ನವೆಂಬರ್ ಕ್ರಾಂತಿ ಸಂಕ್ರಾಂತಿಗೆ ಶಿಫ್ಟ್ ಆಯ್ತಾ..? ಸತೀಶ್ ಜಾರಕಿಹೊಳಿ ಹೇಳಿದ್ದೇನು..?

1 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಕ್ರಾಂತಿಗಳ ಬಗ್ಗೆ ಚರ್ಚೆಯಾಗಿದ್ದೆ ಜಾಸ್ತಿ. ಸೆಪ್ಟೆಂಬರ್ ಕ್ರಾಂತಿ ಆಗುತ್ತೆ ಅಂದ್ರು ಅದು ಠುಸ್ ಪಟಾಕಿ ಆಯ್ತು. ನವೆಂಬರ್ ಕ್ರಾಂತಿಯಲ್ಲಿ ಖಂಡಿತ ಅಲ್ಲೋಲ ಕಲ್ಲೋಲ ಆಗುತ್ತೆ ಅಂದ್ರು ಅದು ಏನು ವರ್ಕ್ ಆಗ್ತಿರೋ ರೀತಿ ಕಾಣ್ತಿಲ್ಲ. ಮುಂದೆ ಸಂಕ್ರಾಂತಿ ಹಬ್ಬ ಬರ್ತಿದೆ. ಆಗ ಕ್ರಾಂತಿ ಆಗುತ್ತಾ ಎಂಬ ವಿಚಾರಕ್ಕೆ ಸತೀಶ್ ಜಾರಿಹೊಳಿ ಅವರು ಮಾಧ್ಯಮದವರ ಜೊತೆಗೆ ಮಾತನಾಡುವಾಗ ರಿಯಾಕ್ಟ್ ಮಾಡಿದ್ದಾರೆ.

ಸಂಬಂಧಪಟ್ಟವರನ್ನ ಕೇಳಿದ್ರೆ ಅದರ ಬಗ್ಗೆ ಮಾಹಿತಿ ಸಿಗಬಹುದು. ನಾವೂ ಯಾವ ಕ್ರಾಂತಿಯ ಬಗ್ಗೆಯು ಮಾತನಾಡಿಲ್ಲ. ನನಗೆ ಆ ಬಗ್ಗೆ ಗೊತ್ತಿಲ್ಲ ಎಂಬ ಮಾಹಿತಿಯನ್ನ ನೀಡಿದ್ದಾರೆ. ಬೆಳಗಾವಿ ಅಧಿವೇಶನದ ಸಿದ್ಧತೆಗಳ ಬಗ್ಗೆ ಮಾತನಾಡುತ್ತಾ, ಬೆಳಗಾವಿ ಅಧಿವೇಶನಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ಆಗಿವೆ. ಅದರಲ್ಲೇನು ವಿಶೇಷವಿಲ್ಲ. ಆದರೆ ಹಿಂದಿನ ಬಾರಿಯಾದಂತ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡ್ತಾ ಇದಾರೆ ಎಂದು ಹೇಳಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈಗಾಗಲೇ ಅಧ್ಯಕ್ಷ ಸ್ಥಾನದ ತ್ಯಾಗದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ 8 ವರ್ಷ ಇದ್ರು. ಪರಮೇಶ್ವರ್ ಅವರು ಎಂಟು ವರ್ಷ ಮಾಡಿದ್ದರು. ಆ ರೆಕಾರ್ಡ್ ಮುರಿಬೇಕು ಅಂದ್ರೆ ಒಂದ್ ವರ್ಷ ಜಾಸ್ತಿಯಾಗಬೇಕಲ್ವಾ. ಆಸೆ ಎಲ್ಲರಿಗೂ ಇದ್ದೆ ಇರುತ್ತೆ. 90 ಮಾರ್ಕ್ಸ್ ಒಬ್ಬ ತಗೊಂಡ್ರೆ ನಾನು ಅದ್ಕಿಂತ ಹೆಚ್ಚು ತೆಗೆದುಕೊಳ್ಳಬೇಕು ಎಂಬುದು ಎಲ್ಲರಿಗೂ ಇದ್ದೆ ಇರುತ್ತಲ್ವಾ. ಹಾಗೆ ಇರಬಹುದು. ಇದನ್ನ ಸಂಬಂಧ ಪಟ್ಟವರನ್ನು ಕೇಳಿದ್ರೆನೆ ಚೆಂದ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.

Share This Article