ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರ್ತಾ ಇದ್ದದ್ದೆ ಅಬಕಾರಿ ಇಲಾಖೆಯಿಂದ. ಆದರೆ ಅದ್ಯಾಕೋ ಈ ಬಾರಿ ಮದ್ಯ ಪ್ರಿಯರು ಬಿಯರ್ ನ ತ್ಯಾಗ ಮಾಡಿದಂತೆ ಇದೆ. ಈ ವರ್ಷ ಅಬಕಾರಿ ಇಲಾಖೆ ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ. ಗ್ಯಾರಂಟಿಗಳಿಗೆ ಹಣ ತುಂಬಿಸುವುದಕ್ಕೆ ಸರ್ಕಾರ ಹಲವು ಮೂಲಗಳನ್ನ ನೋಡ್ತಿದೆ. ಹೀಗಿರುವಾಗ ಎಣ್ಣೆಯಲ್ಲೂ ಲಾಸ್ ಆಗಿದೆ. ಕಳೆದ ಮೂರು ವರ್ಷಗಳಿಂದ ಎಣ್ಣೆ ಬಿಸಿನೆಸ್ ಡಲ್ ಆಗಿದೆ ಎನ್ನಲಾಗಿದೆ.
ಕಳೆದ 7 ತಿಂಗಳ ಅಂಕಿಅಂಶಗಳಂತೆ ಬಿಯರ್ ಹಾಗೂ IML ಮಾರಾಟ ಫುಲ್ ಡಲ್ ಆಗಿದೆ. 2024ರಲ್ಲಿ 279 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, 2025ರಲ್ಲಿ ಕೇವಲ 228 ಲಕ್ಷ ಬಾಕ್ಸ್ಗಳಷ್ಟೇ ಮಾರಾಟವಾಗಿವೆ. ಒಂದು ಬಾಕ್ಸ್ನಲ್ಲಿ ಸುಮಾರು 8 ಲೀಟರ್ ಬಿಯರ್ ಇರುತ್ತದೆ. ಅಂದರೆ ಬರೋಬ್ಬರಿ 51 ಲಕ್ಷ ಬಾಕ್ಸ್ಗಳಷ್ಟು ಬಿಯರ್ ಮಾರಾಟ ಕುಸಿತವಾಗಿವೆ. ಇದೇ ರೀತಿ ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ ಎಲ್ಲಾ ಇಂಡಿಯನ್ ಮೇಡ್ ಲಿಕ್ಕರ್ ಮಾರಾಟದಲ್ಲೂ ಇಳಿಕೆ ಕಂಡುಬಂದಿದೆ. 2024ರ ನವೆಂಬರ್ ಅವಧಿಯವರೆಗೆ 407 ಲಕ್ಷ ಬಾಕ್ಸ್ ಐಎಮ್ಎಲ್ ಮಾರಾಟ ಆಗಿದ್ರೆ ಈ ವರ್ಷ 403 ಲಕ್ಷ ಬಾಕ್ಸ್ಗಳಿಗೆ ಇಳಿದಿದೆ. ಅಂದರೆ 4.36 ಲಕ್ಷ ಬಾಕ್ಸ್ಗಳ ಮಾರಾಟ ಕುಸಿದಿದೆ.
ಎಲ್ಲದಕ್ಕೂ ಆದಾಯ ಮೂಲವಾಗಿದ್ದ ಅಬಕಾರಿ ಇಲಾಖೆಯೇ ನಷ್ಟ ಅನುಭವಿಸುತ್ತಿದೆ ಎಂದರೆ ಬೇರೆ ಯೋಜನೆಗಳಿಗೆ ಹಣ ಹೂಡಿಕೆ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿಯೆ ರಾಜ್ಯದ ಜನರಲ್ಲಿ ಮೂಡುತ್ತದೆ. ಪ್ರತಿ ವರ್ಷ ಏರಿಕೆಯತ್ತಲೇ ಸಾಗುತ್ತಿದ್ದ ಎಣ್ಣೆ ಲಾಭ ಈಗ ಇಳಿಕೆಯಾಗಿದೆ.






