ರೇಣುಕಾಸ್ವಾಮಿ ತಂದೆ – ತಾಯಿಗೆ ಸಮನ್ಸ್ ಜಾರಿ

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇಂದಿನಿಂದ ವಿಚಾರಣೆ ಆರಮನಭವಾಗಿದ್ದು, ಬಹಳ ಮುಖ್ಯವಾದ ಸಾಕ್ಷಿಗಳನ್ನ ವಿಚಾರಣೆ ನಡೆಸಲಾಗುತ್ತದೆ. ಇದರ ಜೊತೆಗೆ ರೇಣುಕಾಸ್ವಾಮಿ ತಂದೆ – ತಾಯಿಗೂ ಸಮನ್ಸ್ ಜಾರಿ ಮಾಡಿದ್ದಾರೆ.

ರೇಣುಕಾಸ್ವಾಮಿಯ ತಂದೆ – ತಾಯಿ 7 ಮತ್ತು 8ನೇ ಸಾಕ್ಷಿಗಳಾಗಿದ್ದಾರೆ. ಹೀಗಾಗಿ ಅವರನ್ನ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದೆ. ಆದರೆ ಈ ಸಾಕ್ಷಿಗಳ ವಿಚಾರಣೆಗೆ ಆರೋಪಿಗಳ ವಕೀಲರು ವಿರೋಧಿಸಿದ್ದಾರೆ. ಯಾಕಂದ್ರೆ ಸಾಕ್ಷಿಗಳ ವಿಚಾರಣೆ ಈ ಆರಂಭವಾಗಿರುವ ಕಾರಣ, 7-8ನೇ ಸಾಕ್ಷಿಗಳನ್ನು ವಿಚಾರಣೆ ಮಾಡುವುದಕ್ಕೆ ವಿರೋಧ ಮಾಡಿದ್ದಾರೆ. ಸದ್ಯ ಸಮನ್ಸ್ ಜಾರಿಯಾಗಿದ್ದು, ರೇಣುಕಾಸ್ವಾಮಿ ತಂದೆ – ತಾಯಿ ಕೋರ್ಟ್ ಮುಂದೆ ಯಾವ ರೀತಿಯ ಹೇಳಿಕೆಗಳನ್ನ ನೀಡ್ತಾರೆ ಎಂಬುದು ಮುಖ್ಯವಾಗುತ್ತದೆ.

ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳೆಲ್ಲ ಕೋರ್ಟ್ ಮುಂದೆ ಹಾಜರಾಗಿದ್ದರು. ಜಾಮೀನು ಸಿಕ್ಕಿ ಹೊರಗಿರುವವರು ನೇರವಾಗಿ ಕೋರ್ಟ್ ಗೆ ಬಂದು ಹಾಜರಾಗಿದ್ದರೆ, ಜೈಲಲ್ಲಿರುವ ಆರೋಪಿಗಳೆಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಇದರ ನಡುವೆ ಆರೋಪಿಗಳು ಜೈಲಿನ ಕೊಠಡಿಗೆ ಟಿವಿ ಬೇಕು ಎಂಬ ಮನವಿಯನ್ನು ಮಾಡಿದರು. ಕೋರ್ಟ್ ಇದನ್ನ ಪುರಸ್ಕರಿಸಿದೆ‌. ಇನ್ನು ಕೆಲವು ಆರೋಪಿಗಳು ಕೋರ್ಟ್ ಹಲವು ಡಿಮ್ಯಾಂಡ್ ಇಡಲಾಗಿತ್ತು. ಅನುಕುಮಾರ್ ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದರು. ಆದರೂ ಜಡ್ಜ್ ಅದಕ್ಕೆ ಅನುಮತಿ ನೀಡಿಲ್ಲ. ಕೋರ್ಟ್ ನಲ್ಲಿ ಇನ್ನು ವಿಚಾರಣೆ ನಡೆಯುತ್ತಿದೆ, ಹೀಗಾಗಿ ಆ ರೀತಿ ಶಿಪ್ಟ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನ ಹೇಳಿದ್ದಾರೆ.

Share This Article
Enable Notifications OK No thanks