ಹಾವೇರಿ: ಜಯಮೃತ್ಯುಂಜಯ ಸ್ವಾಮೀಜಿ ಡಿಸೆಂಬರ್ 10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಸ್ವಾಮೀಜಿ, ಉದಾಸಿನ ಮಾಡಿದರೆ ಬೇಜಾರು ಆಗ್ತಾ ಇರಲಿಲ್ಲ. ಕೊಡುವುದಕ್ಕೆ ಆಗ್ತಾ ಇರಲಿಲ್ಲ ಅಂದ್ರು ಕೂಡ ಬೇಜಾರ್ ಆಗ್ತಾ ಇರಲಿಲ್ಲ. ಏಕಾಏಕಿ ಕಾನೂನನ್ನು ಮೀರಿ, ಯಾವುದೇ ಅನೌನ್ಸ್ ಮಾಡದೆ ಲಾಠಿ ಚಾರ್ಜ್ ಮಾಡಿರುವ ಡಿಸೆಂಬರ್ 10ನೇ ತಾರೀಖು ಇದೆಯಲ್ಲ ಅದು ನಮ್ಮ ಜನರಿಗೆ ಒಂದು ರೀತಿಯ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ.
ಈ ಎಲ್ಲಾ ಕಾರಣಕ್ಕೋಸ್ಕರ ಮತ್ತೆ ಡಿಸೆಂಬರ್ 10ರಂದು ಕೂಡಿ ಆ ದಿನವನ್ನು ಲಿಂಗಾಯತರ ದೌರ್ಜನ್ಯ ದಿನವೆಂದು ನಾವೆಲ್ಲಾ ಆಚರಣೆ ಮಾಡ್ತೀವಿ. ಅದರ ಹಂಗವಾಗಿ ಬೆಳಗ್ಗೆ 10 ಗಙಟೆಗೆ ಬೆಳಗಾವಿಯಲ್ಲಿರುವ ಗಾಂಧಿನಗರದಿಂದ ಪಂಚಮಸಾಲಿ ಮೌನ ಪಥಸಂಚನ ಮಾಡುತ್ತೇವೆ. ಬಾಯಿಗೆ ಮತ್ತು ಎಡಗೈ ಕರಿಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡುತ್ತೇವೆ.
ಇಡೀ ಕರ್ನಾಟಕದ ಪಂಚಮಸಾಲಿಗಳು, ಎಲ್ಲರು ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಬೇಕು ಅಂತ ಕಳೆದ ಐದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿದ್ದೇವೆ. ಇದು ನ್ಯಾಯಯುತವಾದಂತ ಹೋರಾಟ. ಈ ಹೋರಾಟ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ ಒಂದು ಸಂಕಲ್ಪ ತೊಡಬೇಕು. ಮೀಸಲಾತಿ ಆದೇಶ ಪ್ರಮಾಣ ಪತ್ರ ಸಿಗುವ ತನಕ ಹೋರಾಟ ಕೈ ಬಿಡಬಾರದು ಅಂತ. ಈ ಹಿಂದೆ ಮೊದಲ ಬಾರಿಗೆ ಕಿತ್ತೂರು ಕರ್ನಾಟಕದಲ್ಲಿ ಸುವರ್ಣ ಸೌಧವನ್ನು ಕಟ್ಟಿದ ಮೊದಲ ಅಧಿವೇಶನವನ್ನು ಮಾಡಿದಾಗ ನಾವೇ ಮೊದಲು ಮುತ್ತುಗೆ ಹಾಕಿದ್ದು. ಆದರೆ ಉದಾಸಿ ಅವರು, ಉಮೇಶ್ ಕತ್ತಿ ಅವರು ನಮ್ಮ ಮನವಿ ಪತ್ರವನ್ನು ಸ್ವೀಕರಿಸಿದರು. ಬಳಿಕ ಯಡಿಯೂರಪ್ಪ ಅವರು ಸಿಎಂ ಆದ್ಮೇಲೂ ಸತ್ಯಾಗ್ರಹ ಮಾಡಿದ್ದೀವಿ, ಪಾದಯಾತ್ರೆ ಮಾಡಿದ್ದೀವಿ. ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದಾಗಲು ಹೋರಾಟ ಮಾಡಿದ್ದೀವಿ. ಈ ಹಿಂದೆ ಯಾರೇ ಮುಖ್ಯಮಂತ್ರಿಯಾಗಿದ್ದರು ನಮ್ಮ ಮೇಲೆ ದೌರ್ಜನ್ಯ ಮಾಡಿಲ್ಲ ಎಂದಿದ್ದಾರೆ.





















