ಹಾಸನ: ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿಚಾರಗಳು ಸದ್ದು ಮಾಡ್ತಾ ಇದಾವೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ಒಂದು ಕಡೆಯಾದ್ರೆ, ಈಗ ವಾಚ್ ಜದನ ಬೇರೆ ಶುರುವಾಗಿದೆ. ಕಾರ್ಟಿಯರ್ ಬ್ರ್ಯಾಂಡ್ ವಾಚ್ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಂಘರ್ಷವನ್ನೇ ಏರ್ಪಡಿಸಿದೆ. ಇಬ್ಬರ ನಡುವೆ ಮಾತಿನ ಚಕಮಕಿಯೂ ಜೋರಾಗಿದೆ. ನಿನ್ನೆಯಷ್ಟೇ ಛಲವಾದಿ ನಾರಾಯಣಸ್ವಾಮಿ ಅವರಿಗೆ ಉತ್ತರಿಸಿದ್ದ ಡಿಕೆ ಶಿವಕುಮಾರ್ ಅವರು, ಇದೀಗ ಬಿಜೆಪಿ ನಾಯಕರಿಗೆ ವಾಚ್ ವಿಚಾರವಾಗಿಯೇ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಎಷ್ಟು ವಾಚ್ ಬೇಕಾದರೂ ಕಟ್ಟುವಷ್ಟು ಶಕ್ತಿ ಇದೆ. ನಾನು ಒಂದು ಸಾವಿರ ರೂಪಾಯಿ ವಾಚ್ ಕಟ್ಟುತ್ತೇನೆ. 10 ಲಕ್ಷ ರೂಪಾಯಿ ವಾಚ್ ಕಟ್ಟುತ್ತೇನೆ. ಅದು ನನ್ನ ಸಂಪಾದನೆಯ ಆಸ್ತಿ. ನನ್ನ ವ್ಯವಹಾರ ಏನು, ನನ್ನ ಬದುಕು ಏನೆಂದು ಬಿಜೆಪಿಯವರಿಗೂ ಗೊತ್ತಿದೆ. ಯಾರೂ ಪ್ಯಾಂಟ್ ಹಾಕುತ್ತಾರೆ, ಯಾರೂ ವಾಚ್ ಕಟ್ಟುತ್ತಾರೆ, ಕನ್ನಡಕ ಹಾಕುತ್ತಾರೆ ಅದನ್ನ ಕೇಳುವುದಕ್ಕೆ. ಬರುವುದಿಲ್ಲ. ಅದು ಅವರವರ ವೈಯಕ್ತಿಕ ವಿಚಾರವಾಗಿದೆ. ಕೆಲವರು ಸಾವಿರ ರೂಪಾಯಿ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ.
ಇಡಿ ನೋಟೀಸ್ ವಿಚಾರವಾಗಿ ಮಾತನಾಡಿದ್ದು, ನೋಟೀಸ್ ಓದಿದ್ದೇನೆ. ಲಾಯರ್ ಜೊತೆ ಚರ್ಚಿಸಿ ವಿಚಾರಣೆಗೆ ಹೋಗುವೆ. ನೋಟೀಸ್ ನೀಡುವುದು ಏನಿತ್ತು, ಪಕ್ಷಕ್ಕೆ ಹಣ ಕೊಡದೆ ಯಾರಿಗೆ ಕೊಡೋಣಾ ಎಂದು ಹೇಳಿದರು. ಮಾನವನ ಬದುಕು ಶಾಶ್ವತವಲ್ಲ, ಬಿಟ್ಟು ಹೋಗುವ ಕೆಲಸ ಶಾಶ್ವತ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








