ಪ್ರಧಾನಿ ಮೋದಿ ಅವರಿಗೆ ವಿಶೇಷ ಬಿರುದು ನೀಡಿದ ಪುತ್ತಿಗೆ ಶ್ರೀಗಳು

1 Min Read

 

ಉಡುಪಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಬಂದಿದ್ದಾರೆ. ಮೋದಿಯವರಿಗಾಗಿ ಲಕ್ಷಾಂತರ ಜನ ನೆರೆದಿದ್ದಾರೆ. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಮಠದ ಶ್ರೀಗಳು ಸಂಸ್ಕೃತದಲ್ಲಿ ಮೋದಿ ಅವರನ್ನ ಹಾಡಿ ಹೊಗಳಿದ್ದಾರೆ. ಈ ವೇಳೆ ಮೋದಿ ಅವರಿಗೆ ವಿಶೇಷವಾದ ಬಿರುದೊಂದನ್ನು ನೀಡಿದ್ದಾರೆ.

ಧರ್ಮ, ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದೆ ಎಂದು ಹಾಡಿ ಹೊಗಳಿದ ಸ್ವಾಮಿಗಳು, ಧರ್ಮ, ರಕ್ಷಣೆಗೆ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದರ ಎಂದು ಶ್ಲಾಘಿಸಿದರು. ಅಲ್ಲದೆ ಪ್ರಧಾನಿ ಮೋದಿ ಅವರಿಗೆ ಭಾರತ ಭಾಗ್ಯವಿದಾತ ಎಂಬ ಬಿರುದನ್ನು ನೀಡಿದರು. ರಾಷ್ಟ್ರ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋ ನೀಡಿ ಪ್ರಧಾನಿಯನ್ನು ಸನ್ಮಾನ ಮಾಡಿದರು.

ಸುಗುಣೇಂದ್ರ ಶ್ರೀಗಳು ಸಹ ಮೋದಿಯವರನ್ನು ಹಾಡಿ ಹೊಗಳಿದರು. ನರೇಂದ್ರ ಮೋದಿ ಅವರು ಸಾಕ್ಷಾತ್ ಅರ್ಜುನನಂತೆ. ವಿಶ್ವದ ನಾಯಕ ಎಂದರು. ಇದೆಲ್ಲವನ್ನು ಸ್ವೀಕರಿಸಿದ ಬಳಿಕ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ, ಕೃಷ್ಣನೂರಿಗೆ ಬಂದದ್ದು ನನ್ನ ಪರಮ ಭಾಗ್ಯ. ಇವತ್ತು ಶ್ರೀಕೃಷ್ಣ, ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ‌. ಕೃಷ್ಣ, ಗೀತೆಯ ಸಂದೇಶವನ್ನು ಯುದ್ಧ ಭೂಮಿಯಲ್ಲಿ ಕೊಟ್ಟದ್ದು, ಅದು ಇಂದಿಗೂ ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಪ್ರತಿ ಯೋಜನೆಯು ಶ್ರೀಕೃಷ್ಣನ ಶ್ಲೋಕದ ಪ್ರೇರಣೆಯಿಂದ ಆಗಿದೆ. ನಮಗೆ ಶಾಂತಿ ಸ್ಥಾಪನೆಯ ಜೊತೆಗೆ ಶಾಂತಿಯ ರಕ್ಷಣೆಯೂ ಗೊತ್ತಿದೆ‌. ಇದು ಹೊಸ ಭಾರತ, ನಾವೂ ಯಾರ ಮುಂದೆಯೂ ಬಗ್ಗಲ್ಲ, ಜಗ್ಗಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.

Share This Article