ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಷ್ ಗೆ ಜಾಮೀನು..!

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಷ್ ಗೆ ಐದು ದಿನಗಳ ಕಾಲ ಜಾಮೀನು ಸಿಕ್ಕಿದೆ. ಪ್ರದೂಶ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದಾರೆ. ಇದೀಗ 57ನೇ ಸಿಸಿಹೆಚ್ ಕೋರ್ಟ್ ಪ್ರದೂಶ್ ಗೆ ಜಾಮೀನು ನೀಡಿದೆ. ಪ್ರದೂಶ್ ಅವರ ತಂದೆಯ ಕಾರ್ಯಗಳನ್ನ ಮಾಡುವುದಕ್ಕೆ ಜಾಮೀನು ನೀಡಲಾಗಿದೆ.

ಪ್ರದೂಶ್ ಎರಡನೇ ಬಾರಿಗೆ ಜೈಲು ಸೇರಿದ ಮೇಲೆ ಅವರ ತಂದೆ ನಿಧನರಾಗಿದ್ದರು‌. ಕಳೆದ ಅಕ್ಟೋಬರ್ ನಲ್ಲಿ ಎಲ್ಲರನ್ನು ಬಿಟ್ಟು ಅಗಲಿದ್ದರು. ಹೀಗಾಗಿ ಪ್ರದೂಶ್ ಗೆ ಕೋರ್ಟ್ 20 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ತಂದೆಯ ನಿಧನದ ಕಾರ್ಯವನ್ನೆಲ್ಲ ಮುಗಿಸಿ, ವಾಪಾಸ್ ಬರುವಮನತೆ ಸೂಚನೆ ನೀಡಿತ್ತು. ಅದರಮನತೆ 20 ದಿನಗಳು ಕಳೆದ ಬಳಿಕ ಪ್ರದೂಶ್ ಜೈಲಿಗೆ ವಾಪಾಸ್ ಆಗಿದ್ದರು. ಆದರೆ ತಂದೆಯ ಪುಣ್ಯ ಸ್ಮರಣೆ ಸೇರಿದಂತೆ ಹಲವು ಕೆಲಸಗಳು ಇರುವ ಕಾರಣ ಮತ್ತೆ ಐದು ದಿನಗಳ ಕಾಲ ಅನುಮತಿ ನೀಡಲಾಗಿದೆ.

ಪ್ರದೂಶ್ ಅವರ ಪರ ವಕೀಲರು ಕೋರ್ಟ್ ಅರ್ಜಿ ಸಲ್ಲಿಕೆ ಮಾಡಿ ಮನವಿ ಮಾಡಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಐದು ದಿನಗಳ ಕಾಲ ಮತ್ತೆ ಜಾಮೀನನ್ನು ನೀಡಿದೆ. ನವೆಂಬರ್ 18 ರಿಂದ ನ.22ರ ವರೆಗೆ ಜಾಮೀನು ಮಂಜೂರು ಮಾಡಿದ್ದು, ಅವಧಿ ಮುಗಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ಮರಳುವಂತೆ ಸೂಚಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಸುಪ್ರೀಂ ಕೋರ್ಟ್ ಅದಕ್ಕೆ ಸೊಪ್ಪು ಹಾಕಿಲ್ಲ. ದರ್ಶನ್ ಹಾಸಿಗೆ, ದಿಂಬಿಗಾಗಿ ಕೋರ್ಟ್ ನಲ್ಲಿ ಹೋರಾಟ ಮಾಡ್ತಾ ಇದ್ದಾರೆ.

Share This Article