Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ರೇಕ್ ಫಾಸ್ಟ್ ಮೀಟಿಂಗ್ ಮುಕ್ತಾಯ: ಟ್ವೀಟ್ ಮಾಡಿದ ಸಿದ್ದರಾಮಯ್ಯ

---Advertisement---

ಬೆಂಗಳೂರು: ಕುರ್ಚಿ ಕದನದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ರು. ಈ ಮೀಟಿಂಗ್ ಕಡೆ ಎಲ್ಲರ ಚಿತ್ತ ಇತ್ತು. ಕುತೂಹಲವೂ ಇತ್ತು. ಏನಾದರೂ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲದಿಂದಾನೇ ಎಲ್ಲರೂ ಕಾಯ್ತಾ ಇದ್ರು. ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಮುಕ್ತಾಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

https://x.com/siddaramaiah/status/1994633660289724858?t=W1C1JIv6yY01aEKHozAFmQ&s=19

ಈ ಮೀಟಿಂಗ್ ನಲ್ಲಿ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರೋಣಾ ಎಂಬ ನಿರ್ಧಾರಕ್ಕೆ ಇಬ್ಬರು ಬಂದಿದ್ದಾರೆ. ಇನ್ನು ಟ್ವೀಟ್ ನಲ್ಲಿ, ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಜೊತೆಗೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಸಾರಿದ್ದಾರೆ.

ಅಧಿಕಾರ ಹಂಚಿಕೆ, ಕುರ್ಚಿ ಬಿಟ್ಟು ಕೊಡೋದು ಇದೆಲ್ಲವನ್ನು ಹೊರತು ಪಡಿಸಿ ನೋಡಿದಾಗಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಂದು ಬಾಂಧವ್ಯ ಕಾಣಿಸುತ್ತದೆ. ಕೆಲವೊಮ್ಮೆ ಮನಸ್ತಾಪಗಳು ಬಂದರು ಒಬ್ಬರಿಗೊಬ್ಬರು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಮುಖ್ಯಮಂತ್ರಿಗಳು ಎಂಬ ಮಾತನ್ನೇ ಡಿಕೆ ಶಿವಕುಮಾರ್ ಹೇಳಿರುವ ಸಾಕಷ್ಟು ಉದಾಹರಣೆಗಳು ಇದಾವೆ. ಇದೀಗ ಸಭೆಯ ಬಳಿಕವೂ ಒಗ್ಗಟ್ಟಿನ ಮಂತ್ರವನ್ನು ಸಾರಿದ್ದಾರೆ. ಕುರ್ಚಿ ಕದನಕ್ಕೆ ರಾಜ್ಯದ ನಾಯಕರೇನೋ ಒಂದು ತೀರ್ಮಾನಕ್ಕೆ ಬಂದಾಗಿದೆ. ಇನ್ನು ಹೈಕಮಾಂಡ್ ನಾಯಕರು ಕೂತು ಚರ್ಚೆ ಮಾಡಬೇಕಾಗಿದೆ. ದೆಹಲಿಗೆ ಹೋಗುವ ಮೊದಲು ಇಬ್ಬರು ಕೂತು ಬಗೆಹರಿಸಿಕೊಳ್ಳಿ ಎಂಬ ಮಾತನ್ನ ಹೈಕಮಾಂಡ್ ನಾಯಕರೇ ತಿಳಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now