ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಹೆಜ್ಜೆ ಹಾಕಲು ಪ್ಲ್ಯಾನ್ ಮಾಡಿದ್ರಾ ಕೆ.ಎನ್.ರಾಜಣ್ಣ ಪುತ್ರ..?

1 Min Read

ತುಮಕೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಾ ಇದೆ. ಕುರ್ಚಿ ಕದನದ ನಡುವೆ ಇದೀಗ ಕೆ.ಎನ್.ರಾಜಣ್ಣ ಪುತ್ರನ ನಡೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆ.ಎನ್‌.ರಾಜಣ್ಣ ಕಾಂಗ್ರೆಸ್ ಸರ್ಕಾರದಲ್ಲಿಯೇ ಸಚಿವರಾಗಿದ್ದವರು. ಆದರೆ ಆಡಿದ ಒಂದು ಮಾತಿನಿಂದ ಸಚಿವ ಸ್ಥಾನವನ್ನು ಕಳೆದುಕೊಂಡರು. ಸಿಎಂ ಅವರ ಆಪ್ತರಾಗಿದ್ದರು ಕೂಡ ರಾಜಣ್ಣ ತಮ್ಮ ಸ್ಥಾನವನ್ನು ಕಳೆದುಕೊಂಡರು. ಇದರಿಂದ ರಾಜಣ್ಣ ಪುತ್ರ ರಾಜೇಂದ್ರ ಅವರ ಮನಸ್ಸು ನೊಂದಿರುತ್ತೆ. ತನಗೂ ಕಾಂಗ್ರೆಸ್ ನಲ್ಲಿ ಸ್ಥಾನಮಾನ ಸಿಗುವುದು ಅನುಮಾನ, ತಂದೆಯಂತೆ ಮೂಲೆಗುಂಪು ಮಾಡ್ತಾರಾ ಎಂಬ ಅನುಮಾನ ಅವರನ್ನು ಕಾಡಿರಬಹುದು. ಹೀಗಾಗಿಯೇ ಬಿಜೆಪಿ ಕಡೆ ವಾಲಿದರಾ ಎಂಬ ಅನುಮಾನ ಕಾಡಿದೆ.

 

ಯಾಕಂದ್ರೆ ಈಗ ವೈರಲ್ ಆಗಿರುವ ಫೋಟೋ ಹಿಂದೆ ಈ ಪ್ರಶ್ನೆಗಳು ಓಡಾಡುತ್ತಿವೆ. ಯಾಕಂದ್ರೆ ಇತ್ತೀಚೆಗಷ್ಟೇ ಕಾಂಗ್ರೆಸ್ ಪರಿಷತ್ ಸದಸ್ಯರಾದ ಆರ್ ರಾಜೇಂದ್ರ ಅವರು ಮೊನ್ನೆಯಷ್ಟೇ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ನಿನ್ನೆ ಕೇಂದ್ರ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿದ್ದರು. ಈಗ ನೋಡಿದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕರ ಜೊತೆಗೆ ರಾಜೇಂದ್ರ ಅವರು ಮಾತುಕತೆ ನಡೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

 

ಕಳೆದ ತಿಂಗಳು 20ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ರು. ಸಹಕಾರ ಸಮಾವೇಶದ ನೆಪದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ಭೇಟಿಯಲ್ಲಿ ಅಮಿತ್ ಶಾ ಅವರು, ರಾಜೇಂದ್ರ ಅವರ ಕೈಕುಲುಕಿ ಮಾತನಾಡಿದ್ದರು. ಇದೆಲ್ಲವನ್ನು ನೋಡಿದಾಗ ಅಮಿತ್ ಶಾ ಅವರು ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ.

Share This Article
Enable Notifications OK No thanks