ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಅಗ್ನಿಶಾಮಕ ದಳದ ನಿವೃತ್ತ ಅಧಿಕಾರಿ ಮನೆ ಬೀಗ ಮುರಿದು ಚಿನ್ನದ ಒಡವೆ ಹಾಗೂ ಹಣ ದೋಚಿ ಪರಾರಿಯಾಗಿದ್ದ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ನಗರ ಸತ್ ಉಪಾಸಿ ನಗರ ನಿವೃತ್ತ ಅಗ್ನಿಶಾಮಕ ಠಾಣೆಯ ನೌಕರ ಜಯಣ್ಣನ ಇವರ ಮನೆಯಲ್ಲಿ ನವಂಬರ್ 23 ರಂದು ಮದ್ಯಾಹ್ನ 2-30 ಸಮಯದಲ್ಲಿ ಮನೆಯ ಬೀಗ ಮುರಿದು ಒಡವೆ, ನಗದು ಕದ್ದು ಪರಾರಿಯಾಗಿದ್ದ ಈ ಕುರಿತು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳರ ಪತ್ತೆಗಾಗಿ ಜಿಲ್ಲಾ ಎಸ್ಪಿ ಕುಮಾರ್ ಭಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಹಾಗೂ ಚಳ್ಳಕೆರೆ ಡಿವೈಎಸ್ಪಿ ಎಂ. ಜಿ.ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಕೆ. ಕುಮಾರ್ ರವರ ನೇತೃತ್ವದಲ್ಲಿ, ಪಿಎಸ್‌ಐ ಗಳಾದ ಶಿವರಾಜ್ ಜೆ, ಈರೇಶ್, ಧರೇಪ್ಪ ಬಿ.ದೊಡಮನಿ ಹಾಗೂ ಎಎಸ್‌ಐ ರಾಘವರೆಡ್ಡಿ, ಸಿಬ್ಬಂದಿಗಳಾದ ಶ್ರೀನಿವಾಸ್ . ಶಿವಕುಮಾರ್, ವೆಂಕಟೇಶ, ಪರಶುರಾಮ,ಶಿವರಾಜ್, ಶ್ರೀಧರ
ವಸಂತ ಧರಣ್ಯ .ರಮೇಶ. ತಿರುಕಪ್ಪ ತಳವಾರ, ಬಸವರಾಜ ಹಿರೇಮಠ, ತಂಡವನ್ನು ನೇಮಿಸಿದ್ದು, ಆರೋಪಿತರಾದ ಉಮಾಶಂಕರ ರೆಡ್ಡಿ, ಕೊಟ್ನಂಪಲ್ಲಿ, ಗ್ರಾಮ. ಜಗನ್ನಾಥ ಜಗ ತಂದೆ ತಿಮ್ಮಣ, ಕೊಡಿಗೆ ಹಳ್ಳಿ.ನಾಗರಾಜ ನಾಯ್ಕ ಚಿಕ್ಕನಾಯ್ಕನಹಳ್ಳಿ, ತಾಲುಕು ಆರೋಪಿಳನ್ನುವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ರಾಣೆಬೆನ್ನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ 5,50,ಲಕ್ಷರೂ ಮೌಲ್ಯದ 56 ಗ್ರಾಂ, 850 ಮಿಲಿ ತೂಕದ ಬಂಗಾರದ ಆಭರಣಗಳನ್ನು ಹಾಗೂ 100 ಗ್ರಾಂ ನಕಲಿ ಬಂಗಾರವನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












