ಹೆಚ್ಚಾದ ಡಿವೋರ್ಸ್ : ದೇವಸ್ಥಾನಗಳಲ್ಲಿ ಮದುವೆ ಮಾಡಿಸದೆ ಇರಲು ಅರ್ಚಕರ ನಿರ್ಧಾರ..!

1 Min Read

 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ಡಿವೋರ್ಸ್ ಸಂಖ್ಯೆಯೇ ಹೆಚ್ಚಾಗ್ತಾ ಇದೆ. ಹೀಗಾಗಿಯೇ ದೇವಸ್ಥಾನದ ಅರ್ಚಕರು ಮದುವೆ ಮಾಡಿಸಬಾರದೆಂದು ನಿರ್ಧಾರ ಮಾಡಿದ್ದಾರೆ.‌ ಯಾಕಂದ್ರೆ ಡಿವೋರ್ಸ್ ಗೆ ಅಂತ ಜೋಡಿಗಳು ಕೋರ್ಟ್ ಗೆ ಹೋದ್ರೆ ಮದುವೆ ಮಾಡಿಸಿದ ಅರ್ಚಕರನ್ನು ಸಾಕ್ಷಿಗಾಗಿ ಕರೆಯುತ್ತಿದ್ದಾರೆ. ಇದರಿಂದ ನೊಂದಿರುವ ಅರ್ಚಕರು ದೇವಸ್ಥಾನಗಳಲ್ಲಿ ಇನ್ಮುಂದೆ ಮದುವೆ ಬೇಡ ಎಂದೇ ನಿರ್ಧಾರ ಮಾಡಿದ್ದಾರೆ.

ಬೆಂಗಳೂರಿನ ಬಹುತೇಕ ದೇವಸ್ಥಾನಗಳಲ್ಲಿ ಮದುವೆ ಮಾಡಿಸುವುದನ್ನು ನಿಲ್ಲಿಸಲಾಗಿದೆ. ಸೋಮೇಶ್ಚರ ದೇವಸ್ಥಾನ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ಪ್ರಸ್ತುತ, ತಹಶಿಲ್ದಾರ್ ಸಮ್ಮುಖದಲ್ಲಿ ನೋಂದಣಿ ಬಳಿಕ ಹಾರ ಬದಲಾವಣೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಹಿನ್ನೆಲೆ ಅರ್ಚಕರೊಬ್ಬರು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಬಳಿ ಮನವಿ ಮಾಡಿಕೊಂಡಿದ್ದು, ದೇವಸ್ಥಾನದಲ್ಲಿ ಮದುವೆಯಾದ ದಂಪತಿ ವಿಚ್ಛೇಧನ ಅಥವಾ ಇತರೆ ಗಂಭೀರ ಸಮಸ್ಯೆಗಳಿಗೆ ಒಳಗಾದಾಗ ಮದುವೆ ಮಾಡಿಸಿದ ಅರ್ಚಕರನ್ನು ಕೋರ್ಟಚ ಮೆಟ್ಟಿಲೇರಿಸುತ್ತಾರೆ. ಆದರೆ ವಿವಿದೆಡೆಯ ಹಲವು ಭಕ್ತಾಧಿಗಳು ಇದೇ ದೇವಸ್ಥಾನದಲ್ಲಿ ಮದುವೆಯಾಗುವ ಹರಕೆ ಹೊತ್ತಿರುತ್ತಾರೆ. ಹೀಗಾಗಿ ಅರ್ಚಕರಿಗೆ ತೊಂದರೆಯಾಗದಂತೆ ಮುಜರಾಯಿ ಇಲಾಖೆ ಕೆಲ ಷರತ್ತುಗಳನ್ನು ವಿಧಿಸಿ, ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಒಪ್ಪಿಗೆ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಡಿವೋರ್ಸಗ ಹೆಚ್ಚಾಗಿರೋದು ಪಾಪ ಅರ್ಚಕರಿಗೆ ಎಂಥಾ ಪರಿಸ್ಥಿತಿಯನ್ನ ತಂದೊಡ್ಡಿದೆ ಎಂಬುದು ಈ ಮನವಿಯಿಂದಾನೇ ತಿಳಿಯುತ್ತಿದೆ. ಎಷ್ಟೋ ಪ್ರೇಮಿಗಳಿಗೆ ಇದು ಸಂಕಷ್ಟಕ್ಕೆ ದೂಡಿದಂತ ನಿರ್ಧಾರವಾಗಿದೆ. ಮನೆಯವರು ಒಪ್ಪದೆ ಇದ್ದಾಗ ಆತ್ಮೀಯರ ಜೊತೆಗೆ ಬಂದು, ದೇವರ ಸನ್ನಿಧಿಯಲ್ಲಿ ಮದುವೆಯಾಗುವುದು ಪ್ರತೀತಿ. ಆದರೆ ಇನ್ಮುಂದೆ ಅದಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

Share This Article