ರಾಜಕೀಯ ಬೆಳವಣಿಗೆಯ ನಡುವೆ ಪರಪ್ಪನ ಅಗ್ರಹಾರಕ್ಕೆ ಡಿಕೆಶಿ ಭೇಟಿ..!

1 Min Read

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಅದರಲ್ಲೂ ಖುರ್ಚಿ ಕದನ ಜೋರಾಗಿದೆ. ಸಿದ್ದರಾಮಯ್ಯ ಅವರು ನಾನೇ ಪೂರ್ಣಾವಧಿ ಸಿಎಂ ಅಂತಿದ್ದಾರೆ. ಈ ಬಾರಿಯ ಬಜೆಟ್ ಕೂಡ ನಾನೇ ಮಂಡ‌ನೆ ಮಾಡೋದು ಅಂತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರನ್ನ ಸಿಎಂ ಮಾಡಲೇಬೇಕು ಅಂತ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇದೀಗ ಈ ಬೆಳವಣಿಗೆಯ ನಡುವೆ ಡಿಕೆ ಶಿವಕುಮಾರ್ ಅವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ಕನಸು ದೊಡ್ಡಮಟ್ಟದಲ್ಲಿಯೇ ಇದೆ. ಆದರೆ ಅದಕ್ಕೆ ಅಂತ ಶಾಸಕರ ಬೆಂಬಲ ಅತ್ಯಗತ್ಯವಾಗಿದೆ. ಪರಪ್ಪನ ಅಗ್ರಹಾರದಲ್ಲಿಯೂ ಡಿಕೆ ಶಿವಕುಮಾರ್ ಅವರ ಬೆಂಬಲಿತ ಶಾಸಕರು ಇದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಲು ಹೋಗಿದ್ದಾರೆ ಎನ್ನಲಾಗಿದೆ. ಸತೀಶ್ ಸೈಲ್, ವೀರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಸದ್ಯ ಜೈಲಿನಲ್ಲಿದ್ದಾರೆ. ಇವರೆಲ್ಲ ಡಿಕೆಶಿಗೆ ಆಪ್ತ ಬಳಗವೇ ಸರಿ. ಹೀಗಾಗಿ ಅವರನ್ನು ಭೇಟಿಯಾಗಲು ಹೋಗಿದ್ದಾರೆ ಎನ್ನಲಾಗಿದೆ.

ಅದರಲ್ಲೂ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ‌ ಬೆನ್ನಲ್ಲೇ ಡಿಕೆ ಶಿವಕುಮಾರ್ ತಲೆಯಲ್ಲು ನಾನಾ ವಿಚಾರಗಳು ಹರಿದಾಡುತ್ತಿವೆ. ಮನೆಯಲ್ಲಿಯೇ ಕೂತು ಗಾಳ ಉರುಳಿಸುತ್ತಿದ್ದಾರೆ ಎನ್ನಲಾಗಿದೆ. 140 ಶಾಸಕರು ನಮ್ಮವರೆ. ಅವರಿಗೆಲ್ಲ ನಾನು ಅಧ್ಯಕ್ಷ ಎಂಬ ಎಮೋಷನಲ್ ಡೈಲಾಗ್ ಕೂಡ ಹೊಡೆದಿದ್ದಾರೆ. ಅತ್ತ ಡಿಕೆಶಿ ಬಣದವರು ಒಬ್ಬೊಬ್ಬರಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಸಿಎಂ ಅಂದ್ರೆ ಆಯ್ತು ಅವರಿಗೆ ಒಳ್ಳೆಯದೆ ಆಗಲಿ ಎಂಬ ಮಾತನ್ನೆ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೈಕಮಾಂಡ್ ಅದ್ಯಾವಾಗ ಮಧ್ಯ ಪ್ರವೇಶ ಮಾಡುತ್ತೆ ನೋಡಬೇಕಿದೆ.

Share This Article
Enable Notifications OK No thanks