ರಂಗೋಲೆ ಚಿತ್ತಾರವು ಭಾರತೀಯ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ. ಇಂತಹ ಕಲೆ ಉಳಿವಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ ಎಂದು ಶಿಮುಲು ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರು ಹಾಗೂ ರಂಗೋಲಿ ಸ್ಪರ್ಧೆಯ ಆಯೋಚಕರಾದ ಬಿಸಿ. ಸಂಜೀವಮೂರ್ತಿ ಹೇಳಿದರು.
ತಾಲೂಕಿನ ನಗರಂಗೆರೆ ಗ್ರಾಮದ ಕಲಾಮಂದಿರದ ಮುಂಭಾಗದಲ್ಲಿ ಮಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಕನ್ನಡ ಹಿತರಕ್ಷಣ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇತ್ತಿಚಗೆ ಆಧುನಿಕತೆಯ ಪ್ರಭಾವ, ಸಾಂಪ್ರದಾಯಿಕ ಕಲೆಗಳ ಬಗ್ಗೆ ಆಸಕ್ತಿಯ ಕೊರತೆ ಮತ್ತು ಯುವ ಪೀಳಿಗೆಯಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವಿನ ಕೊರತೆಯಿಂದಾಗಿ ರಂಗೋಲಿ ಚಿತ್ತಾರ ಕಲೆ ಕಣ್ಮರೆಯಾಗುತ್ತಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಮೂಲಕ ಯುವಕರು ಮುಂದಾಗಬೇಕು. ಗ್ರಾಮದಲ್ಲಿ ಪ್ರತಿ ವರ್ಷ ಮಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ಈ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡು ಬರುತ್ತೇವೆ.
ರಂಗೋಲೆ ಚಿತ್ತಾರವನ್ನು ಉಳಿಸಲು ಕೆಲವು ಮಾರ್ಗಗಳನ್ನ ಕಂಡುಕೊಳ್ಳಬೇಕಿದೆ .ರಂಗೋಲೆ ಚಿತ್ತಾರವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವ ಮೂಲಕ ಯುವ ಪೀಳಿಗೆಯಲ್ಲಿ ಈ ಕಲೆಯನ್ನು ಜನಪ್ರಿಯಗೊಳಿಸಬಹುದಾಗಿದೆ. ರಂಗೋಲೆ ಚಿತ್ತಾರದ ಬಗ್ಗೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಜನರಿಗೆ ಈ ಕಲೆಯನ್ನು ಕಲಿಸಬಹುದು ಮತ್ತೆ ಉಳಿಸಬಹುದು .ಮುಖ್ಯವಾಗಿ ರಂಗೋಲೆ ಚಿತ್ತಾರವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಕಲೆಯನ್ನು ಪ್ರೋತ್ಸಾಹಿಸಬಹುದಾಗಿದೆ.ರಂಗೋಲೆ ಚಿತ್ತಾರ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಅವರಿಗೆ ಬೆಂಬಲ ನೀಡುವ ಮೂಲಕ ಈ ಕಲೆಯನ್ನು ಉಳಿಸಬಹುದಾಗಿದೆ. ಪ್ರತಿ ಹಬ್ಬ ಹರಿದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕು ಇವತ್ತು ಈ ಗ್ರಾಮದಲ್ಲಿ ಉತ್ತಮವಾದ ಕಾರ್ಯ ಮಾಡಿದಂತಾಗಿದೆ ಎಂದರು.
ರಂಗೋಲಿ ಸ್ಪರ್ಧೆಯ ತೀರ್ಪುಗಾರರಾದ ಅರುಣ್ ಜಗದೀಶ್ ಮಾತನಾಡಿ, ರಂಗೋಲಿ ಸ್ಪರ್ಧೆಯು ಮಹಿಳೆಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಅವರ ಕಲಾತ್ಮಕ ಪ್ರತಿಬಿಂಬ ಪ್ರದಿಸಲು ಅವಕಾಶ ನೀಡುತ್ತದೆ ಈ ಸ್ಪರ್ಧೆ ಮಹಿಳೆಯರ ನಡುವೆ ಸಾಮಾಜಿಕ ಸಂಪರ್ಕಗಳನ್ನು ಬೆಳೆಸುತ್ತದೆ ಮತ್ತು ಅವರ ನಡುವೆ ಸೌಹಾರ್ದತೆಯನ್ನು ಉತ್ತೇಜಿಸುತ್ತದೆ.ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರು ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ರಂಗೋಲಿ ಸ್ಪರ್ಧೆಯು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಯುವ ಪೀಳಿಗೆಗೆ ರಂಗೋಲಿಯನ್ನು ಕಲ್ಲಿಸುತ್ತದೆ ಇಂತಹ ರೀತಿಯ ಸ್ಪರ್ಧೆಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ಸಬಲೀಕರಣ ಮತ್ತು ಸಬಲೀಕರಣದ ಅವಕಾಶಗಳನ್ನು ಒದಗಿಸುತ್ತದೆ. ನಿಜವಾಗಲೂ ಇದೊಂದು ಉತ್ತಮವಾದ ಕಾರ್ಯವಾಗಿದೆ ಇದು ಇದೆ ರೀತಿ ಮುಂದುವರೆಯಲಿ ಇಲ್ಲಿನ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವು ತುಂಬಾ ಆಕರ್ಷಣೀಯವಾಗಿವೆ ಎಂದರು..
ಮತ್ತೊಬ್ಬರು ತೀರ್ಪುಗಾರರಾದ ಪುಷ್ಪ ಎಸ್. ಮಾತನಾಡಿ. ಈ ಗ್ರಾಮ ಐತಿಹಾಸಿಕ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ಹಲವಾರು ಜಾತ್ರಗಳು ಪೂಜೆ ಪುನಸ್ಕಾರಗಳು ಹಬ್ಬ ಹರಿದಿನಗಳು ನಿರಂತರವಾಗಿ ನಡೆಯುತ್ತಿರುತ್ತವೆ . ಮಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಿನ್ನೆಲೆ ಇಲ್ಲಿ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿರುವುದು ಉತ್ತಮವಾದ ಕಾರ್ಯವಾಗಿದೆ.. ಚಿತ್ತಾರದ ರಂಗೋಲಿಗಳು, ಶಿವಲಿಂಗದ ರಂಗೋಲೆ. ಕಾರ್ತಿಕೋತ್ಸವ ರಂಗೋಲೆ, ಶ್ರೀ ಕೃಷ್ಣ ಸುಂದರವಾಗಿ ಮೂಡಿ ಬಂದಿವೆ ರಂಗೋಲೆ ಕಲೆಗೆ ಸ್ಪೂರ್ತಿದಾಯಕವಾಗಿದೆ ಎಂದರು.
ರಂಗೋಲಿ ಸ್ಪರ್ಧೆ ಆಯೋಜಕರಾದ ಬಿಸಿ ಸಂಜೀವಮೂರ್ತಿ.ಬಿಸಿ ಸತೀಶಕುಮಾರ್,ಕಾರ್ತಿಕ್ ಎಸ್ ಮೂರ್ತಿ.ತೀರ್ಪುಗಾರರಾದ ಪ್ರಮೀಳಾ ಜಗದೀಶ,ಶಾರದ ವೆಂಕಟೇಶಮೂರ್ತಿ ಸೇರಿದಂತೆ ಗ್ರಾಮಸ್ಥರಾದ ರಂಗನಾಥ್, ಮುಖಂಡರಾದ ಹಜಮತ್ ಮೈಲಾರಪ್ಪ, ಸುರೇಶ್, ರಘು, ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.







