ಬೆಂಗಳೂರು: ಪ್ರಜ್ವಲ್ ರೇವಣ್ಣ ಸದ್ಯ ಅತ್ಯಾಚಾರ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಆ ಸಂಬಂಧ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಯು ನಡೆದಿದೆ. ಈ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಈ ವಾದ ಮಂಡನೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣರಿಗೆ ನೀಡಿರುವ ಜೀವಾವಧಿ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟುಕೊಂಡು ಜಾಮೀನು ನೀಡುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ವಾದ ಮಂಡನೆ ಮಾಡಿದರು. ಪ್ರಜ್ವಲ್ ರೇವಣ್ಣ 2024ರಲ್ಲಿ ಏಪ್ರಿಲ್ ತಿಂಗಳಿನಲ್ಲಿ ವಿದೇಶಕ್ಕೆ ತೆರಳಿದ್ದಾಗ ಯಾವುದೇ ಕೇಸ್ ಇರಲಿಲ್ಲ. ಆ್ಯಪಲ್ ಮೊಬೈಲ್ ಅನ್ನು ವಶಕ್ಕೆ ನೀಡಿಲ್ಲವೆಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಆ್ಯಪಲ್ ಮೊಬೈಲ್ ನೀಡುವಂತೆ ಸೆಕ್ಷನ್ 91 ಅಡಿ ನೋಟಿಸ್ ನೀಡಿಲ್ಲ.
ಐಎಂಇಐ ನಂಬರ್ ಆಧರಿಸಿ ಮೊಬೈಲ್ ಕಂಪನಿಯಿಂದ ಮಾಹಿತಿ ಪಡೆಯಲು ಯತ್ನಿಸಿಲ್ಲ. ಸಂತ್ರಸ್ತೆ ದೂರು ದಾಖಲಿಸದೆ 3 ವರ್ಷ ಮೌನವಾಗಿ ಇದ್ದಿದ್ದೇಕೆ. ಒಮ್ಮೆಗೆ ನಾಲ್ಕು ಪ್ರತ್ಯೇಕ ಕ್ರಿಮಿನಲ್ ಕೇಸ್ ಹೇಗೆ ದಾಖಲಾದವು. ರಾಜಕೀಯ ದುರುದ್ದೇಶದಿಂದ ಈ ಕೇಸ್ ಗಳು ದಾಖಲಾಗಿವೆ. ಸಂತ್ರಸ್ತೆಯನ್ನು ಬಳಸಿ ರಾಜ್ಯ ಸರ್ಕಾರ ಕೇಸ ದಾಖಲಿಸಿದೆ. 2019, 21ರಲ್ಲಿ ಅತ್ಯಾಚಾರವಾದರು ಸಂತ್ರಸ್ತೆ 2023 ಕ್ಕೆ ಬಂದಿದ್ದೇಕೆ. ಫಾರ್ಮ್ ಹೌಸ್ಗೆ ಬಂದರು ಆಕೆಯ ಬಟ್ಟೆಗಳನ್ನು ಹಿಂಪಡೆಯಲಿಲ್ಲವೇಕೆ. ಪೊಲೀಸರು ಬಟ್ಟೆಯನ್ನು ಹಿಂಪಡೆದಿರುವುದೆ ಸಂಶಯಾಸ್ಪದ. ಹೀಗಾಗಿ ಎಫ್ಎಸ್ಎಲ್ ಸಾಕ್ಷಿ ಒಪ್ಪುವಂತದ್ದಲ್ಲ ಎಂಬ ವಾದವನ್ನ ಮಂಡಿಸಿದ್ದಾರೆ.







