ಬೆಂಗಳೂರು: ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಒಂದೇ ಬ್ರಾಂಡ್ ವಾಚ್ ಅನ್ನು ಧರಿಸಿದ್ದರು. ಆ ವಾಚ್ 42 ಲಕ್ಷದ್ದು ಎಂಬ ಟಾಕ್ ಓಡಾಡಿತ್ತು. ಸಾಕಷ್ಟು ಚರ್ಚೆ ಕೂಡ ಆಯ್ತು. ಬಳಿಕ ಅದಕ್ಕೆ ಡಿಕೆ ಶಿವಕುಮಾರ್ ಅವರು ಉತ್ತರವನ್ನು ನೀಡಿದ್ದರು. ಹಾಗೇ ಅದರ ಬೆಲೆ 42 ಲಕ್ಷ ಅಲ್ಲ 25 ಲಕ್ಷ ಎಂಬುದನ್ನು ಹೇಳಿದ್ದರು. ಇದೀಗ ಛಲವಾದಿ ನಾರಾಯಣಸ್ವಾಮಿ ಆ ವಾಚ್ ಬಗ್ಗೆ ಸೆಷನ್ ನಲ್ಲಿಯೂ ಚರ್ಚೆ ಮಾಡ್ತೀವಿ ಎಂದಿದ್ದಾರೆ. ಅದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾರಾಯಣಸ್ವಾಮಿಗೆ ಇನ್ನು ಅನುಭವ ಇಲ್ಲ. ನಾನು ಲೋಕಾಯುಕ್ತಗೆ ಎಲ್ಲೆಲ್ಲಿ ಫೈಲ್ ಮಾಡಬೇಕು ಅಲ್ಲೆಲ್ಲಾ ಫೈಲ್ ಮಾಡಿದ್ದೀನಿ. ನನ್ನ ವಾಚ್ ಇಲ್ಲಿಯೇ ಇದೆ. ನಂಬರ್ ಕೂಡ ಇದೆ. ನಾನೇನು ಸುಳ್ಳು ಮಾಡಿದ್ರೆ ಇವತ್ತೆ ರಾಜೀನಾಮೆ ಕೊಡ್ತೀನಿ. ಅವರು ರಾಜೀನಾಮೆ ಕೊಡ್ತಾರಾ..? ಸಾಮಾನ್ಯ ಜ್ಞಾನ ಇರಬೇಕು ಮೊದಲು. ಮಾತನಾಡ್ತೀವಿ ಅಂತ ಸುಮ್ಮನೆ ಪಬ್ಲಿಸಿಟಿಗೆ ಮಾತನಾಡುವುದಲ್ಲ. ನಾನು ಅವರಿಗಿಂತ ಹೆಚ್ಚು ಜವಬ್ದಾರಿಯಿಂದ ನಡೆದುಕೊಳ್ಳುವವನು. ಜವಬ್ದಾರಿಯಿಂದ ನಡೆದುಕೊಳ್ಳುವುದನ್ನ ಮೊದಲು ಕಲಿಯಬೇಕು.
ಹೋಗಿ ಲೋಕಾಯುಕ್ತದಲ್ಲಿ ಚೆಕ್ ಮಾಡಿಕೊಳ್ಳಲಿ. ನಾನೇನು ತೋರಿಸಿದ್ದೀನಿ ಅದು ಬೇರೆ ವಿಚಾರ. ಆದರೆ ಲೋಕಾಯುಕ್ತ ಆಫೀಸ್ ದಾಖಲೆ ಎಲ್ಲವನ್ನು ಹೇಳುತ್ತೆ. ಇನ್ ಕಂ ಟ್ಯಾಕ್ಸ್ ಅಫಿಡವಿಟ್ ಕೂಡ ನಿಮಗೆ ಸತ್ಯ ತಿಳಿಸುತ್ತೆ. ಅವರಿಗೆ ಏನು ಗೊತ್ತು. ಈ ವರ್ಷವು ಸಹಿ ಹಾಕಿದ್ದೀನಿ. ಈ ವಿಚಾರ ಸೆಷನ್ ನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಚರ್ಚೆ ಮಾಡಲಿ. ಸಾಮಾನ್ಯ ಜ್ಞಾನ ಅವರಿಗೆ ಇರಬೇಕು. ನಾನೇನು ಅವರಿಗೆ ಇದೆಲ್ಲ ತೋರಿಸಬೇಕು ಅಂತಿಲ್ಲ. ಏನೋ ಕದ್ದಿದ್ದೀವಿ ಎಂಬಂತೆ ಮಾತನಾಡ್ತಾರಲ್ಲ ಅದಕ್ಕೆ ಉತ್ತರ ಕೊಡ್ತಾ ಇರುವುದು ಎಂದಿದ್ದಾರೆ.






