Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

50 ಕೋಟಿ.. 75 ಕೋಟಿ.. ಇಲ್ಲ‌ ಇಲ್ಲ 100 ಕೋಟಿ : ಏನು ನಡೀತಿದೆ ಕಾಂಗ್ರೆಸ್ ನಲ್ಲಿ : ನಾರಾಯಣಸ್ವಾಮಿ ಹೇಳಿದ್ದೇನು..?

---Advertisement---

ಬೆಂಗಳೂರು: ಸದ್ಯ ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿ ಕದನದ ನಡುವೆ ಕುದುರೆ ವ್ಯಾಪಾರವೂ ಸದ್ದು ಮಾಡಿದೆ. ಈಗಾಗಲೇ ಕೋಟಿ ಕೋಟಿ ರೂಪಾಯಿಯಲ್ಲಿ ಡೀಲ್ ಆಗಿದೆಯಂತೆ. ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಹೇಳಿದ್ದು ಹೀಗೆ.

ಕಿತ್ತಾಟಕ್ಕಿಂತ ಹೆಚ್ಚಾಗಿ ಅಲ್ಲಿ ವ್ಯಾಪಾರ ನಡೆಯುತ್ತಾ ಇದೆ. ಮೊದಲು ಕೇಳಿ ಪಟ್ಟಿದ್ದು, ಇಬ್ಬೊಬ್ಬ ಎಂಎಲ್ಎಗೆ 50 ಕೋಟಿ ಅಂತ. ಆದರೆ ಈಗ ಚೌಕಾಸಿ ಹೆಚ್ಚಾಗಿದೆ. ನಮಗೆ 75 ಕೊಡಿ ಬರ್ತಿವಿ ಅಂತ. ಇನ್ನು ಕೆಲವರು 100 ಕೋಟಿವರೆಗೂ ರೀಚ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟಿಲ್ಲ ಒಬ್ಬೊಬ್ಬರಿಗೆ 50 ಕೋಟಿ ಇದೆ. 50 ಕ್ಯಾಶ್ ಅದಾದ್ಮೇಲೆ ಒಂದು ಪ್ಲಾಟ್, ಒಂದು ಫಾರ್ಚೂನರ್ ಕಾರು ಕೊಡ್ತೀವಿ ಎಂಬ ಡೀಲ್ ನಡೀತಾ ಇದೆ ಎಂಬ ಮೆಸೇಜ್ ನನಗೆ ಬಂದಿದೆ.

ನೋಡಿ ಈ ಮೊದಲೆಲ್ಲಾ ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನ ಕುದುರೆ ವ್ಯಾಪಾರ ಮಾಡ್ತಾರೆ ಅಂತ ಕೇಳಿ ಪಟ್ಟಿದ್ವಿ. ಈಗ ತಮ್ಮದೇ ಪಕ್ಷದಲ್ಲಿ ತಮ್ಮದೇ ಸಚಿವರು, ಶಾಸಕರನ್ನು ವ್ಯಾಪಾರ ಮಾಡುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿ ಉದ್ಭವ ಆಗಿದೆ. ಇನ್ನು ಮಮನತ್ರಿ ಸ್ಥಾನ ಬೇಕಾದವರಿ, ಸುರ್ಜೆವಾಲ ಈಗಾಗಲೇ ವ್ಯಾಪಾರ ಶುರು ಮಾಡಿದ್ದಾರಂತೆ. 200 ಕೋಟಿ ಕೊಡಬೇಕಂತೆ ಅವ್ರಿಗೆ. ಪಪ್ಪಿ ಅವರು ಮೊದಲೇ ಹಣ ಕೊಟ್ಟುಬಿಟ್ಟಿದ್ದರಂತೆ‌. ಆಮೇಲೆ ಜೈಲು ಸೇರಿದ್ದಾರೆ. ಇಲ್ಲಿ ಮೊದಲು ಸುರ್ಜೆವಾಲ ಅವರನ್ನ ಅರೆಸ್ಟ್ ಮಾಡಬೇಕು. ವ್ಯಾಪಾರ ಮಾಡ್ತಾ ಇದ್ದಾರೆ ಇಲ್ಲಿ. ಕಾಂಗ್ರೆಸ್ ನಲ್ಲಿಯೇ ಈಗ ಒಂದು ಸಿಎಂ ಪಕ್ಷ ಮತ್ತೊಂದು ಡಿಸಿಎಂ ಪಕ್ಷ‌ ಈ ಪಕ್ಷದಲ್ಲಿರುವವರನ್ನು ಅವರು ಕೊಂಡುಕೊಳ್ಳೋಕೆ, ಅವರನ್ನ ಇವರು ಕೊಂಡುಕೊಳ್ಳುವ ಕೆಲಸವಾಗ್ತಾ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now