ಸ್ಮೃತಿ ಮಂದಾನ ಮದುವೆ ನಿಲ್ಲಲು ಅನೈತಿಕ ಸಂಬಂಧವೇ ಕಾರಣವಾಯ್ತಾ..? ಪಲಾಶ್ ತಾಯಿ ಹೇಳಿದ್ದೇನು..?

1 Min Read

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಅದ್ದೂರಿಯಾಗಿ ನಡೆಯಬೇಕಿತ್ತು. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹಂದಿ, ಸಂಗೀತ್ ಎಲ್ಲಾ ಕಾರ್ಯಕ್ರಮದಲ್ಲೂ ಬಹಳ ಖುಷಿಯಿಂದ ಮಿಂದೆದ್ದ ಸ್ಮೃತಿ ಮದುವೆ ತಾಳಿ ಕಟ್ಟುವ ವೇಳೆಗೆ ಎಲ್ಲವೂ ಬದಲಾಗಿತ್ತು. ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಲಘು ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ಅನಾರೋಗ್ಯದಿಂದ ಮದುವೆ ಮುಂದೂಡಿಕೆಯಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಸಲಿ ವಿಚಾರವೇ ಬೇರೆಯಾಗಿದೆ. ಬೇರೆ ಬೇರೆ ಮೂಲಗಳ ಪ್ರಕಾರ ಅವರಿಬ್ಬರ‌ ಮದುವೆ ಮುಂದೂಡಿಕೆಯಾಗುವುದಕ್ಕೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ.

ಪಲಾಶ್ ಅವರಿಗೆ ಸ್ಮೃತಿ ಹೊರತುಪಡಿಸಿ ಬೇರೆ ಸಂಬಂಧವಿತ್ತು ಎನ್ನಲಾಗಿದೆ. ಮದುವೆ ಮನೆಯಲ್ಲಿ ಈ ರೀತಿಯಾದ ವಿಚಾರ ಗೊತ್ತಾದರೆ ಸ್ಮೃತಿ ಮನಸ್ಥಿತಿ ಏನಾಗಬಹುದು. ಅದರಲ್ಲೂ ಸಂಬಂಧ ಹೊಂದಿದ್ದ ಹುಡುಗಿ ಜೊತೆಗೆ ಪಾಲಶ್ ನಡೆಸಿದ ಚಾಟ್ ಸ್ಮೃತಿ ಕೈ ಸೇರಿತ್ತಂತೆ. ಹೀಗಾಗಿಯೇ ಮದುವೆ ಮುಂದೂಡಿಕೆಯಾಗಿದೆ ಎನ್ನಲಾಗಿದೆ. ಇದರ ನಡುವೆ ಪಾಲಶ್ ಅವರ ತಾಯಿ ಈ ಮದುವೆ ನಡೆದೆ ನಡೆಯುತ್ತೆ ಎಂಬ ಮಾತನ್ನ ಹೇಳಿದ್ದಾರೆ.

ಪಾಲಾಶ್ ಸ್ಮೃತಿಯ ತಂದೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಸ್ಮೃತಿ ಮಂದಾನಗಿಂತಲೂ ಪಲಾಶ್​​ ಹೆಚ್ಚು ಹತ್ತಿರವಾಗಿದ್ದಾನೆ. ಸ್ಮೃತಿಯ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಕ್ಕೆ ಮದುವೆ ಮುಂದೂಡಲು ನಿರ್ಧಾರ ಮಾಡಲಾಯ್ತು. ಇನ್ನು ಅರಶಿಣ ಕಾರ್ಯಕ್ರಮದ ಬಳಿಕ ಪಲಾಶ್​ನನ್ನು ಹೊರಗೆ ಹೋಗಲು ಬಿಟ್ಟಿರಲಿಲ್ಲ. ಅವನು ತುಂಬಾ ಅಳುತ್ತಿದ್ದ, ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಹೀಗಾಗಿ ಪಲಾಶ್ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸದ್ಯ ಪಲಾಶ್​​ ಚೇತರಿಸಿಕೊಂಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾನೆ. ಎಲ್ಲವೂ ಸರಿಯಾಗಿ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ. ಆದರೆ ಸ್ಮೃತಿ ಮಂದಾನ ಸೋಷಿಯಲ್ ಮೀಡಿಯಾದಲ್ಲಿ ಪಾಲಶ್ ಜೊತೆಗಿನ ಎಲ್ಲಾ ಫೋಟೋ, ವಿಡಿಯೋ ಡಿಲೀಟ್ ಮಾಡಿ ಶಾಕ್ ನೀಡಿದ್ದಾರೆ.

Share This Article