ಡೆವಿಲ್ ಟ್ರೇಲರ್ ರಿಲೀಸ್ : ಧೂಳ್ ಎಬ್ಬಿಸಿದ ದರ್ಶನ್ ಮಾಸ್ ಡೈಲಾಗ್ ಗಳು

1 Min Read

ದರ್ಶನ್ ಡೆವಿಲ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ರೇಣುಕಾಸ್ವಾಮಿ ಕೊಲೆಯಾಗದೆ ಇದ್ದಿದ್ದರೆ ಡೆವಿಲ್ ಸಿನಿಮಾ ಯಾವಾಗಲೋ ರಿಲೀಸ್ ಆಗ್ಬೇಕಿತ್ತು. ಮತ್ತೊಂದು ಹೊಸ ಸಿನಿಮಾಗೂ ಟೈಯಪ್ ಆಗ್ತಾ ಇದ್ದರು. ಆದರೆ ಅವರಿಲ್ಲದೇನೇ ಡೆವಿಲ್ ಸಿನಿಮಾವನ್ನು ರಿಲೀಸ್ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿರುವ ಕಾರಣ ದರ್ಶನ್ ಅವರೇ ಜೈಲಿನಿಂದ ಸೂಚನೆಯನ್ನು ನೀಡಿದ್ದಾರೆ. ಸಿನಿಮಾವನ್ನು ರಿಲೀಸ್ ಮಾಡಲು ಹೇಳಿದ್ದಾರೆ. ಹೀಗಾಗಿ ಡೆವಿಲ್ ತಂಡ ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿ ನಡೆಸಿದೆ.

ಡಿಸೆಂಬರ್ 12ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಇದೀಗ ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ದಿನ ಮೊದಲೇ ಅಂದ್ರೆ ಡಿಸೆಂಬರ್ 11ಕ್ಕೆ ರಿಲೀಸ್ ಆಗ್ತಾ ಇದೆ. ಇಂದು ಅಭಿಮಾನಿಗಳೆಲ್ಲಾ ಕಾಯ್ತಾ ಇದ್ದಂತ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿ ಫ್ಯಾನ್ಸ್ ಅಂತು ಫುಲ್ ಖುಷಿಯಾಗಿದ್ದಾರೆ. ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರಿಗೆ ಹಲವು ಶೇಡ್ ಗಳಿವೆ ಎಂದು ಹೇಳಲಾಗಿತ್ತು. ಟ್ರೇಲರ್ ನಲ್ಲಿ ಅದು ಕಾಣಿಸಿದೆ. ಅದರಲ್ಲೂ ದರ್ಶನ್ ಅವರು ಹೇಳುವ ಮಾಸ್ ಡೈಲಾಗ್ ಗಳಂತು ಸಿಕ್ಕಾಪಟ್ಟೆ ಇದ್ದು, ಮತ್ತೆ ಮತ್ತೆ ಟ್ರೇಲರ್ ನೋಡುವಂತೆ ಮಾಡ್ತಿದೆ.

ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಾ, ಗಳಿಗೆಗೊಂದು ವೇಷ ಹಾಕುತ್ತಾ ದರ್ಶನ್, ತನ್ನ ಹೀರೋಯಿನ್ ಗೆ ಗೊಂದಲ ಮಾಡ್ತಿದ್ದಾರೆ. ದರ್ಶನ್ ಅವರ ಹಲವು ಅವತಾರಗಳನ್ನು ಒಂದೇ ಸಿನಿಮಾದಲ್ಲಿ ನೋಡುವಂತಾಗಿದೆ. ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಎಲ್ಲವೂ ವಾವ್ ಎನ್ನಿಸುವ ರೀತಿ ಇದ್ದು, ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಾ ಇದ್ದೀನಿ ಚಿನ್ನಾ ಎಂಬ ಡೈಲಾಗ್ ಅಂತು ಎಲ್ಲರನ್ನು ಕಾಡಿದೆ. ಯಾಕಂದ್ರೆ ಆದಷ್ಟು ಬೇಗ ದರ್ಶನ್ ಅವರು ಹೊರಗೆ ಬರಲಿ ಅಂತಾನೇ ಫ್ಯಾನ್ಸ್ ಕಾಯ್ತಾ ಇದ್ದಾರೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಡೆವಿಲ್ ಟ್ರೇಲರ್ ಧೂಳೆಬ್ಬಿಸ್ತಾ ಇದೆ.

Share This Article